ಬಂಟರ ಸಂಘ ಅಂಧೇರಿ-ಬಾಂದ್ರಾ:ಹಿಂದುಳಿದ ಪರಿವಾರಕ್ಕೆ ದೀಪಾವಳಿ ಉಡುಗೊರೆ


Team Udayavani, Oct 26, 2018, 11:52 AM IST

2510mum10.jpg

ಮುಂಬಯಿ: ಬಂಟರ ಸಂಘದ 9 ಪ್ರಾದೇಶಿಕ ಸಮಿತಿಯವರು ಮಾಡದ ಮಹತ್ಕಾ ರ್ಯವನ್ನು ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಮಾಡುತ್ತಿದೆ. ಇತ್ತೀಚೆಗೆ ಆರ್ಥಿಕವಾಗಿ ಹಿಂದುಳಿದ ಪರಿಸರದ ಬಾಂಧವರ ಮನೆ ಮನೆಗೆ ತೆರಳಿ ಅವರ ಕಷ್ಟಗಳಿಗೆ ಸ್ಪಂದಿಸಿ ಆ ಕುಟುಂಬವನ್ನು ದತ್ತು ಸ್ವೀಕರಿಸಿದೆ. ಇಂದು ದೀಪಾವಳಿಯ ಪ್ರಯುಕ್ತ ಆ ಕುಟುಂಬದ ಸದಸ್ಯರನ್ನು ಆಮಂತ್ರಿಸಿ ಕುಟುಂಬದ ಎಲ್ಲ ಸದಸ್ಯ ರೂ ಖುಷಿಯಿಂದ ದೀಪಾವಳಿ ಆಚರಿಸುವಂತೆ ಉಡುಗೊರೆ ನೀಡಿ ಬಡವ-ಬಲ್ಲಿದನೆಂಬ ಭೇದ ಭಾವವಿಲ್ಲದೆ ಜತೆಯಾಗಿ ಊಟ ಮಾಡುವ ಈ ಪರಿಯ ಕಾರ್ಯಕ್ರಮ ನಿಜವಾಗಿ ದೀಪಾವಳಿಯ ಆಚರಣೆ ಎಂದು ಎಸ್‌. ಎಂ. ಶೆಟ್ಟಿ ಶಿಕ್ಷಣ ಸಂಕುಲದ ಕಾರ್ಯಾಧ್ಯಕ್ಷರಾದ ಸಿಎ ಶಂಕರ ಬಿ. ಶೆಟ್ಟಿ ಅವರು ಹರ್ಷ ವ್ಯಕ್ತಪಡಿಸಿದರು.

ಅ.20 ರಂದು ಸಾಕಿನಾಕದ ಸವಾಯಿ ಹೊಟೇಲ್‌ ಸಭಾಗೃಹದಲ್ಲಿ ನಡೆದ ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಸೌಹಾರ್ದ ಕೂಟದ  ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಂಟರ ಸಂಘದ ಉಪಾಧ್ಯಕ್ಷರಾದ ಚಂದ್ರಹಾಸ. ಕೆ. ಶೆಟ್ಟಿ ಅವರು ಮಾತನಾಡಿ,  ನಮ್ಮ ಸುತ್ತಮುತ್ತಲಿನ ಸಮಾಜ ಬಾಂಧವರ ಕಣ್ಣೀರೊರೆಸುವ ಕಾರ್ಯ ಮಾಡುವುದೇ ಬಂಟರ ಸಂಘದ ನಿಜವಾದ ಉದ್ದೇಶ. ನಮ್ಮವರಿಗೆ ದೊರೆಯಬೇಕಾದ ಸವಲತ್ತುಗಳು ಅವರ ಮನೆ ಬಾಗಿಲಿಗೆ ತಲುಪಬೇಕು ಎನ್ನುವ ಒಳ್ಳೆಯ ಉದ್ದೇಶದಿಂದ ಆರಂಭವಾದ ಈ ಸತ್ಕಾರ್ಯವನ್ನು ಎಲ್ಲರೂ ಅನುಸರಿಸಬೇಕು. ಇಂತಹ ಅಪೂರ್ವವಾದ ಕಾರ್ಯಕ್ಕೆ ಬೆಂಬಲವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನುಡಿದರು.

ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯು ಒಂದು ಮಾದರಿ ಸಮಿತಿಯಾಗಿದೆ. ಕಾರ್ಯಾ ಧ್ಯಕ್ಷರಾದ ಡಾ| ಆರ್‌. ಕೆ. ಶೆಟ್ಟಿ ಅವರ ನೇತೃ ತ್ವದಲ್ಲಿ  ಅಂತ:ಕರಣಯುಕ್ತ ಕಾರ್ಯವನ್ನು ಮಾ ಡುತ್ತಿರುವುದು ಸ್ತುತ್ಯಾರ್ಹ. ಸಮಿತಿಯ ಸರ್ವ ಸದಸ್ಯರೂ, ಮಹಿಳಾ ವಿಭಾಗದ ಸದಸ್ಯರೂ ಅಭಿ ನಂದನಾರ್ಹರು ಎಂದು ಮುಖ್ಯ ಅತಿಥಿಗಳಾಗಿ ಮಾತನಾಡಿದ ಬಂಟರ ಸಂಘದ ವಲಯದ ಸಮನ್ವಯಕರಾದ ಡಾ| ಪ್ರಭಾಕರ ಶೆಟ್ಟಿ ಅವರು ಅಭಿಪ್ರಾಯಿಸಿದರು.

ಬಂಟರ ಸಂಘದ ಜತೆ ಕಾರ್ಯದರ್ಶಿ ಮಹೇಶ್‌ ಶೆಟ್ಟಿ ಅವರು ಮಾತನಾಡಿ,  ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯು ಆರಂಭವಾದಂದಿನಿಂದ ಇಂದಿನವರೆಗೂ ಒಳ್ಳೊಳ್ಳೆಯ ಕಾರ್ಯಗಳಿಂದ ಅದು ಮುಂಚೂಣಿಯಲ್ಲಿದೆ. ಈ ಪರಿಸರದವರ ಕಷ್ಟಗಳಿಗೆ ಸ್ಪಂದಿಸುವುದೇ ನಮ್ಮ ನಿಜವಾದ ಉದ್ದೇಶ. ಒಂದು ಕುಟುಂಬಕ್ಕೆ ಬೇಕಾದ ಸವಲತ್ತು ಗಳನ್ನು ಒಂದು ಸಂಸ್ಥೆ ಮಾಡಿಕೊ ಡುತ್ತಿರುವುದು ಅದು ಸುಲಭದ ಮಾತಲ್ಲ. ಅದು ನಿಮ್ಮ ಉದಾರತೆ ತೋರಿಸುತ್ತದೆ ಎಂದು ನುಡಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ನೋಂಡಾ, ನಿಧಿ ಸಂಗ್ರಹಣ ಸಮಿತಿಯ ಕಾರ್ಯಾ ಧ್ಯಕ್ಷರಾದ ಯಶವಂತ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಬಂಟರ ಸಂಘದ ಜತೆಕೋಶಾ ಕಾರಿ ಗುಣಪಾಲ ಶೆಟ್ಟಿ ಐಕಳ, ಜ್ಞಾನಮಂದಿರದ ಕಾರ್ಯಾಧ್ಯಕ್ಷ ರವೀಂದ್ರ ಭಂಡಾರಿ, ಬಂಟರ ಸಂಘದ ಸದಸ್ಯತ್ವ ನೋಂದಣಿಯ ಕಾರ್ಯಾಧ್ಯಕ್ಷ ಎನ್‌. ಸಿ. ಶೆಟ್ಟಿ, ಬೆಳ್ಳಂಪಳ್ಳಿ ಬಾಲಕೃಷ್ಣ  ಶೆಟ್ಟಿ ಅವರು ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು.

ಜೋಗೇಶ್ವರಿ-ದಹಿಸರ್‌ ಯುವ ವಿಭಾಗ ದವರು ಇತ್ತೀಚೆಗೆ ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯಾಟದಲ್ಲಿ ವಿಜೇತರಾದ  ಮಹಿಳಾ ವಿಭಾಗದ ಆಟಗಾರರನ್ನು, ಕ್ರೀಡಾ ವಿಭಾಗದ ಕಾರ್ಯಾ ಧ್ಯಕ್ಷರಾದ ಸೂರಜ್‌ ಶೆಟ್ಟಿ ಹಾಗೂ ಕೋಚ್‌ ಅಭಿಷೇಕ್‌ ಶೆಟ್ಟಿ ಇವರನ್ನು ಗೌರವಿಸಲಾುತು. ಸದಸ್ಯತ್ವ ನೋಂದಣಿಯಲ್ಲಿ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಬಂಗಾರದ ಪದಕವನ್ನು ಪಡೆದ ಲಕ್ಷಣ್‌ ಶೆಟ್ಟಿ ದಂಪತಿ, ಕುಟುಂಬದ ದತ್ತು ಸ್ವೀಕಾರ ಹಾಗೂ ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪ್ರಕಾಶ್‌ ಆಳ್ವ ಅವರನ್ನು ಗೌರವಿಸಲಾಯಿತು.

ಕುರ್ಲಾ-ಭಾಂಡುಪ್‌ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದವರು 
ಆಯೋಜಿಸಿದ್ದ ಆದರ್ಶ ದಂಪತಿ ಸ್ಪರ್ಧೆಯಲ್ಲಿ ಮೋಸ್ಟ್‌ ಇಂಟಲೆಕುcವಲ್‌ ದಂಪತಿ ಪ್ರಶಸ್ತಿಗೆ ಭಾಜನರಾದ ಪೇತ್ರಿ ವಿಶ್ವನಾಥ ಶೆಟ್ಟಿ ದಂಪತಿಯನ್ನು  ಸತ್ಕರಿಸಲಾಯಿತು. ಬಂಟರ ಸಂಘ ಆಯೋಜಿಸಿದ್ದ ಹೂಕಟ್ಟುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಬಂಟರ ಸಂಘದ ಮಹಿಳಾ ವಿಭಾಗದ ಸಾಂಸ್ಕೃತಿಯ ಸಮಿತಿಯ ಕಾರ್ಯಾಧ್ಯಕ್ಷೆ ಪ್ರಶಾಂತಿ ಶೆಟ್ಟಿ ಹಾಗೂ ತೃತೀಯ ಸ್ಥಾನವನ್ನು ಪಡೆದ ಭವಾನಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ರವಿ ಶೆಟ್ಟಿ ದತ್ತು ಸ್ವೀಕರಿ ಸಿದ ಕುಟುಂಬಗಳ ಹೆಸರನ್ನು ಹಾಗೂ ಸೂರಜ್‌ ಶೆಟ್ಟಿ ಕ್ರೀಡಾಳುಗಳ ಹೆಸರನ್ನು ವಾಚಿಸಿದರು. ಸುಚಿತ್ರಾ ಗಜೇಂದ್ರ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ 
ಆರಂಭ ವಾಯಿತು. ಜತೆ ಕಾರ್ಯದರ್ಶಿ ರಮೇಶ್‌ ರೈ ವಂದಿಸಿದರು.  ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಭೋಜನದ ವ್ಯವಸ್ಥೆ ಯನ್ನು ಮಾಡಲಾಗಿತ್ತು. ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇಂತಹ ಸತ್ಕಾರ್ಯಗಳು ನಿತ್ಯ ನಿರಂತರವಾಗಿ ನಡೆಯಬೇಕು ಎನ್ನುವ ಆಲೋಚನೆಯಿಂದ ದಾನಿಗಳನ್ನು ಸಂಪರ್ಕಿಸಿ ಅವರ ನೆರವು, ಬೆಂಬಲವನ್ನು ಕೋರಿದ್ದೇವೆ. ಎಲ್ಲರೂ ಬಹಳ ಪ್ರೀತಿಯಿಂದ ಸ್ಪಂದಿಸಿದ್ದಾರೆ. ಇವರ ಜೀವನೋಪಾಯಕ್ಕೆ ಬೇಕಾಗುವ ಅಕ್ಕಿ, ಬೇಳೆ ಕಾಳುಗಳು, ದವಸ ಧಾನ್ಯ, ಎಣ್ಣೆ ಹೀಗೆ ಅಗತ್ಯ ವಸ್ತುಗಳ‌ನ್ನು ಪ್ರತಿ ತಿಂಗಳು ಅವರ ಮನೆಗೆ ಮುಟ್ಟಿಸಲಾಗುತ್ತದೆ.  ದೀಪಾವಳಿಗೆ ಬಟ್ಟೆಬರೆ, ಚಾದರ, ಹೊದಿಕೆಗಳನ್ನು ಮನೆಯ ಪ್ರತಿಯೊಬ್ಬರಿಗೂ ಉಡುಗೊರೆಯಾಗಿ ಇಂದು ನೀಡಿದ್ದೇವೆ. ನಾವು ಆರಿಸಿದ 52 ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ 5 ಲಕ್ಷದ ಆರೋಗ್ಯ ವಿಮೆ, 2 ಲಕ್ಷದ ಜೀವ ವಿಮಾ ಪಾಲಿಸಿ, 2 ಲಕ್ಷದ ಅಪಘಾತ ವಿಮೆಯನ್ನು ಮಾಡಿಸಿ ಅದರ ಪ್ರೀಮಿ ಯಂನ್ನು ಸಮಿತಿಯೇ ಭರಿಸುತ್ತಿದೆ.  ಅಲ್ಲದೆ ಆ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದಾಗ ಯಾವುದೇ ವೆಚ್ಚವಿಲ್ಲದೆ ಮುಂಬಯಿಯ ಪ್ರತಿಷ್ಠಿತ ಮೂರು ಆಸ್ಪತ್ರೆಗಳ ಮುಖಾಂತರ ಅವರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಕೂಡ ಮಾಡ ಲಾಗುತ್ತದೆ. ಇದರ ಹಿಂದೆ ಕುಟುಂಬ ದತ್ತು ಸ್ವೀಕಾರ ಸಮಿತಿಯ ಕಾರ್ಯಾಧ್ಯಕ್ಷ ರಾದ ಸತೀಶ್‌ ಶೆಟ್ಟಿ ಕಾರ್ಯನಿರತರಾಗಿದ್ದಾರೆ. 
 –  ಡಾ| ಆರ್‌. ಕೆ. ಶೆಟ್ಟಿ, ಕಾರ್ಯಾಧ್ಯಕ್ಷರು : ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ

ಟಾಪ್ ನ್ಯೂಸ್

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

11-kushtagi

Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.