ಬಿಟ್‌ಕಾಯಿನ್‌ ಎಟಿಎಂ ಸ್ಥಾಪಕ ಸೆರೆ


Team Udayavani, Oct 24, 2018, 12:32 PM IST

bit-coin.jpg

ಬೆಂಗಳೂರು: ಎಚ್‌ಎಎಲ್‌ ಏರ್‌ಪೋರ್ಟ್‌ ರಸ್ತೆಯ ಕೆಂಪ್‌ ಫೋರ್ಟ್‌ ಮಾಲ್‌ನಲ್ಲಿ ನಿರ್ಬಂಧಿತ  ಕ್ರಿಪ್ಟೋಕರೆನ್ಸಿ “ಬಿಟ್‌ಕಾಯಿನ್‌’ ಎಟಿಎಂ ಕಿಯೋಸ್ಕ್ ಚಟುವಟಿಕೆಯನ್ನು ಬಂದ್‌ ಮಾಡಿಸಿರುವ ನಗರ ಸೈಬರ್‌ ಕ್ರೈಂ ಪೊಲೀಸರು, ಪ್ರಕರಣದ ಆರೋಪಿ ಬಿ.ವಿ ಹರೀಶ್‌ ಎಂಬಾತನನ್ನು ಬಂಧಿಸಿದ್ದಾರೆ.

ಅ.14ರಂದು ಕೆಂಪ್‌ ಫೋರ್ಟ್‌ ಮಾಲ್‌ನಲ್ಲಿ ಎಟಿಎಂ ಕಿಯೋಸ್ಕ್ ಅಳವಡಿಸಿ ವ್ಯವಹಾರ ಆರಂಭಿಸಿತ್ತು. ಈ ಕುರಿತು  ಬ್ಯಾಂಕಿಂಗ್‌ ವಲಯದಿಂದ ದೂರುಗಳು ಬಂದ ಕಾರಣ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಸಿಸಿಬಿ ಪೊಲೀಸರು, ಮಂಗಳವಾರ ಆರೋಪಿಯ ಹರೀಶ್‌ನನ್ನು ಬಂಧಿಸಿದ್ದಾರೆ.

ಜತೆಗೆ, 1.79 ಲಕ್ಷ ರೂ. ನಗದು, ಎರಡು ಲ್ಯಾಪ್‌ಟಾಪ್‌, ಒಂದು ಮೊಬೈಲ್‌ ಫೋನ್‌, 3 ಕ್ರೆಡಿಟ್‌ಕಾರ್ಡ್‌ಗಳು, 5 ಡೆಬಿಟ್‌ಕಾರ್ಡ್‌, ಕಂಪನಿಯ ಸೀಲ್‌ಗ‌ಳು, ಒಂದು ಕ್ರಿಪೊಕರೆನ್ಸಿಯ ಉಪಕರಣ, ಕಂಪನಿಯ 5 ಸೀಲ್‌ಗ‌ಳನ್ನು ವಶಪಡಿಸಿಕೊಂಡಿದ್ದಾರೆ.

ತುಮಕೂರು ಮೂಲದ ಆರೋಪಿ ಹರೀಶ್‌ ಬಿಸಿಎ ಪದವೀಧರನಾಗಿದ್ದು 2014ರಿಂದ ಬಿಟ್‌ ಕಾಯಿನ್‌ ವ್ಯವಹಾರದ ಬಗ್ಗೆ ಆಸಕ್ತಿ ಹೊಂದಿದ್ದ. ಅದರಂತೆ, ತನ್ನ ಸ್ನೇಹಿತನ ಜತೆಗೂಡಿ ಇತ್ತೀಚೆಗೆ ರಾಜಾಜಿನಗರ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿರುವ ಯುನೋಕಾಯಿನ್‌ ಪ್ರೈ.ಲಿನ ಹೆಸರಿನ ಕಂಪನಿ ತೆರೆದಿದ್ದಾನೆ.

ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಎಂದು ಹೇಳಿಕೊಂಡಿರುವ ಬಿ.ವಿ ಹರೀಶ್‌ ನನ್ನು ಮತ್ತಷ್ಟು ವಿಚಾರಣೆ ನಡೆಸುವ ಸಲುವಾಗಿ 7 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ನೋಟುಗಳ ಅಮಾನೀಕರಣದ ನಂತರ ಬಿಟ್‌ಕಾಯಿನ್‌ ವ್ಯವಹಾರಗಳು ದೇಶದಲ್ಲಿ ಗರಿಗೆದರಿದ್ದವು ಎಂದು ಕೇಂದ್ರ ಹಣಕಾಸು ಇಲಾಖೆ ಹೇಳಿತ್ತು.

ಬಿಟ್‌ಕಾಯಿನ್‌ ವ್ಯವಹಾರವೂ ಕಾನೂನು ಬಾಹಿರ ಅದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿತ್ತು. ಈ ನಡುವೆಯೂ, ಬ್ಲಾಕ್‌ಚೈನ್‌ ಅಸೆಟ್‌ ಕಂಪನಿಯಾದ ಯುನೋಕಾಯಿನ್‌, ನಗರದಲ್ಲಿ ಬಿಟ್‌ಕಾಯಿನ್‌ ಕಿಯೋಸ್ಕ್ ತೆರೆದು ಭಾರತೀಯ ಹಣದಲ್ಲಿ ವ್ಯವಹಾರ ನಡೆಸಿ ಬಿಟ್‌ಕಾಯಿನ್‌ ಖರೀದಿಗೆ ಅವಕಾಶ ಕಲ್ಪಿಸಿದ್ದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.