ಪಾರ್ಟಿ ಗಯೀ ತೇಲ್ ಲೇನೆ: ಮ.ಪ್ರ. ಕೈ ಶಾಸಕನಿಂದ ಪಕ್ಷಕ್ಕೆ ಅವಮಾನ
Team Udayavani, Oct 23, 2018, 3:47 PM IST
ಇಂದೋರ್ : ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರೋರ್ವರು ತನ್ನ ಪಕ್ಷವನ್ನೇ ಅವಮಾನಿಸುತ್ತಾ ತನಗೆ ಮತ ಹಾಕುವಂತೆ ಮತದಾರರನ್ನು ಓಲೈಸಿದ ವಿಡಿಯೋ ಚಿತ್ರಿಕೆಯೊಂದು ವೈರಲ್ ಆಗಿದೆ.
ಕಾಂಗ್ರೆಸ್ ಶಾಸಕ ಜಿತು ಪಟ್ವಾರಿ ಅವರು “ಮೇರಾ ಖಯಾಲ್ ರಖ್ನಾ, ಮೇರಿ ಇಜ್ಜತ್ ರಖ್ನಾ, ಪಾರ್ಟಿ ಗಯೀ ತೇಲ್ ಲೇನೇ (ಪಕ್ಷವನ್ನು (ಕಾಂಗ್ರೆಸ್) ಬದಿಗಿಡಿ; ನನಗೆ ಮತಹಾಕಿ, ನನ್ನ ಮಾನ ಕಾಪಾಡಿ)’ ಎಂದು ತನ್ನ ಪಕ್ಷವನ್ನೇ ಅವಮಾನಿಸುತ್ತಾ ಮತದಾರರಲ್ಲಿ ಮತಕ್ಕಾಗಿ ಮನವಿ ಮಾಡುವ ವಿಡಿಯೋ ಚಿತ್ರಿಕೆಯು ಇದೀಗ ಕಾಂಗ್ರೆಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದೆ.
ಶಾಸಕ ಪಟ್ವಾರಿ ಅವರು ಮನೆಮನೆಗೆ ತೆರಳಿ ಮತದಾರರನ್ನು ಅವರ ಮನೆ ಬಾಗಿಲಲ್ಲೇ ಭೇಟಿಯಾಗಿ ತನಗಾಗಿ ಮತ ಯಾಚಿಸುವಾಗ ಈ ಮಾತುಗಳನ್ನು ಹೇಳಿದ್ದಾರೆ. ವಿಶೇಷವೆಂದರೆ ಪಟ್ವಾರಿ ಅವರಿ ಮಧ್ಯ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷರೂ ಹಾಲಿ ಶಾಸಕರೂ ಆಗಿದ್ದಾರೆ.
ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ವೈರಲ್ ಆಗಿರುವ ಶಾಸಕ ಪಟ್ವಾರಿ ಅವರ ವಿಡಿಯೋ ಇರಿಸುಮುರಿಸು ಉಂಟು ಮಾಡಿದೆ ಮತ್ತು ಆ ಕಾರಣಕ್ಕಾಗಿ ಅದು ಪಟ್ವಾರಿ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.