18 AIADMK ಶಾಸಕರ ಅನರ್ಹತೆ: Speaker ನಿರ್ಧಾರ ಎತ್ತಿಹಿಡಿದ ಹೈಕೋರ್ಟ್
Team Udayavani, Oct 25, 2018, 11:13 AM IST
ಚೆನ್ನೈ : ಹದಿನೆಂಟು ಎಐಎಡಿಎಂಕೆ ಶಾಸಕರನ್ನು ಅನರ್ಹಗೊಳಿಸಿದ್ದ ತಮಿಳು ನಾಡು ಅಸೆಂಬ್ಲಿ ಸ್ಪೀಕರ್ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ. ಅನರ್ಹಗೊಳಿಸಲಾಗಿದ್ದ 18 ಎಐಎಡಿಎಂಕೆ ಶಾಸಕರು ಬದಿಗೊತ್ತಲ್ಪಟ್ಟಿದ್ದ ಪಕ್ಷದ ನಾಯಕ ಟಿ ಟಿ ವಿ ದಿನಕರನ್ ಗೆ ನಿಷ್ಠೆ ತೋರಿದ್ದರು.
“ಮದ್ರಾಸ್ ಹೈಕೋರ್ಟ್ ನ ಈ ತೀರ್ಪಿನಿಂದ ನಮಗೇನೂ ಹಿನ್ನಡೆಯಾಗಿಲ್ಲ. ಇದು ನಮಗೊಂದು ಅನುಭವ; ನಾವು ಪರಿಸ್ಥಿತಿಯನ್ನು ಎದುರಿಸುವೆವು. ಅನರ್ಹಗೊಂಡಿರುವ 18 ಶಾಸಕರೊಂದಿಗೆ ಸಭೆಯ ಬಳಿಕ ನಾವು ನಮ್ಮ ಮುಂದಿನ ಕಾರ್ಯಯೋಜನೆಯನ್ನು ನಿರ್ಧರಿಸುವೆವು’ ಎಂದು ದಿನಕರನ್ ಹೇಳಿದರು.
ಕಳೆದ ವರ್ಷ ಸೆ.18ರಂದು 18 ಎಐಎಡಿಎಂಕೆ ಶಾಸಕರನ್ನು ತಮಿಳು ನಾಡು ಅಸೆಂಬ್ಲಿ ಸ್ಪೀಕರ್ ಪಿ ಧನಪಾಲ್ ಅವರು ಪಕ್ಷಾಂತರ ತಡೆ ಕಾಯಿದೆಯಡಿ ಅನರ್ಹಗೊಳಿಸಿದ್ದರು. ಈ ಶಾಸಕರು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಮೇಲೆ ತಮಗೆ ವಿಶ್ವಾಸವಿಲ್ಲವೆಂದು ಹೇಳಿ ರಾಜ್ಯಪಾಲರನ್ನು ಭೇಟಿಯಾಗಿದ್ದರು.
ಕಳೆದ ಜೂನ್ 14ರಂದು ಮದ್ರಾಸ್ ಹೈಕೋರ್ಟ್ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ವಿಭಜಿತ ತೀರ್ಪು ನೀಡಿತ್ತು. ಚೀಫ್ ಜಸ್ಟಿಸ್ ಇಂದಿರಾ ಬ್ಯಾನರ್ಜಿ ಅವರು ತಮಿಳು ನಾಡು ಸ್ಪೀಕರ್ ಪಿ ಧನಪಾಲ್ ಅವರ ನಿರ್ಧಾರವನ್ನು ಎತ್ತಿ ಹಿಡಿದಿದ್ದರೆ ನ್ಯಾಯಾಧೀಶ ಸುಂದರ್ ಅವರು ಸ್ಪೀಕರ್ ಆದೇಶವನ್ನು ವಜಾ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.