ಭದ್ರತೆ, ಸುರಕ್ಷೆ ತಂತ್ರಜ್ಞಾನ ಎಕ್ಸ್‌ಪೋಗೆ ಚಾಲನೆ
Team Udayavani, Oct 24, 2018, 12:32 PM IST
ಬೆಂಗಳೂರು: ಇನ್ಫೋನಿಟಿ ಎಕ್ಸ್‌ಪೊಸಿಷನ್ಸ್ ವತಿಯಿಂದ ನಗರದ ನಿಮ್ಹಾನ್ಸ್ ಕನ್ವೆಂಕ್ಷನ್ ಸೆಂಟರ್‌ನಲ್ಲಿ “ಅಗ್ನಿ ಅನಾಹುತ ಸುರಕ್ಷತಾ ತಂತ್ರಜ್ಞಾನ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಉಪಕರಣಗಳ’ ಪ್ರದರ್ಶನ ಮೇಳ ನಡೆಯುತ್ತಿದೆ.
ಮೇಳದಲ್ಲಿ 15ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ತಮ್ಮ ಭದ್ರತಾ ಉಪಕರಣಗಳೊಂದಿಗೆ ಭಾಗವಹಿಸಿವೆ. ಜತೆಗೆ ಜನಸಾಮಾನ್ಯರಲ್ಲಿ ಅಗ್ನಿ ಅವಘಡ ಮತ್ತು ರಕ್ಷಣೆ, ಖಾಸಗಿ ಭದ್ರತೆ, ಸೈಬರ್ ಅಪರಾಧಗಳು, ಸಂಚಾರ ನಿಯಮ ಮತ್ತು ನಿಯಂತ್ರಣದಂತ ಅನೇಕ ವಿಷಯಗಳ ಬಗೆಗೆ ಅರಿವು ಮೂಡಿಸಲಾಗುತ್ತಿದೆ.
ಮೂರು ದಿನಗಳ ಕಾಲ ನಡೆಯುತ್ತಿರುವ ಈ ಪ್ರದರ್ಶನ ಮೇಳಕ್ಕೆ ಅಗ್ನಿ ಹಾಗೂ ತುರ್ತು ಸೇವೆಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುನಿಲ್ ಅಗರ್‌ವಾಲ್ ಸೋಮವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಅಗ್ನಿ ಅವಘಡ ಹಾಗೂ ತುರ್ತು ಸೇವೆಗಳನ್ನು ಇನ್ನಷ್ಟು ಉತ್ತಮಗೊಳಿಸುವ ನೂತನ ತಂತ್ರಜ್ಞಾನ ಅತ್ಯವಶ್ಯಕ.
ಹೊಸ ಆವಿಷ್ಕಾರಗಳನ್ನು ಪರಿಶೀಲಿಸಿ ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಭದ್ರತೆಯನ್ನು ಇನ್ನಷ್ಟು ಬಲ ಪಡಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸಾಕಷ್ಟು ಉಪಯುಕ್ತ ತಂತ್ರಜ್ಞಾನ ಮಾದರಿ ಉಪಕರಣಗಳು ಈ ಮೇಳದಲ್ಲಿವೆ. ಇವುಗಳ ಅಳವಡಿಕೆ ಹಾಗೂ ಬಳಕೆಗೆ ಬಿಲ್ಡರ್ ಅಸೋಸಿಯೇಷನ್‌ಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.