ಶ್ರುತಿಹರಿಹರನ್ ವಿರುದ್ಧ ಜಗ್ಗೇಶ್ ಗರಂ
Team Udayavani, Oct 24, 2018, 12:32 PM IST
ಬೆಂಗಳೂರು: ಕನ್ನಡ ಚಿತ್ರರಂಗದಲ್ಲೀಗ ಮಿ ಟೂ ಅಭಿಯಾನ ಜೋರು ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಪರ, ವಿರೋಧ ಹೇಳಿಕೆಗಳು ಜೋರಾಗುತ್ತಿವೆ. ಕನ್ನಡ ಚಿತ್ರರಂಗ ಸೇರಿದಂತೆ ಪರಭಾಷೆ ಕಲಾವಿದರು ತಮ್ಮ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ.
ಮಂಗಳವಾರ ಜಗ್ಗೇಶ್ ಕೂಡ ಶ್ರುತಿಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಮೇಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ, ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. “ಡಾ. ರಾಜಕುಮಾರ್, ವಿಷ್ಣುವರ್ಧನ್ ನಂತರ ನಾನು ಹತ್ತಿರದಿಂದ ಕಂಡಂತೆ ಅರ್ಜುನ್ ಸರ್ಜಾ ಅವರು ಅತ್ಯಂತ ಸಭ್ಯ, ಸರಳ ಸುಸಂಸ್ಕೃತ ನಟ.
ಪ್ರತಿಯೊಬ್ಬರನ್ನು ಗೌರವಿಸುವ, ಏಕ ವಚನದಲ್ಲಿ ಕೂಡ ಯಾರನ್ನೂ ಕರೆಯದವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾರೆಂದರೆ, ಅದಕ್ಕೆ ಏನನ್ನಬೇಕು? ಮೂವತ್ತೈದು ವರ್ಷಗಳ ಅರ್ಜುನ್ ಸರ್ಜಾ ಅವರ ಸಿನಿಮಾ ಕೃಷಿಯನ್ನು ಶ್ರುತಿ ಹರಿಹರನ್ ಒಂದೇ ದಿನದದಲ್ಲಿ ಹಾಳು ಮಾಡಿದಂತಾಗಿದೆ. ಇದು ಅವರನ್ನು ಕೊಲೆ ಮಾಡಿದ ಹಾಗೆ’ ಎಂದು ಜಗ್ಗೇಶ್ ಹೇಳಿದ್ದಾರೆ.
ಇನ್ನು, ನಟಿ ಖುಷೂº ಕೂಡ ಅರ್ಜುನ್ ಪರ ಮಾತನಾಡಿದ್ದಾರೆ. “ನಾನು ಮೊದಲು ನಾಯಕಿಯಾಗಿ ಅಭಿನಯಿಸಿದ್ದೆ ಅರ್ಜುನ್ ಸರ್ಜಾ ಅವರ ಸಿನಿಮಾದಲ್ಲಿ. ಅವರೊಬ್ಬ ಜೆಂಟಲ್‌ಮ್ಯಾನ್. ಅವರ ಜೊತೆ ಅಭಿನಯಿಸಿದ್ದು, ಅವರ ಸ್ನೇಹ ಸಂಪಾದಿಸಿದ್ದೆ ನನಗೊಂದು ಹೆಮ್ಮೆ. ನನಗೆ ಹತ್ತಿರದಿಂದ ಗೊತ್ತಿರುವಂತೆ ಅಂದು ಅರ್ಜುನ್ ಸರ್ಜಾ ಹೇಗಿದ್ದರೊ, ಈಗಲೂ ಹಾಗೆ ಇದ್ದಾರೆ. ಸುಳ್ಳನ್ನು ಸತ್ಯವೆಂದು ಬಿಂಬಿಸಲು ಹೊರಟರೆ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ’ ಎಂದು ಖುಷೂº ಹೇಳಿದ್ದಾರೆ.
ಇತ್ತ ಪ್ರಕಾಶ್ ರೈ , ಶ್ರುತಿ ಹರಿಹರನ್ ಬೆಂಬಲಕ್ಕೆ ನಿಂತಿದ್ದಾರೆ. “ಒಬ್ಬಳು ಹೆಣ್ಣು ತನಗಾದ ಅನ್ಯಾಯದ ವಿರುದ್ಧ ತಿರುಗಿ ನಿಂತರೆ ಇಡೀ ಜಗತ್ತೆ ಅವಳ ವಿರುದ್ಧ ಎದ್ದು ಕೂರುತ್ತದೆ. ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ, ಅವಳ ಬಾಯಿ ಮುಚ್ಚಿಸುವುದಕ್ಕೆ ನೋಡುತ್ತದೆ. ಆಮೇಲೆ ಅವಳೊಬ್ಬಳೆ ಅಲ್ಲ, ಯಾವ ಹೆಣ್ಣು ಮಗಳೂ ಬಾಯಿ ತೆರೆಯಬಾರದು.
ಯಾವತ್ತೂ ತನಗೆ ಅನ್ಯಾಯವಾಗಿದೆ ಎಂದು ಹೇಳಿಕೊಳ್ಳಬಾರದು. ಒಂದು ಕೆಟ್ಟ ಸ್ಪರ್ಶವನ್ನು ಕೂಡ ಸಹಜ ಎಂಬಂತೆ ಸ್ವೀಕರಿಸಬೇಕು ಎಂಬಂತೆ ಮಾಡುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಈ ನಡುವೆ, ಧ್ರುವಸರ್ಜಾ ಮತ್ತೆ ಶ್ರುತಿ ಹರಿಹರನ್ ಕುರಿತು ಮಾತನಾಡಿದ್ದಾರೆ. “ಅವರು ಎರಡು ವರ್ಷದ ಹಿಂದಿನ ಘಟನೆ ಇಟ್ಟುಕೊಂಡು ಈಗ ಆರೋಪಿಸುತ್ತಿದ್ದಾರೆ.
ನನಗೆ ಗೊತ್ತಿರುವಂತೆ ಚೇತನ್ ಅವರ ಸಂಸ್ಥೆಗೆ ಶೃತಿ ಹರಿಹರನ್ ಮೆಂಬರ್ ಆಗಿ ಎಂಟು ತಿಂಗಳುಗಳಾಗಿವೆ. ಈ ಎಂಟು ತಿಂಗಳಲ್ಲಿ ಅರ್ಜುನ್ ಸರ್ಜಾ ಅವರ ಮೇಲೆ ಹೇಗೆಲ್ಲಾ ಆರೋಪ ಮಾಡಬಹುದು ಎಂದು ಸ್ಟಡಿ ಮಾಡಿ, ಈ ಥರದ ಆರೋಪ ಮಾಡಲಾಗುತ್ತಿದೆ ಎಂದು ಧ್ರುವಸರ್ಜಾ ಕಿಡಿಕಾರಿದ್ದಾರೆ.
ಧ್ರುವಸರ್ಜಾ ಸೇರಿದಂತೆ ಕೆಲವರ ಹೇಳಿಕೆಗಳನ್ನು ಗಮನಿಸಿದ ನಟ ಚೇತನ್, “ನಾವು ಇಲ್ಲಿ ಯಾರ ವಿರುದ್ಧ ಮಾತನಾಡುತ್ತಿದ್ದೇವೆ ಎಂಬುದಕ್ಕಿಂತ ಯಾರಿಗೆ ಬೆಂಬಲವಾಗಿದ್ದೇವೆ ಅನ್ನೋದು ಮುಖ್ಯ. ಯಾರು ಶೋಷಣೆಗೆ ಒಳಗಾಗಿದ್ದಾರೋ, ಅವರ ಪರ ನಮ್ಮ ಬೆಂಬಲ, ಹೋರಾಟ ಇದ್ದೇ ಇರುತ್ತದೆ.
ಅನ್ಯಾಯಕ್ಕೆ ಒಳಗಾದವರ ಪರ ಮಾತನಾಡುವುದೇ ತಪ್ಪು ಎನ್ನುವುದಾದರೆ, ಯಾರೂ ಅವರ ಪರ ನಿಲ್ಲುವುದಿಲ್ಲ. ಇಲ್ಲಿ ಯಾರು ಮಾಡಿದ್ದಾರೆ ಎನ್ನುವುದಕ್ಕಿಂತ, ಏನು ಮಾಡಿದ್ದಾರೆ, ಯಾರಿಗೆ ನ್ಯಾಯ ಸಿಗಬೇಕು ಅನ್ನೋದೆ ಮುಖ್ಯ’ ಎಂದು ಚೇನತ್ ಹೇಳಿದ್ದಾರೆ.
“ಮಹಿಳೆಯರನ್ನು ಗೌರವಿಸುವುದು ಸರಿ. ಆದರೆ ಕೆಲವು ನಟಿಯರು ತಾನು ಮಹಿಳೆ ಎಂಬುದನ್ನೇ ಬಳಸಿ ಪಬ್ಲಿಸಿಟಿ ಪಡೆಯುತ್ತಿದ್ದಾರೆ. ಅದಕ್ಕೊಂದು ಮಿತಿ ಇರುತ್ತದೆ. ಪ್ರತಿಷ್ಠಿತ ನಟರ ಹೆಸರನ್ನು ಒಂದೇ ಹೇಳಿಕೆ ಮೂಲಕ ಹಾಳು ಮಾಡುತ್ತಾರೆ. ನಾನು ಹತ್ತು ವರ್ಷದಿಂದ ಚಿತ್ರರಂಗವನ್ನು ಹತ್ತಿರದಿಂದ ನೋಡಿದ್ದೇನೆ. ಕೆಲವು ನಟಿಯರು ಮೇಲೆ ಬರಲು ಏನು ಬೇಕಾದರೂ ಮಾಡುತ್ತಾರೆ’.
-ಹರ್ಷಿಕಾ ಪೂಣಚ್ಚ, ನಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.