ರಂಗಮಂದಿರದ ರಂಜನೆ


Team Udayavani, Oct 26, 2018, 6:00 AM IST

rangamandira.jpg

ಕನ್ನಡದಲ್ಲಿ “ರಂಗ ಮಂದಿರ’ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರುತ್ತಿದೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿತು. ಈ ಹಿಂದೆ “ಸಿಂಪಲ್ಲಾಗ್‌ ಇನ್ನೊಂದ್‌ ಲವ್‌ಸ್ಟೋರಿ’ ಚಿತ್ರವನ್ನು ನಿರ್ಮಿಸಿದ್ದ ಆಶು ಬೆದ್ರ ತಮ್ಮ ದುಬೈ ಸ್ನೇಹಿತರಾದ ಅಮಿತಾ ಡಿಸೋಜಾ ಮತ್ತು ರೋನಿ ಫೆರ್ನಾಂಡಿಸ್‌ ಜೊತೆಗೂಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಅರ್ಜುನ್‌’ ಚಿತ್ರವನ್ನು ನಿರ್ದೇಶಿಸಿದ್ದ ಶಾಹುರಾಜ್‌ ಶಿಂಧೆ “ರಂಗ ಮಂದಿರ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, ಚಿತ್ರದ ಆರಂಭದಲ್ಲಿ ಅತ್ಯಂತ ಸರಳವಾಗಿ ಮುಹೂರ್ತವನ್ನು ನಡೆಸಿದ ಚಿತ್ರತಂಡ, ಮುಹೂರ್ತದ ಕಾರ್ಯಕ್ರಮಕ್ಕೆ ತಗುಲುವ ವೆಚ್ಚವನ್ನು “ಕೊಡಗು ಅತಿವೃಷ್ಠಿ ಸಂತ್ರಸ್ಥರ ಪರಿಹಾರ ನಿಧಿ’ಗೆ ದೇಣಿಗೆಯಾಗಿ ನೀಡಿದೆ.

“ರಂಗ ಮಂದಿರ’ದ ಶೀರ್ಷಿಕೆ ವಿನ್ಯಾಸವನ್ನು ಹಿರಿಯ ನಟ ಸುಮನ್‌ ಮತ್ತು ಅವಿನಾಶ್‌ ಅನಾವರಣಗೊಳಿಸಿದರು. “ರಂಗ ಮಂದಿರ’ದಲ್ಲಿ ಪ್ರವೀಣ್‌ ತೇಜ್‌ ಮತ್ತು ಅಶು ಬೇದ್ರ ಇಬ್ಬರು ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅನುಪಮಾ ಮತ್ತು ಶೃತಿ ಪ್ರಕಾಶ್‌ ಇಬ್ಬರು ಪ್ರವೀಣ್‌ ತೇಜ್‌ಗೆ ನಾಯಕಿಯರಾಗಿ ಜೋಡಿಯಾದರೆ, ಆಶಿಕಾ ರಂಗನಾಥ್‌ ಮತ್ತೂಬ್ಬ ನಾಯಕ ಆಶು ಬೇದ್ರಗೆ
ನಾಯಕಿಯಾಗುತ್ತಿದ್ದಾರೆ. ಉಳಿದಂತೆ ತಾಯಿಯ ಪಾತ್ರದಲ್ಲಿ ವೀಣಾ ಸುಂದರ್‌, ಕುಡುಕನಾಗಿ ತಬಲ ನಾಣಿ, ಧರ್ಮಾಧಿಕಾರಿಯಾಗಿ ಸುಮನ್‌, ರಾಜಕಾರಣಿಯಾಗಿ ಅವಿನಾಶ್‌ ಇತರೆ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ರಂಗಾಯಣ ರಘು, ಅರುಣಾ ಬಾಲರಾಜ್‌, ವಿಜಯ್‌ ಚೆಂಡೂರ್‌, ಮೈಕೋ ನಾಗರಾಜ್‌, ಕಾರ್ತಿಕ್‌,ನಾಗೇಶ್‌, ರಾಜ್‌ದೀಪಕ್‌ ಶೆಟ್ಟಿ, ರಾಕ್‌ಲೈನ್‌ ಸುಧಾಕರ್‌, ವಿಕ್ಟರಿ ವಾಸು ಮೊದಲಾದ 80ಕ್ಕೂ ಹೆಚ್ಚು ಕಲಾವಿದರು “ರಂಗ ಮಂದಿರ’ದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶಾಹುರಾಜ್‌ ಶಿಂಧೆ, “ವಿಲಿಯಂ ಶೇಕ್‌ಸ್ಪಿಯರ್‌ ಹೇಳುವಂತೆ ಇಡೀ ಪ್ರಪಂಚವೇ ಒಂದು ರಂಗ ಮಂದಿರ ಇದ್ದಂತೆ. ಇಲ್ಲಿ ಆಡುವ ಪ ದಗಳೇ ರಂಗ ಗೀತೆಗಳು ಇದ್ದಂತೆ. ಪ್ರತಿದಿನ ನಾವು ಅನೇಕ ಜನರೊಂದಿಗೆ ಓಡಾಡುತ್ತೇವೆ. ಆದರೆ ನಮಗೆ ಅವರೆಲ್ಲರ ಪರಿಚಯವಿರುವುದಿಲ್ಲ. ಇಲ್ಲಿ ಮುಂದೆ ಏನು ನಡೆಯುತ್ತದೆ, ಹಿಂದೆ ಏನು ನಡೆಯುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ನಮಗೆ ಗೊತ್ತಿಲ್ಲದಂತೆ ಇನ್ನೊಬ್ಬರೊಂದಿಗೆ ಸಂಬಂಧ ಬೆಳೆದಿರುತ್ತದೆ. ಅದು
ಹೇಗೆ..? ಏನು..? ಎಂಬುದೇ ಚಿತ್ರದ ಕಥೆ. “ರಂಗ ಮಂದಿರ’ದಲ್ಲಿ ಮಾನವ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಟ್ಟಿದ್ದು, ಒಂದು ಉತ್ತಮ ಸಂದೇಶ ಕೂಡ ಚಿತ್ರದಲ್ಲಿದೆ’ ಎಂದರು.

“ರಂಗ ಮಂದಿರ’ ಚಿತ್ರಕ್ಕೆ ರಮೇಶ್‌ ಕುಮಾರ್‌ ಚಿತ್ರಕಥೆ ಮತ್ತು ಪ್ರಶಾಂತ್‌ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಸರವಣಂ ನಟರಾಜ್‌ ಛಾಯಾಗ್ರಹಣ ಮತ್ತು ಸುರೇಶ್‌ ಆರು¾ಗಂ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. 

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಜೆಸ್ಸಿ ಗಿಫ್ಟ್ ಹಾಡುಗಳಿಗೆ ಸಂಗೀತವಿದೆ. ಈಗಾಗಲೆ ಚಿತ್ರದ ಅರ್ಧದಷ್ಟು ಚಿತ್ರೀಕರಣ ಮುಗಿದಿದ್ದು, ಬಾಕಿಯಿರುವ ಚಿತ್ರದ ಗೀತೆಗಳನ್ನು ವಿದೇಶದಲ್ಲಿ ಚಿತ್ರೀಕರಿಸಲು ಯೋಜಿಸಲಾಗಿದೆ. 

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prajwal devaraj Rakshasa movie

Prajwal Devaraj: ದೀಪಾವಳಿಗೆ ರಾಕ್ಷಸ ಆರ್ಭಟ; ರೆಗ್ಯುಲರ್‌ ಆ್ಯಕ್ಷನ್‌ ಬಿಟ್ಟ ಪ್ರಯತ್ನವಿದು

Martin, UI, Bagheera movies releasing in october

Kannada Movies; ತ್ರಿಬಲ್‌ ಸ್ಟಾರ್‌ ಅಕ್ಟೋಬರ್‌: ಧ್ರುವ, ಮುರಳಿ, ಉಪ್ಪಿ ಅಖಾಡಕ್ಕೆ

kalapathar

Kaalapatthar: ಲಕ್ಕಿ ವಿಕ್ಕಿ; ಕಾಲಾಪತ್ಥರ್‌ ನತ್ತ ಚಿತ್ತ

Ganesh Chaturthi; ನಟಿಮಣಿಯರ ಚೌತಿ ಸಂಭ್ರಮ; ಬಾಲ್ಯದ ಹಬ್ಬದ ನೆನಪು ಹಂಚಿಕೊಂಡ ನಟಿಯರು…

Ganesh Chaturthi; ನಟಿಮಣಿಯರ ಚೌತಿ ಸಂಭ್ರಮ; ಬಾಲ್ಯದ ಹಬ್ಬದ ನೆನಪು ಹಂಚಿಕೊಂಡ ನಟಿಯರು…

ಇಂದಿನಿಂದ ತೆರೆಯಲ್ಲಿ ಅನ್ನ ಪ್ರಸಾದ

Anna Movie; ಇಂದಿನಿಂದ ತೆರೆಯಲ್ಲಿ ‘ಅನ್ನ’ ಪ್ರಸಾದ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.