ಚನ್ನಮ್ಮ ಜಯಂತಿ ಆಚರಣೆ ತಡವಾಗಿದ್ದಕ್ಕೆ ಪ್ರತಿಭಟನೆ 

Team Udayavani, Oct 24, 2018, 4:43 PM IST

24-october-18.gif

ಮುಂಡರಗಿ: ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಸಮಯಕ್ಕೆ ಸರಿಯಾಗಿ ವೀರ ರಾಣಿ ಕಿತ್ತೂರು ಚನ್ನಮ್ಮ ಜಯಂತಿ ಆಚರಣೆ ಮಾಡಲಿಲ್ಲ ಎಂದು ಆರೋಪಿಸಿ ತಾಲೂಕು ಪಂಚಮಸಾಲಿ ಸಮಾಜದ ಮುಖಂಡರು ಮಂಗಳವಾರ ತಹಶೀಲ್ದಾರ್‌ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿ, ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯಕ್ಕೆ ಬೆಳಗ್ಗೆ 9ಕ್ಕೆ ಪಂಚಮಸಾಲಿ ಸಮಾಜದ ಮುಖಂಡರು ಸೇರಿದಂತೆ ನೂರಾರು ಜನರು ಆಗಮಿಸಿದ್ದರು. ಆದರೆ 11 ಗಂಟೆಯಾದರೂ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಚನ್ನಮ್ಮ ಜಯಂತಿ ಆಚರಣೆ ಮಾಡಿರಲಿಲ್ಲ. ಕಾರ್ಯಕ್ರಮಕ್ಕೆ ಬಂದ ಜನರು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಾಲಯಕ್ಕೆ ಆಗಮಿಸಿದ ತಹಶೀಲ್ದಾರ್‌ ಭ್ರಮರಾಂಬಾ ಗುಬ್ಬಿಶೆಟ್ಟಿ 11:15ಕ್ಕೆ ತಕ್ಷಣವೇ ಸಭಾಂಗಣದಲ್ಲಿ ಚನ್ನಮ್ಮಳ ಭಾವಚಿತ್ರ ಇಟ್ಟು ಜಯಂತಿ ಆಚರಣೆಗೆ ಸಿದ್ಧತೆ ಮಾಡಲು ಸೂಚಿಸಿದರು. ಆದಾಗ್ಯೂ 11:30 ಗಂಟೆಯಾದರೂ ತಾಲೂಕು ಆಡಳಿತವು ಚನ್ನಮ್ಮಳ ಜಯಂತಿ ಆಚರಣೆ ಮಾಡಲು ಮುಂದಾಗುತ್ತಿಲ್ಲವೆಂದು ಆಕ್ರೋಶಗೊಂಡ ಸಮುದಾಯದ ಜನರು ತಹಶೀಲ್ದಾರ್‌ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸತೊಡಗಿದರು.

ಎಲ್ಲ ಜಯಂತಿಗಳನ್ನು ತಾಲೂಕು ಆಡಳಿತ ಆಚರಣೆ ಮಾಡುತ್ತಿದೆ. ಆದರೆ ವೀರರಾಣಿ ಚನ್ನಮ್ಮಳ ಜಯಂತಿ ಆಚರಣೆ ಮಾಡಲು ಏಕೆ ನಿರ್ಲಕ್ಷ್ಯ ಮಾಡುತ್ತಿದೆ. ತಾಲೂಕು ಆಡಳಿತ ಪಂಚಮಸಾಲಿ ಸಮಾಜದವರನ್ನು ಅವಮಾನಿಸಿದೆ. ಆದ್ದರಿಂದ ತಕ್ಷಣವೇ ತಹಶೀಲ್ದಾರ್‌ ಅವರನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್‌.ವಿ. ಪಾಟೀಲ ಸೇರಿದಂತೆ ಮತ್ತಿತರರು ಆಗ್ರಹಿಸಿದರು. ಪ್ರತಿಭಟನೆ ನಂತರ ಪಂಚಮಸಾಲಿ ಮುಖಂಡರೊಂದಿಗೆ ತಹಶೀಲ್ದಾರ್‌ ಭ್ರಮರಾಂಭ ಗುಬ್ಬಿಶೆಟ್ಟಿ, ಸಿಪಿಐ ಶ್ರೀನಿವಾಸ ಮೇಟಿ ಅವರು ತಹಶೀಲ್ದಾರ್‌ ಚೇಂಬರಿನಲ್ಲಿ ಪ್ರತ್ಯೇಕ ಸಭೆ ನಡೆಸಿದರು. ತಹಶೀಲ್ದಾರ್‌ ಭ್ರಮರಾಂಭ ಗುಬ್ಬಿಶೆಟ್ಟಿ ಮಾತನಾಡಿ, ಬೆಂಗಳೂರಿಗೆ ತೆರಳಿದ್ದರಿಂದ ಕಾರ್ಯಾಲಯಕ್ಕೆ ಬರಲು ತಡವಾಯಿತು. ಮುಂದಿನ ದಿನಗಳಲ್ಲಿ ಈ ತರಹ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಮುಖಂಡರಲ್ಲಿ ಮನವಿ ಮಾಡಿಕೊಂಡರು.

ತಹಶೀಲ್ದಾರ್‌ ಮನವಿಗೆ ಸ್ಪಂದಿಸಿದೇ ಜನರು ತಹಶೀಲ್ದಾರ್‌ ವಿರುದ್ಧ ಘೋಷಣೆ ಕೂಗುತ್ತಾ ಹೊರ ನಡೆದರು. ಇದರಿಂದ ಒಂದು ಹಂತದಲ್ಲಿ ತಹಶೀಲ್ದಾರ್‌ ಭ್ರಮರಾಂಭ ಗುಬ್ಬಿಶೆಟ್ಟಿ ಭಾವುಕರಾಗಿ ಅಳತೊಡಗಿದರು. ಸಿಬ್ಬಂದಿಯು ತಹಶೀಲ್ದಾರರನ್ನು ಸಮಾಧಾನಗೊಳಿಸಿದರು. ಮುಖಂಡರಾದ ಮುದ್ಲಿಂಗಪ್ಪ ಕೊರ್ಲಹಳ್ಳಿ, ದೇವಪ್ಪ ಇಟಗಿ, ಮಂಜುನಾಥ ಮುಧೋಳ, ನಾಗರಾಜ ಮುರುಡಿ, ಬಸವರಾಜ ದೇಸಾಯಿ, ಶಿವಾನಂದ ನವಲಗುಂದ, ಅಶೋಕ ಹಂದ್ರಾಳ, ಶಿವಾನಂದ ಕಮತರ, ಸಿದ್ದು ದೇಸಾಯಿ, ಸುರೇಶ ಮಾಳೆಕೊಪ್ಪ, ವಿಜಯಲಕ್ಷ್ಮೀ ಪೊಲೀಸಪಾಟೀಲ, ಮಂಜುಳಾ ಇಟಗಿ, ಶೋಭಾ ಪಾಟೀಲ, ನೇತ್ರಾ ಭಾವಿಹಳ್ಳಿ, ರೇಣುಕಾ ಮುದ್ದಿ, ಶಾರದಾ ಲಿಂಗಶೆಟ್ಟರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

1-eeqweqweqwe

India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ

court

Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

1-rtt

Modi; 56 ವರ್ಷಗಳಲ್ಲಿ ಗಯಾನಾಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ

Karkala: ರಸ್ತೆ ಬದಿ ತೋಡಿಗೆ ಜಾರಿದ ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬ್ಯುಲೆನ್ಸ್

Karkala: ರಸ್ತೆ ಬದಿ ತೋಡಿಗೆ ಜಾರಿದ ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬ್ಯುಲೆನ್ಸ್

siddaramaiah

NABARD loan 58 % ಕಡಿತ: ಚರ್ಚೆಗೆ ನಿರ್ಮಲಾ ಬಳಿ ಸಮಯ ಕೋರಿದ ಸಿಎಂ ಸಿದ್ದರಾಮಯ್ಯ

Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು

Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆಗೆ ಯತ್ನ

Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆಗೆ ಯತ್ನ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

7-uv-fusion

UV Fusion: ಹಿರಿಜೀವಗಳ ಕಾಳಜಿ ವಹಿಸಿ

1-eeqweqweqwe

India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ

court

Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

1-rtt

Modi; 56 ವರ್ಷಗಳಲ್ಲಿ ಗಯಾನಾಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.