ಸೇವೆ ಮಾಡುವವರಿಗೆ ಸಮಯದ ಮಿತಿ ಇರುವುದಿಲ್ಲ: ಡಾ| ಹೆಗ್ಗಡೆ
Team Udayavani, Oct 25, 2018, 11:56 AM IST
ಬೆಳ್ತಂಗಡಿ : ಕೆಲಸ ಅಂದರೆ ಸೇವೆ. ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ, ಶ್ರದ್ಧಾಭಕ್ತಿಯಿಂದ ಸೇವೆ ಮಾಡುವವರಿಗೆ ಸಮಯದ ಮಿತಿ ಇರುವುದಿಲ್ಲ. ತನ್ಮಯತೆ-ಸೇವಾ ಮನೋಭಾವದಿಂದ ಕರ್ತವ್ಯ ನಿರ್ವ ಹಿಸಿದ ಸಿಬಂದಿ ಶಾಂತಿ, ನೆಮ್ಮದಿ, ತೃಪ್ತಿಯಿಂದ ನಿವೃತ್ತರಾಗುತ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ನಿವೃತ್ತ ಸಿಬಂದಿಯನ್ನು ಸಮ್ಮಾನಿಸಿ ಮಾತನಾಡಿದರು. ಹಂಪಿ ವಿ.ವಿ. ಮಾಜಿ ಉಪ ಕುಲಪತಿ ಡಾ| ಬಿ.ಎ. ವಿವೇಕ ರೈ ಅಭಿನಂದನ ಭಾಷಣಗೈದು, ಹೆಗ್ಗಡೆಯವರು ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ ಎಂಬ ಜೈನ ಧರ್ಮದ ತ್ರೆ„ರತ್ನಗಳನ್ನು ನಿಜಜೀವನದಲ್ಲಿ ಅಳವಡಿಸಿದ ಜಗದ್ಗುರು ಎಂದರು.
ಶಿಸ್ತಿನ ಸಿಪಾಯಿಗಳು
ಕಾಲಕ್ಕೆ ತಕ್ಕಂತೆ ಕ್ಷೇತ್ರದ ಆಡಳಿತದಲ್ಲಿ ಕೆಲವು ಪರಿವರ್ತನೆ ಮಾಡಲಾಗಿದೆ. ಪ್ರತಿಯೊಂದು ವಿಭಾಗದಲ್ಲಿಯೂ ತಜ್ಞರು ಹಾಗೂ ಪರಿಣತ ಸಿಬಂದಿ ಇದ್ದಾರೆ. ಸಿಬಂದಿಗೆ ಸೇವೆ, ಭಕ್ತರೊಂದಿಗೆ ಸೌಜನ್ಯದಿಂದ ವರ್ತಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಧರ್ಮಸ್ಥಳದ ಆಡಳಿತ ವ್ಯವಸ್ಥೆ, ಶಿಸ್ತು, ವ್ಯವಹಾರ, ಸ್ವಚ್ಛತೆಯನ್ನು ಎಲ್ಲರೂ ಮಾದರಿಯಾಗಿ ಅನುಸರಿಸುತ್ತಿರುವುದು ಸಂತಸದಾಯಕವಾಗಿದೆ. ಎಲ್ಲ ಸಿಬಂದಿ ಶಿಸ್ತಿನ ಸಿಪಾಯಿಗಳಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ
Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.