ಅಂಬಾಭವಾನಿ ದರ್ಶನಕ್ಕೆ ಭಕ್ತರ ದಂಡು
Team Udayavani, Oct 25, 2018, 1:49 PM IST
ಸೊಲ್ಲಾಪುರ: ಮಹಾರಾಷ್ಟ್ರದ ಕುಲದೇವತೆ ತುಳಜಾಪುರ ಅಂಬಾಭವಾನಿ ದೇವಿ ದರ್ಶನಕ್ಕೆ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ, ತೆಲಂಗಾಣದಿಂದ ಭಕ್ತ ಸಾಗರವೇ ಹರಿದುಬಂದಿತ್ತು.
ಮಹಾರಾಷ್ಟ್ರವಲ್ಲದೆ ಕರ್ನಾಟಕದ ವಿಜಯಪುರ, ಕಲಬುರಗಿ, ರಾಯಚೂರು, ಬೀದರ ಮತ್ತು ಯಾದಗಿರಿ ಜಿಲ್ಲೆಗಳಿಂದ ಮಂಗಳವಾರ ಬೆಳಗ್ಗೆ ಬಸ್ ಮತ್ತು ರೈಲುಗಳ ಮೂಲಕ ಸೊಲ್ಲಾಪುರಕ್ಕೆ ಆಗಮಿಸಿ ಇಲ್ಲಿನ ರೂಪಾಭವಾನಿ ದೇವಿ ದರ್ಶನ ಪಡೆದು ಪಾದಯಾತ್ರೆ ಮೂಲಕ ತುಳಜಾಪುರಕ್ಕೆ
ತೆರಳಿದರು.
ವಿಜಯ ದಶಮಿಯಂದು ರಾಕ್ಷಸರನ್ನು ಸಂಹಾರ ಮಾಡಿದ ಅಂಬಾಭವಾನಿ ಸೀಗೆ ಹುಣ್ಣಿಮೆವರೆಗೆ ಮಲಗಿರುತ್ತಾಳೆ. ಅಂದು ದೇವಸ್ಥಾನ ಬಾಗಿಲು ಮುಚ್ಚಿದ್ದನ್ನು ಸೀಗೆ ಹುಣ್ಣಿಮೆ ದಿನ ತೆರೆದಿರುತ್ತದೆ. ಆದ್ದರಿಂದ ಸೀಗೆ ಹುಣ್ಣಿಮೆಯಂದು ಲಕ್ಷಾಂತರ ಭಕ್ತರು ತುಳಜಾಪುರ ಅಂಬಾಭವಾನಿ ದರ್ಶನ
ಪಡೆಯುತ್ತಾರೆ. ವಿವಿಧ ರಾಜ್ಯಗಳಿಂದ ಮಂಗಳವಾರ ಸಂಜೆ ದೇವಾಲಯ ಪ್ರವೇಶಿಸಿದ ಭಕ್ತರು ಬುಧವಾರ ಬೆಳಗಿನ ಜಾವ 2:30ರಿಂದಲೇ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು.
ನಾಡಿನ ವಿವಿಧ ರಾಜ್ಯಗಳಿಂದ ಹೆಚ್ಚಿನ ಭಕ್ತರು ಪಾದಯಾತ್ರೆಯಿಂದಲೇ ತುಳಜಾಪುರಕ್ಕೆ ಆಗಮಿಸಿ ದೇವಿ ದರ್ಶನ ಪಡೆದರು. ಸೀಗೆ ಹುಣ್ಣಿಮೆಗಿಂತ ಎರಡು ದಿನ ಮೊದಲೇ ತಮ್ಮೂರಿನಿಂದ ತುಳಜಾಪುರದತ್ತ ಹೊರಟಿದ್ದರು. ದರ್ಶನಕ್ಕೆ ಬಂದ ಭಕ್ತರಿಗಾಗಿ ವಿವಿಧ ಸಂಘ- ಸಂಸ್ಥೆಗಳು ಹೆಜ್ಜೆ ಹೆಜ್ಜೆಗೂ ಮಹಾಪ್ರಸಾದ ಹಾಗೂ ಕುಡಿಯುವ ನೀರು, ಔಷಧೋಪಚಾರದ ವ್ಯವಸ್ಥೆ ಮಾಡಿದ್ದರು. ಪಾದಯಾತ್ರಿಕರು ಮಹಾಪ್ರಸಾದ ರುಚಿ ಸವಿಯುವ ಮೂಲಕ ತುಳಜಾಪುರ ಅಂಬಾಭವಾನಿ ದರ್ಶನ ಪಡೆದರು.
ಸಾರಿಗೆ ವ್ಯವಸ್ಥೆ: ಭಕ್ತರಿಗೆ ತೊಂದರೆಯಾಗದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿಯಾಗಿ ಬಸ್ ಗಳು ಸಂಚರಿಸಿದವು. ಅಲ್ಲದೆ ಖಾಸಗಿ ವಾಹನಗಳ ಮೂಲಕ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದರು. ಮಹಾರಾಷ್ಟ್ರದ ತುಳಜಾಭವಾನಿ ಎಲ್ಲರಿಗೂ ಆರಾಧ್ಯ
ದೇವತೆ. ಹೀಗಾಗಿ ಬುಧವಾರ ಸೀಗೆ ಹುಣ್ಣಿಮೆ ದಿನ ವಿಶೇಷ ದರ್ಶನ ಪಡೆದರು. ಯಾವ ರಸ್ತೆಗಳಲ್ಲಿ ನೋಡಿದರೂ ಭಕ್ತರ ದಂಡು ಹರಿದು ಬರುತಿತ್ತು.
ಬಂದೋಬಸ್ತ್: ಸೀಗೆ ಹುಣ್ಣಮೆ ದಿನವಾದ ಬುಧವಾರ ಲಕ್ಷಾಂತರ ಭಕ್ತರು ಇಲ್ಲಿಗೆ ಬರುವುದರಿಂದ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮಂದಿರ ಪ್ರವೇಶಿಸುವ ಎರಡು ಕಡೆಗಳಲ್ಲಿ ತಪಾಸಣಾ ವ್ಯವಸ್ಥೆ ಮಾಡಲು ಸ್ಕಾನಿಂಗ್ ಯಂತ್ರಗಳನ್ನು ಅಳವಡಿಸಲಾಗಿತ್ತು. ಮೂರು ಕಿಮೀ ಅಂತರದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.