ದುನಿಯಾ ವಿಜಯ್ ವಿರುದ್ಧ ಸಿಡಿದೆದ್ದ ಮಗಳು ಮೋನಿಕಾ
Team Udayavani, Oct 24, 2018, 12:32 PM IST
ಬೆಂಗಳೂರು: ಜಿಮ್ ತರಬೇತುದಾರೊಬ್ಬರನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಪ್ರಕರಣ ತಣ್ಣಗಾಗುವ ಮುನ್ನವೇ ನಟ ದುನಿಯಾ ವಿರುದ್ಧ ಮಗಳ ಮೇಲೆಯೇ ಹಲ್ಲೆ ನಡೆಸಿದ ಗಂಭೀರ ಆರೋಪ ಪ್ರಕರಣ ದಾಖಲಾಗಿದೆ.
ಮಗಳು ಮೊನಿಕಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಆರೋಪ ಸಂಬಂಧ ನಟ ವಿಜಯ್ ಹಾಗೂ ಕೀರ್ತಿಗೌಡ ಸೇರಿ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವಿಜಯ್ ಅವರ ಹಿರಿಯ ಪುತ್ರಿ ಮೋನಿಕಾ ಸೋಮವಾರ ನೀಡಿರುವ ವಿಜಯ್, ಕೀರ್ತಿಗೌಡ, ಹೇಮಂತ್, ವಿನೋದ್, ಮಹಮ್ಮದ್ ಎಂಬುವವರ ವಿರುದ್ಧ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕಾರಿನ ಕೀ ಹಾಗೂ ಅಗತ್ಯ ವಸ್ತುಗಳನ್ನು ತರುವ ಸಲುವಾಗಿ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆನಮ್ಮ ತಂದೆ ವಿಜಯ್ ವಾಸಮಾಡುತ್ತಿರುವ ಮನೆಗೆ ತೆರಳಿದ್ದೆ. ಈ ವೇಳೆ ತಂದೆ ವಿಜಯ್, ಕೀರ್ತಿಗೌಡ ಸೇರಿ ಉಳಿದ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಿಂದ ಒದಿದ್ದಾರೆ.
ಅಷ್ಟೇ ಅಲ್ಲದೆ ನನ್ನ ತಲೆ ಹಿಡಿದುಕೊಂಡು ಗೋಡೆಗೆ ಬಲವಾಗಿ ಹೊಡೆಸಿದ್ದಾರೆ ಎಂದು ಮೋನಿಕಾ ದೂರಿನಲ್ಲಿ ಆರೋಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯ್ ವಿರುದ್ಧದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಪೂಟೇಜ್ಗಳನ್ನು ಸಿಕ್ಕಿವೆ. ತನಿಖಾಧಿಕಾರಿ ಪರಿಶೀಲಿಸಿದ್ದು ತನಿಖೆ ಮುಂದುವರಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದರು.
ಜಾಮೀನಿನಿಂದ ಹೊರಗೆ: ಅಂಬೇಡ್ಕರ್ ಭವನದಲ್ಲಿ ಸೆ.22ರಂದು ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್ ಸ್ಫರ್ಧೆಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ವೇಳೆ ಜಿಮ್ ತರಬೇತುದಾರ ಮಾರುತಿ ಗೌಡ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಆತನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ವಿಜಯ್ ಸೇರಿ ನಾಲ್ವರು ಆರೋಪಿಗಳನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ವಿಜಯ್ ಅ.1ರಂದು ಷರತ್ತುಬದ್ಧ ಜಾಮೀನ ಮೇಲೆ ಹೊರಗಡೆ ಬಂದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.