ಅ.29ರಂದು ಅನಾವರಣಕ್ಕೆ ಸಜ್ಜಾಗಿರುವ ಸೆಮಿ ಹೈಸ್ಪೀಡ್ ಟ್ರೈನ್ 18
Team Udayavani, Oct 24, 2018, 7:16 PM IST
ಹೊಸದಿಲ್ಲಿ : ದೇಶೀಯವಾಗಿ ನಿರ್ಮಿಸಲ್ಪಟ್ಟಿರುವ ಸೆಮಿ ಹೈಸ್ಪೀಡ್ ಅಂತರ-ನಗರ ಪ್ರಯಾಣದ, ಎಂಜಿನ್ ರಹಿತವಾದ, ಟ್ರೈನ್ 18 ಕೋಡ್ ನೇಮ್ ಹೊಂದಿರುವ ರೈಲನ್ನು ಭಾರತೀಯ ರೈಲ್ವೆ ಇದೇ ಅಕ್ಟೋಬರ 29ರಂದು ಅನಾವರಣಗೊಳಿಸಲಿದೆ.
ಈ ಅತ್ಯಾಧುನಿಕ ಟ್ರೈನ್ ಮೊದಲ ಎರಡು ಮೂರು ತಿಂಗಳಲ್ಲಿ ಪ್ರಾಯೋಗಿಕ ಪರೀಕ್ಷಾ ಓಡಾಟಗಳನ್ನು ಕೈಗೊಳ್ಳಲಿದೆ; ಅನಂತರ ಇವುಗಳನ್ನು ಪ್ರಯಾಣಿಕರಿಗೆ ಸೇವೆಗೆ ಇಳಿಸಲಾಗುವುದು ಎಂದು ಐಸಿಎಫ್ ಜನರಲ್ ಮ್ಯಾನೇಜರ್ ಎಸ್ ಮಣಿ ಹೇಳಿದ್ದಾರೆ.
ಉತ್ಪಾದನೆಗೊಂಡ ವರ್ಷವನ್ನು ಸಂಕೇತಿಸುವ ಟ್ರೈನ್ 18 ಸೆಲ್ಫ್ ಪ್ರೊಪೆಲ್ಡ್ ಆಗಿದ್ದು ಇದು ಗಂಟೆಗೆ 160 ಕಿ.ಮೀ. ವೇಗದಲ್ಲಿ ಓಡುತ್ತದೆ. ಕ್ರಮೇಣ ಇದು ಭಾರತೀಯ ರೈಲ್ವೇ ಜಾಲದಲ್ಲಿ ಶತಾಬ್ದಿ ಎಕ್ಸ್ಪ್ರೆಸ್ ಸ್ಥಾನವನ್ನು ಪಡೆಯಲಿದೆ ಎಂದು ಮಣಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.