ಬಂಗಾರದೊಡವೆ ಬೇಕೆ ನೀರೇ?

Team Udayavani, Oct 24, 2018, 6:00 AM IST

x-6.jpg

ಆಭರಣ ಲೋಕಕ್ಕೆ ದಿನಕ್ಕೊಂದು ಡಿಸೈನ್‌ ಪರಿಚಯವಾಗುತ್ತದೆ. ಅದ್ದೂರಿ ಪ್ರಚಾರದೊಂದಿಗೆ ಪರಿಚಯವಾದ ಡಿಸೈನ್‌, ಒಂದೇ ವಾರದಲ್ಲಿ ಕಣ್ಮರೆಯಾಗಿರುತ್ತದೆ. ವಾಸ್ತವ ಹೀಗಿದ್ದರೂ, ಕೆಲವು ಡಿಸೈನ್‌ಗಳು ವರ್ಷಗಳ ಕಾಲ ನೆನಪಲ್ಲಿ ಉಳಿದುಬಿಡುತ್ತವೆ. ಅಂಥ ಕೆಲವು ಡಿಸೈನ್‌ಗಳು ಮತ್ತು ಅದರ ವೈಶಿಷ್ಟéದ ಕುರಿತು ನಾಲ್ಕು ಮಾತು…

ಆಭರಣ ಜಗತ್ತಿನಲ್ಲಿ ಹೊಸ ಡಿಸೈನ್‌ಗಳ ಆಯುಷ್ಯ ಅತಿ ಕಡಿಮೆ ಅವಧಿಯದ್ದು. ಆದರೆ, ಕೆಲವು ಡಿಸೈನ್‌ಗಳು ಎಂದೆಂದಿಗೂ ತಮ್ಮ ಹೊಳಪು ಕಳೆದುಕೊಳ್ಳುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ. ಅವುಗಳಲ್ಲಿ ಚಾಕರ್‌ ನೆಕ್ಲೆಸ್‌, ಇಯರ್‌ಕಫ್ನಂಥ ಆಭರಣಗಳು ಮುಖ್ಯವಾದುವು. ಈ ಒಡವೆಗಳು ಕೇವಲ ಅಲಂಕಾರವನ್ನಷ್ಟೇ ಪ್ರತಿನಿಧಿಸುವುದಲ್ಲ, ಅದು ಒಂದು ಸುಸಂಪನ್ನ ಅಭಿರುಚಿಯ ಕೈಗನ್ನಡಿಯೂ ಹೌದು. ಈ ಜ್ಯುವೆಲರಿ ಆಯ್ಕೆ, ಫ್ಯಾಷನ್‌ ಜಗತ್ತಿಗೆ ನೀವೆಷ್ಟು ಬೇಗ ಅಪ್‌ಡೇಟ್‌ ಆಗಿದ್ದೀರೆಂದು ಸಾರುತ್ತದೆ. ಮಹಿಳೆಯರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಒಡವೆಗಳು ಇಲ್ಲಿವೆ. 

1. ದೊಡ್ಡ ಏಕರತ್ನಾಭರಣಗಳು 
ಹೊಸ ವಿನ್ಯಾಸದ, ವಜ್ರದ ಹಾಗಿರುವ ಆಶ್ಚರ್‌, ಎಮರಾಲ್ಡ್‌ನಂಥ ರತ್ನಗಳ ಆಭರಣಗಳು ಎಂದೆಂದಿಗೂ ಹೊಸದರಂತೆ ಇರುತ್ತವೆ. ಈ ರೀತಿಯ ಫ್ಯಾಷನ್‌, ವಿಶೇಷವಾಗಿ ನಿಶ್ಚಿತಾರ್ಥದ ಉಂಗುರಗಳಿಗೆ ಹೊಂದುತ್ತವೆ. ಇದೇ ಮಾದರಿಯ ಬಳೆಗಳು, ಮಲ್ಟಿಲೈನ್ಸ್‌ ನೆಕ್ಲೆಸ್‌ಗಳು ಫ್ಯಾಷನ್‌ಪ್ರಿಯರ ಅಚ್ಚುಮೆಚ್ಚಿನ ಒಡವೆಗಳು.  

2. ವಜ್ರಲೇಪಿತ ಆಭರಣಗಳು
ಡಿಸೈನ್‌ ಯಾವುದೇ ಇರಲಿ, ವಜ್ರದ ಒಡವೆಗಳು ಸದಾಕಾಲ ಮುಂಚೂಣಿಯಲ್ಲಿರುವ ಟ್ರೆಂಡ್‌. ಒಂಟಿ ರೇಖೆಯ ಅಥವಾ ಗೆರೆಯ ವಜ್ರದ ಕೊರಳ ಸರ ಮತ್ತು ಬಳೆಗಳು ಯುವತಿಯರನ್ನು ಆಕರ್ಷಿಸುತ್ತವೆ. ಸಿಂಪಲ್‌ ಆಗಿರುವ ಕಾರಣ, ಪ್ರತಿದಿನ ತೊಡಬಹುದಾದ್ದರಿಂದ ಇವು ಎಲ್ಲರಿಗೂ ಇಷ್ಟವಾಗುತ್ತದೆ. 

3. ಚಾಕರ್‌ ನೆಕ್ಲೆಸ್‌
 ಮದುವೆ ಸಮಾರಂಭಗಳಲ್ಲಿ ಎಲ್ಲರ ಗಮನ ಸೆಳೆಯುವ ಆಭರಣ ಇದು. ದಿರಿಸಿಗೆ ತಕ್ಕಂತೆ ಧರಿಸಿದರೆ, ಕೊರಳಿನ ಅಂದ ಇನ್ನೂ ಹೆಚ್ಚುತ್ತದೆ. ಸರಕ್ಕೆ ಅಂಟಿಕೊಂಡಂತೆ ಡೈಮಂಡ್‌ ಅಥವಾ ಮಧ್ಯ ಭಾಗದಲ್ಲಿ ದೊಡ್ಡ ಹರಳುಗಳಿದ್ದರೆ ಹೆಚ್ಚು ಸೂಕ್ತ. ಆಯ್ಕೆ ಮಾಡುವಾಗ ಅಳತೆಗೆ ತಕ್ಕಂತೆ, ದಿರಿಸಿಗೆ ಹೊಂದುವಂತೆ ಇರಲಿ. ಅತ್ಯಂತ ಉದ್ದದ ಗೆರೆಗಳುಳ್ಳ ಚಾಕರ್‌ ನೆಕ್‌ಲೆಸ್‌ಗಳು ಗ್ರಾಂಡ್‌ ಲುಕ್‌ ಕೊಟ್ಟರೂ, ಆಕರ್ಷಣೆಯಲ್ಲಿ ಪ್ರಖರತೆ ಇರುವುದಿಲ್ಲ. 

4. ಇಯರ್‌ ಕಪ್ಸ್
ತರುಣಿಯರ ಅಭಿರುಚಿಗೆ ತಕ್ಕಂಥ ಇಯರ್‌ ಕಪ್ಸ್ ಡಿಸೈನ್‌ಗಳು ಹೊಸ ಟ್ರೆಂಡ್‌ ಸೃಷ್ಟಿಸಿವೆ. ವಿವಿಧ ಪ್ರಾಣಿಗಳ, ಹೂವಿನ ಚಿತ್ತಾರವಿರುವ, ಹರಳುಗಳ ಹೊರತಾಗಿಯೂ ಅರ್ಧ ಚಂದ್ರ, ಪತಂಗ, ಸುರುಳಿ, ಹಕ್ಕಿ-ರೆಕ್ಕೆಯ ಡಿಸೈನ್‌ಗಳು ವಿಶೇಷವಾಗಿ ಕಣ್ಮನ ಸೆಳೆಯುತ್ತವೆ. ಮಲ್ಟಿ ಲೇಯರ್‌ಗಳು ಸಹ ಮುಂಚೂಣಿಯಲ್ಲಿವೆ.  

ಯಾವುದು ಸೂಕ್ತ?
ಭಾರತೀಯ ಹೆಂಗಸರ ಚರ್ಮಕ್ಕೆ ಎಲ್ಲಾ ನಮೂನೆಯ ಬಣ್ಣದ ಜ್ಯುವೆಲರಿಗಳೂ ಹೊಂದುತ್ತವೆ. ನೇರಳೆ ಮಿಶ್ರಿತ ಕೆಂಪು ಬಣ್ಣ, ತಿಳಿನೀಲಿ, ಹಸಿರು, ಹಸಿರುಮಿಶ್ರಿತ ನೀಲಿ, ಬೂದು ಬಣ್ಣದ ಕಾಂಬಿನೇಷನ್‌ಗಳು ಭಾರತೀಯ ನಾರಿಯರಿಗೆ ಸೂಕ್ತ ಎನ್ನುವುದು ಫ್ಯಾಷನ್‌ ಡಿಸೈನರ್‌ಗಳ ಅಭಿಪ್ರಾಯ. 

ಎಡೆಯೂರು ಪಲ್ಲವಿ

ಟಾಪ್ ನ್ಯೂಸ್

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.