ರವಿ ಚನ್ನಣ್ಣನವರ್ ಕೃತಿ ಲೋಕಾರ್ಪಣೆ
Team Udayavani, Oct 25, 2018, 12:36 PM IST
ಬೆಂಗಳೂರು: ಜೀವನದಲ್ಲಿ ಅವಮಾನ ಕ್ಕೊಳ ಗಾದ ವ್ಯಕ್ತಿ ಭವಿಷ್ಯದಲ್ಲಿ ದೊಡ್ಡ ಸಾಧಕ ನಾಗುತ್ತಾನೆ ಎಂದು ಗದಗ-ವಿಜಯಪುರ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಲೇಖಕ ಎರ್ರೆಪ್ಪಗೌಡ ಚಾನಾಳ್ ಬರೆದ “ನಮ್ಮೊಳಗೊಬ್ಬ ರವಿ ಡಿ ಚನ್ನಣ್ಣನವರ್’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅವ ಮಾನಕ್ಕಿಂತ ದೊಡ್ಡ ವರ ಬೇರೆ ಯಾವುದೂ ಇಲ್ಲ. ಇದನ್ನು ಅನುಭವಿಸಿದವರು ಸಾಧಕ
ರಾಗುತ್ತಾರೆ. ಅವಮಾನವೂ ನಮ್ಮೊಳಗೆ ಛಲ ಹುಟ್ಟಿಸುತ್ತದೆ. ಆಗ ಆ ವಕ್ತಿಗೆ ಸಾಧಿಸಬೇಕೆಂಬ ಹಠ ಹುಟ್ಟುತ್ತದೆ ಎಂದು ತಿಳಿಸಿದರು.
ಸಾಧಕರು ಓದಲೇ ಬೇಕೆಂಬ ನಿಯಮ ವಿಲ್ಲ. ಅನಕ್ಷರಸ್ಥರಾದ ಬಹಳಷ್ಟು ಮಂದಿ ಆರ್ಥಿಕವಾಗಿ ಸಬಲರಾಗಿರುವ ಉದಾ
ಹರಣೆಗಳಿವೆ. ಬಡತನ ಎಂಬುದನ್ನು ಬದಲಾಯಿಸಿ ಕೊಂಡು, ಪ್ರತಿದಿನ ಹೊಸ ಮನುಷ್ಯನಾಗಿ ಹುಟ್ಟಬೇಕು ಎಂದರು.
ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ರವಿ.ಡಿ.ಚನ್ನಣ್ಣನವರ್ ಮಾತ ನಾಡಿ, ಶಾಲಾ ದಿನಗಳಲ್ಲಿ ಅಸಡ್ಡೆಯಿಂದ ಬದುಕುತ್ತಿದ್ದೆ. ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ತತ್ವಾದರ್ಶಗಳನ್ನು ಅಧ್ಯಯನ ಮಾಡಿದಾಗ ಏನಾದರೂ ಸಾಧಿಸಬೇಕೆಂಬ ಛಲ ಮೂಡಿತು. ಈ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.
ಪೊಲೀಸ್ ಮುಖ್ಯ ಪೇದೆ ಎನ್.ಚಂದ್ರು “ನಮ್ಮೊಳಗೊಬ್ಬ ರವಿ ಡಿ ಚನ್ನಣ್ಣನವರ್’ ಕೃತಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಲೇಖಕ ಎರ್ರೆಪ್ಪಗೌಡ ಚಾನಾಳ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.