ಕಣ್ಮನ ರಂಜಿಸಿದ ಕೃಷ್ಣಲೀಲೆ – ಕಂಸವಧೆ
Team Udayavani, Oct 26, 2018, 1:00 PM IST
ಯಕ್ಷ ಕಲಾಭಿಮಾನಿ ಬಳಗ ಟೌನ್ ಹಾಲ್ ಉಡುಪಿ ಇವರ ಆಶ್ರಯದಲ್ಲಿ ಉಡುಪಿಯ ಟೌನ್‌ಹಾಲ್‌ನಲ್ಲಿ ಪ್ರದರ್ಶನಗೊಂಡ “ಕೃಷ್ಣಲೀಲೆ-ಕಂಸವಧೆ’ ಅಖ್ಯಾನ ಜನ ಮನ ರಂಜಿಸಿತು.
ಕೃಷ್ಣಲೀಲೆ ಪ್ರಸಂಗ ರಾಮಕೃಷ್ಣ ಹೆಗಡೆ ಹಿಲ್ಲೂರು ಇವರ ಕಂಠಸಿರಿಯಲ್ಲಿ ಉತ್ತಮವಾಗಿ ಪ್ರದರ್ಶನಗೊಂಡಿತು. ಬಾಲಕೃಷ್ಣನಾಗಿ ಬಾಲ ಪ್ರತಿಭೆ ಸ್ವಸ್ತಿಶ್ರೀಯವರ ಅಭಿನಯ ಉತ್ತಮವಾಗಿತ್ತು. ಯಶೋಧ ಪಾತ್ರಕ್ಕೆ ಜೀವ ತುಂಬಿದವರು ಅರಳು ಪ್ರತಿಭೆ ಸುಧೀರ್ ಉಪ್ಪೂರ. ಮಾಯಾ ಪೂತನಿಯಾಗಿ ನಿಲ್ಕೋಡುರವರ ಭಾವಾಭಿನಯ ಮನಸಿನಲ್ಲಿ ಉಳಿಯುವಂತಿತ್ತು. ಮುಂದೆ ಕೃಷ್ಣನ ಪಾತ್ರ ಮಾಡಿದವರು ಕಡಬಾಳ ಉದಯ ಹೆಗಡೆಯವರ ನಾಟ್ಯಾಭಿನಯ ಮನಸೂರೆಗೊಂಡಿತ್ತು. ವಿಜಯನ ಪಾತ್ರದಲ್ಲಿ ಕಾಸರಕೋಡು ಶ್ರೀಧರ ಭಟ್ ಹಾಸ್ಯದ ಹೊನಲನ್ನು ಹರಿಸಿದರು.
ಗೋಪಿಕಾ ಸ್ತ್ರೀಯರಾಗಿ ನಿಲ್ಕೋಡು ಬೀಜಮಕ್ಕಿ ಇವರ ನಾಟ್ಯ- ಮಾತು ಹಿತಮಿತವಾಗಿತ್ತು. ಶಕಟಾ ಧೇನುಕರ ಪಾತ್ರ ತಕ್ಕಮಟ್ಟಿಗೆ ಯಶಸ್ಸು ಕಂಡಿತು. ನಂತರ ಪ್ರದರ್ಶಗೊಂಡ ಕಂಸವಧೆ ಪ್ರಸಂಗವು ಅದ್ಭುತವಾಗಿ ಮೂಡಿ ಬಂತು. ಜನ್ಸಾಲೆ ಭಾಗವತರ ಏರು ಶೃತಿಯಲ್ಲಿ ಹಾಡಲ್ಪಟ್ಟ ಪದ್ಯಗಳು ಮಂತ್ರ ಮುಗ್ಧಗೊಳಿಸಿತು. ಕಂಸನಾಗಿ ಮೆರೆದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ನಾಟ್ಯ ಹಾಗೂ ಮಾತುಗಾರಿಕೆ ಅದ್ಭುತವಾಗಿತ್ತು. ಏನ ಮಾಡಲೀ ನಾನು… ನೆತ್ತಿಗೆ ತೈಲವ ಒತ್ತುತ್ತಾ… ಉರಿಯುವುದೊಂದೇ ದೀಪವು… ಮುಂತಾದ ಪದ್ಯಗಳಿಗೆ ಅವರ ಭಾವಾಭಿನಯ ವರ್ಣಿಸಲಸದಳ.
ಕಂಸನು ಅಂತ್ಯಕಾಲದಲ್ಲಿ ಕಾಣುವ ದುಃಸ್ವಪ್ನ, ದುಗುಡ, ಭಯವನ್ನು ಅದ್ಭುತ ಅಭಿನಯದ ಮೂಲಕ ಅಭಿವ್ಯಕ್ತಿಗೊಳಿಸಿದರು. ಕೃಷ್ಣನಾಗಿ ನಾಟ್ಯಚತುರ ತೀರ್ಥಹಳ್ಳಿ ಗೋಪಾಲಾಚಾರ್ಯರ ಪಾದರಸದಂತ ಚುರುಕಿನ ಪಾದಚಲನೆಯ ನಾಟ್ಯಾಭಿನಯ ಪರಿಪೂರ್ಣವಾಗಿತ್ತು. ಬಲರಾಮನಾಗಿ ಯುವ ಕಲಾವಿದ ತೊಂಬಟ್ಟು ವಿಶ್ವನಾಥ ಆಚಾರ್ಯರ ನಾಟ್ಯಾಭಿನಯ ಮೋಹಕವಾಗಿತ್ತು. ರಾಜ ರಜಕನಾಗಿ ಕಾಸರಕೋಡು ಶ್ರೀಧರ ಭಟ್ ಮೊನಚಾದ
ಮಾತುಗಳಿಂದ ರಂಜಿಸಿದರು. ಚೆಂಡೆ ಮದ್ದಳೆಯಲ್ಲಿ ಸಹಕರಿಸಿದವರು ಸುನಿಲ್ ಭಂಡಾರಿ ಕಡತೋಕ, ಮತ್ತು ಶಿವಾನಂದ ಕೋಟ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.