ನಿಷೇಧದ ನಡುವೆ ಎಲ್‌ಇಡಿ ಫಲಕ ಹಾವಳಿ
Team Udayavani, Oct 26, 2018, 12:30 PM IST
ಬೆಂಗಳೂರು: ಹೈಕೋರ್ಟ್ ಆದೇಶದ ನಂತರ ನಗರದಲ್ಲಿ ಜಾಹೀರಾತು ಫಲಕಗಳಿಗೆ ಕಡಿವಾಣ ಬಿದ್ದಿದ್ದರೂ ಇದೀಗ, ಎಲ್‌ಇಡಿ ಜಾಹೀರಾತು ಫಲಕಗಳ ಹಾವಳಿ ಹೆಚ್ಚುತ್ತಿದ್ದು, ಪಾಲಿಕೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಜಾಹೀರಾತು ಫಲಕಗಳು, ಬ್ಯಾನರ್, ಬಂಟಿಂಗ್ಸ್ ಹಾಗೂ ಭಿತ್ತಿಪತ್ರಗಳ ವಿಚಾರದಲ್ಲಿ ಪಾಲಿಕೆ ವಿರುದ್ಧ ಹೈಕೋರ್ಟ್ ಕೆಂಡಕಾರಿತ್ತು. ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ವರ್ಷದ ಮಟ್ಟಿಗೆ ಎಲ್ಲ ರೀತಿಯ ಜಾಹೀರಾತು ಪ್ರದರ್ಶನ ನಿಷೇಧಿಸಿ ಆಗಸ್ಟ್ 6ರಂದು ಪಾಲಿಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಇದರೊಂದಿಗೆ ಬಿಬಿಎಂಪಿಗೆ ಹೊಸ ಜಾಹೀರಾತು ನೀತಿ ಹಾಗೂ ಉಪವಿಧಿ ಜಾರಿಗೊಳಿಸಲು ಆಗಸ್ಟ್ 28ರಂದು ಪಾಲಿಕೆ ಸಭೆಯ ಒಪ್ಪಿಗೆ ಪಡೆದು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಇದರ ನಡುವೆಯೇ ನಗರದಲ್ಲಿ ಜಾಹೀರಾತು ಫಲಕಗಳ ತೆರವು ಕಾರ್ಯವೂ ಆರಂಭವಾಗಿದೆ.
ಆದರೆ, ಕೌನ್ಸಿಲ್ ನಿರ್ಣಯ ಹಾಗೂ ನೂತನ ಜಾಹೀರಾತು ನೀತಿಗೂ ಬಗ್ಗದ ಜಾಹೀರಾತು ಏಜೆನ್ಸಿಗಳು, ಅನಿಲ್ ಕುಂಬ್ಳೆ ವೃತ್ತ, ಎಂ.ಜಿ.ರಸ್ತೆ, ಮಲ್ಲೇಶ್ವರ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಎಲ್‌ಇಡಿ ಫಲಕಗಳನ್ನು ಅಳವಡಿಸಿ ಜಾಹೀರಾತು ಪ್ರದರ್ಶಿಸುತ್ತಿವೆ.
ನೂತನ ನೀತಿಯ ಅಂಶಗಳ ಉಲ್ಲಂಘನೆ: ಪಾಲಿಕೆಯಿಂದ ರೂಪಿಸಿರುವ ಹೊಸ ಜಾಹೀರಾತು ನೀತಿಗೆ ಇನ್ನೂ ಸರ್ಕಾರದಿಮದ ಅನುಮೋದನೆ ಸಿಕ್ಕಿಲ್ಲ. ಜತೆಗೆ ಬೈಲಾ ಕುರಿತಂತೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ.
ಪ್ರಮುಖ ಜಂಕ್ಷನ್‌ಗಳ ಅಕ್ಕಪಕ್ಕದಲ್ಲಿ ಯಾವುದೇ ಜಾಹೀರಾತು ಪ್ರದರ್ಶನ ಇರಬಾರದು. ಒಂದೊಮ್ಮೆ ಜಾಹೀರಾತು ಫಲಕ ಅಳವಡಿಸಿದರೆ, ವಾಹನ ಸವಾರರ ಗಮನ ಆ ಕಡೆ ಸೆಳೆದು ಅಪಘಾತಗಳು ಹೆಚ್ಚುತ್ತವೆ ಎಂದು ನೂತನ ಉಪವಿಧಿಯಲ್ಲಿ ತಿಳಿಸಲಾಗಿದೆ.
ಪಾಲಿಕೆಯಿಂದ ಯಾವುದೇ ಹೊಸ ಜಾಹೀರಾತು ಫಲಕ ಅಳವಡಿಕೆಗೆ ಅನುಮತಿ ನೀಡುತ್ತಿಲ್ಲ. ಅದನ್ನು ಮೀರಿ ಅಳವಡಿಸುವಂತಹ ಫಲಕಗಳನ್ನು ಕೂಡಲೇ ವಲಯ ಮಟ್ಟದ ಅಧಿಕಾರಿಗಳು ತೆರವುಗೊಳಿಸಿ, ಅಳವಡಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BMTC: ಬಸ್ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ; ಪ್ರಯಾಣಿಕರ ರಕ್ಷಿಸಿದ ನಿರ್ವಾಹಕ!
ಹುಂಡಿ ಒಡೆದು ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು; ಎರಡು ಪ್ರತ್ಯೇಕ ಘಟನೆ ದಾಖಲು
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ
Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.