ಮೋಡಿ ಮಾಡಿದೆ ಕುಚ್ಚು 

Team Udayavani, Oct 26, 2018, 12:47 PM IST

26-october-10.gif

ಕುಚ್ಚು ಇಲ್ಲದ ಸೀರೆಗಳು ಅಷ್ಟೊಂದು ವ್ಯಾಮೋಹ ಹುಟ್ಟಿಸುವುದಿಲ್ಲ. ನವಿಲುಗರಿಯಂತೆ ಮುದ ನೀಡುವ ಕುಚ್ಚು ಸೀರೆಗೆ ಜತೆಯಾಗಿದ್ದರೆ ಅದೇ ಒಂದು ವಿಶೇಷ ಆಕರ್ಷಣೆ. ಈವರೆಗೂ ತೀರಾ ಸಾಂಪ್ರದಾಯಿಕವಾಗಿ ಸೆಳೆಯುತ್ತಿದ್ದ ಕುಚ್ಚು, ಈಗ ಮಾಡರ್ನ್ ರೂಪ ತಾಳಿದೆ. ಸೀರೆ ಮಾತ್ರವಲ್ಲ ಆಧುನಿಕ ಉಡುಗೆ ತೊಡುಗೆಯಲ್ಲೂ ಸ್ಥಾನ ಪಡೆದುಕೊಂಡಿದೆ.

ಸೀರೆಗೆ ಕುಚ್ಚು ಇದ್ದರೆ ಮಾತ್ರ ಹೆಚ್ಚು ಆಕರ್ಷಣೆ ಎನ್ನುವುದನ್ನು ಫ್ಯಾಶನ್‌ ಲೋಕ ಅರಿತುಕೊಂಡಿದೆ. ಸಾಂಪ್ರದಾಯಿಕ ರೇಷ್ಮೆ ಸೀರೆಯೋ, ಹೊಸ ವಿನ್ಯಾಸದ ಮಾಡರ್ನ್ಸೀ ರೆಯೋ ಅಥವಾ ಒಂದು ಕಾಟನ್‌ ಸೀರೆಯೋ… ಯಾವುದೋ ಒಂದು, ಇದಕ್ಕೆ ಕಲಾತ್ಮಕ ಕುಚ್ಚೊಂದು ಇರಲೇಬೇಕು ಎನ್ನುವುದು ಎಲ್ಲರ ನಂಬಿಕೆ. ಈಗಂತೂ, ರೇಷ್ಮೆ ಸೀರೆಯ ಸೆರಗಿಗೆ; ಬಣ್ಣ ಬಣ್ಣದ ರೇಷ್ಮೆ ದಾರದ ಕುಚ್ಚು, ಟ್ಯಾಸೆಲ…, ಗೊಂಡೆ ಎಂದೆಲ್ಲ ಕರೆಸಿಕೊಳ್ಳುವ ಈ ಅದ್ಭುತ ಕಲಾಕೃತಿ ಇದ್ದರೆ ಮಾತ್ರ ಸೀರೆಯ ಸೆರಗಿನ ಅಂದ ಹೆಚ್ಚುವುದು ಎನ್ನುವ ಭಾವನೆ ಆವರಿಸಿದೆ.

ಮೊದಲೆಲ್ಲ ಸೀರೆಗೆ ಸಾಧಾರಣವಾಗಿ ಒಂದು ಬಣ್ಣದ ಕುಚ್ಚು ಹಾಕುತ್ತಿದ್ದರು. ಈಗ ಬೇರೆ ಬೇರೆ ಬಣ್ಣದ ದಾರಗಳಿಂದ, ಸೀರೆಯಲ್ಲಿರುವ ಬಣ್ಣಗಳ ಜತೆ ಹೊಂದಿಸಿ ಕಲಾತ್ಮಕವಾಗಿ ಹೆಣೆಯುವುದು, ಕ್ರೋಶಾದಲ್ಲಿ ವಿಧವಿಧ ವಿನ್ಯಾಸದಲ್ಲಿ ಹೊಲಿಯುವುದು ಚಾಲ್ತಿಯಲ್ಲಿದೆ.

ಸೀರೆಗೆ ಹೊಂದುವ ಕ್ರಿಸ್ಟಲ್‌ ಮಣಿಗಳು, ಬೆಳ್ಳಿ, ಬಂಗಾರದ ಬಣ್ಣದ ಮಣಿಗಳು, ಬಣ್ಣದ ಪುಟ್ಟ ಪುಟ್ಟ ಕೊಳವೆಗಳು, ಮುತ್ತುಗಳು, ಕೊಳವೆಯಾಕಾರದ ಮಣಿ, ಹೂವಿನ ಆಕಾರದ ಬಿÇÉೆಗಳು… ಹೀಗೆ ವಿಧವಿಧದ ಆಲಂಕಾರಿಕ ವಸ್ತುಗಳನ್ನು ಅವರವರ ಅಭಿರುಚಿಗೆ ತಕ್ಕಂತೆ ಕಲಾತ್ಮಕವಾಗಿ ಹೆಣೆದ ಕುಚ್ಚುಗಳನ್ನು ನೋಡುವುದೇ ಕಣ್ಣಿಗಾನಂದ.

ಎಲ್ಲದಕ್ಕೂ ಕುಚ್ಚಿನ ಅಲಂಕಾರ
ಕುಚ್ಚು ಅಥವಾ ಟ್ಯಾಸಲ್‌ ಎಂಬ ನೇತಾಡುವ ರೇಶಿಮೆ ದಾರಗಳ ಗುಂಪು, ಹಿಂದೆಲ್ಲ ನಾರಿಮಣಿಯರ ಸೀರೆಯ ಸೆರಗನ್ನು ಅಲಂಕರಿಸುತ್ತಿತ್ತು. ಅದೀಗ ಆಧುನಿಕ ಫ್ಯಾಷನ್‌ ಜಗತ್ತಿಗೂ ಲಗ್ಗೆ ಇಟ್ಟು, ಎಲ್ಲ ವಸ್ತುಗಳ ಮೇಲೂ ಮೋಡಿ ಮಾಡಿದೆ. ಹಗುರಾದ ತಂತಿಯೊಂದಿಗೆ ಹೆಣೆದುಕೊಂಡ ಬಣ್ಣ ಬಣ್ಣದ ಕುಚ್ಚು ಕಿವಿಯ ಆಭರಣವಾಗುತ್ತದೆ. ಕೈಬಳೆಯಲ್ಲಿ ನೇತಾಡುವ ಕುಚ್ಚುಗಳು ಬಳೆಯ ಅಂದ ಹೆಚ್ಚಿಸುತ್ತವೆ. ಉದ್ದದ ಸರಕ್ಕೆ ಕುಚ್ಚುಗಳ ಪದಕ, ಸಿಲ್ಕ… ದಾರವನ್ನು ದಪ್ಪನಾಗಿ ಸುತ್ತಿ ಮಣಿಗಳಿಂದ ಅಲಂಕರಿಸಿ, ಅದಕ್ಕೆ ಕುಚ್ಚುಗಳ ಪೆಂಡೆಂಟ್‌ನ ನೆಕ್ಲೇಸ್‌ ಹೀಗೆ ಒಡವೆಗಳ ಲೋಕದಲ್ಲೂ ಕುಚ್ಚು ರಾರಾಜಿಸುತ್ತಿದೆ.

ಇನ್ನು ಚೂಡಿದಾರ್‌ ನಲ್ಲಿಯೂ ಆಲಂಕಾರಿಕವಾಗಿ ಡಿಸೈನ್‌ ಮಾಡಿ ಕುಚ್ಚು ಸೇರಿಸಿದರೆ ಆಕರ್ಷಣೀಯ. ಕುರ್ತಾ, ಜೀನ್ಸ್  ಪ್ಯಾಂಟ್‌, ಡಿಸೈನರ್‌ ಬ್ಲೌಸ್‌  ಸಹಿತ ಅವರವರ ಅಭಿರುಚಿಗೆ ತಕ್ಕಂತೆ ಅಲಂಕಾರಿಕವಾಗಿ ಹೆಣೆದ ಕುಚ್ಚು ಹೊಸತನಕ್ಕೆ ನಾಂದಿ ಹಾಡಿದೆ. ಅಲ್ಲದೇ ಹ್ಯಾಂಡ್‌ ಬ್ಯಾಗ್‌, ಬಣ್ಣದ ಕುಚ್ಚಿರುವ ಪಾದರಕ್ಷೆಗಳೂ ಮಾರ್ಕೆಟ್‌ಗೆ ಕಾಲಿಟ್ಟಿವೆ. ಸೀರೆ, ಸಲ್ವಾರ್‌, ಜೀನ್ಸ್ … ಹೀಗೆ ಎಲ್ಲದಕ್ಕೂ ಹೊಂದುವ ಕುಚ್ಚು ಇರುವ ಚಪ್ಪಲಿಗಳು ಸದ್ಯಕ್ಕೆ ಚಾಲ್ತಿಯಲ್ಲಿರುವ ಫ್ಯಾಷನ್‌. ಮನೆಯ ಪರದೆಗಳಿಗೆ, ಒರಗು ದಿಂಬುಗಳಿಗೆ ಕುಚ್ಚು ಸೇರಿಸಿ ಹೊಲಿದರೆ ಮತ್ತಷ್ಟು ಸೊಬಗು.

 ಶಾರದಾ ಮೂರ್ತಿ

ಟಾಪ್ ನ್ಯೂಸ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Gaviyappa-MLA

Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್‌.ಆರ್‌. ಗವಿಯಪ್ಪ ಒತ್ತಾಯ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.