ಲಿಂಗಾಯತ ಧರ್ಮ ಒಡೆದದ್ದು ನಾನಲ್ಲ: ಸಿದ್ದು
Team Udayavani, Oct 26, 2018, 3:29 PM IST
ಶಿವಮೊಗ್ಗ: ನಾಗಮೋಹನ್ ದಾಸ್ ಸಮಿತಿ ವರದಿಯನ್ನು ಕ್ಯಾಬಿನೆಟ್ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದರಲ್ಲಿ ನನ್ನ ತಪ್ಪೇನಿದೆ. ನಾನು ಧರ್ಮ ಒಡೆದಿದ್ದೇನಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ನಗರದ ಬಸವನಗುಡಿಯಲ್ಲಿ ಗುರುವಾರ ರಾತ್ರಿ ನಡೆದ ವೀರಶೈವ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಬಸವಣ್ಣನ ಬಗ್ಗೆ, ಅವರ ವಿಚಾರದ ಬಗ್ಗೆ ಗೊಂದಲ ಮಾಡಿಕೊಳ್ಳಬಾರದು. ಲಿಂಗಾಯತ ಧರ್ಮದ ವಿಚಾರದಲ್ಲಿ ಐದು ಪಿಟಿಷನ್ ಬಂತು. ನಾಗಮೋಹನ್ ದಾಸ್ ನೇತೃ ತ್ವದಲ್ಲಿ ಸಮಿತಿ ಮಾಡಿದೆ. ರಿಪೋರ್ಟ್ ಬಂತು. ಅದನ್ನು ಕ್ಯಾಬಿನೆಟ್‌ನಲ್ಲಿ ಇಟ್ಟು ನಂತರ ಕೇಂದ್ರಕ್ಕೆ ಶಿಫಾರಸು ಮಾಡಿದೆವು. ಕ್ಯಾಬಿನೆಟ್‌ನಲ್ಲಿ ಈಶ್ವರ್ ಖಂಡ್ರೆ ಹಾಗೂ ಶಾಮನೂರು ಶಿವಶಂಕರಪ್ಪ ಮಗ ಮಲ್ಲಿಕಾರ್ಜುನ್ ಕೂಡ ಇದ್ದರು. ಆ ವರದಿಯನ್ನೇ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆವು, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಇಡಲು ಸೂಚಿಸಿದೆ. ಇದೇ ಕಾರಣಕ್ಕೆ ವೀರಶೈವ ಮಹಾಸಭಾದಿಂದ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಈ ಸಭೆಗೆ ಶಾಮನೂರು ಶಿವಶಂಕರಪ್ಪ ಅವರು ಕರೆದರು. ಸನ್ಮಾನ ಮಾಡಿದರು. ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕು ಅಂತ ಕೇಳಿದರು. ನಾನು ಒಗ್ಗಟ್ಟಾಗಿ ಬನ್ನಿ ಅಂದೆ. ವಿರಕ್ತ ಮಠದ ಸ್ವಾಮಿಗಳು ಬಂದರು. ಲಿಂಗಾಯತ ಧರ್ಮ ಮಾಡಬೇಕು ಅಂತ ಕೇಳಿದರು. ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿ, ಮಾತೆ ಮಹಾದೇವಿ, ತೋಂಟದಾರ್ಯ ಸ್ವಾಮೀಜಿ ಅವರು ಕೂಡ
ಬಂದಿದ್ದರು. ಗುರು ಪರಂಪರೆಯವರು ಬಂದು ವೀರಶೈವ ಧರ್ಮ ಮಾಡಿ ಅಂದರು. ಎಲ್ಲ ಸೇರಿ ಐದು ಪಿಟಿಷನ್ ಬಂತು. ಅದಕ್ಕಾಗಿ ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಲಾಯಿತು.
“ಲಿಂಗಾಯತ ಆ್ಯಂಡ್ ವೀರಶೈವ ಹೂ ಫಾಲೋವ್ಸ್ ಬಸವಣ್ಣ’ ಎಂಬ ಹೆಸರಿನಲ್ಲಿ ವರದಿಯನ್ನು ಶಿಫಾರಸು ಮಾಡಿ¨ªೇವು. ಹೀಗಿರುವಾಗ ನನಗೆ ಧರ್ಮ ಒಡಕಿನ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ನಾನು ಬಸವಣ್ಣನ ಸ್ಟ್ರಾಂಗ್ ಫಾಲೋವರ್: ಹಿಂದಿನ ಮುಖ್ಯಮಂತ್ರಿಗಳ್ಯಾಕೆ ಬಸವಣ್ಣನವರ ಫೋಟೋಗಳನ್ನು ಸರ್ಕಾರಿ ಕಚೇರಿಯಲ್ಲಿ ಇಡಲಿಲ್ಲ? ನಾನ್ಯಾಕೆ ಇಟ್ಟೆ ಅಂದರೆ ನಾನು ಬಸವಣ್ಣ ಸ್ಟ್ರಾಂಗ್ ಫಾಲೋವರ್. ಬಸವಣ್ಣ ನುಡಿದಂತೆ ನಡೆದರು. ಸಮಾಜಕ್ಕೆ ಕೊಟ್ಟು ಹೋದ ವಿಚಾರವನ್ನು ಶರಣ ಸಂಸ್ಕೃತಿ ಅಂತಾ ಕರೀತೀವಿ. ಬಸವಣ್ಣ ಇವನಾರವ ಇವನಾರವ ಅಂತಾ ಹೇಳಿದರು.
ನುಡಿದಂತೆ ನಡೆದರು. ಅವರು ಹೇಳಿದಂತೆ ನಡೆಯುವುದು ಗೌರವ ಸೂಚಿಸಿದಂತೆ. ಆದರೆ ಇಷ್ಟು ವರ್ಷ ನಾವು ಇದನ್ನು ಪಾಲಿಸಲಿಲ್ಲ. ಎಲ್ಲರ ಧರ್ಮಗುರುಗಳು ಇದನ್ನು ಹೇಳುತ್ತಿದ್ದರು. ಆದರೆ ಯಾರೂ ಪಾಲಿಸಲಿಲ್ಲ. ನಾನು ಬಸವಣ್ಣನ ಸ್ಟ್ರಾಂಗ್ ಫಾಲೋವರ್ ಎಂದು ಪುನರುತ್ಛರಿಸಿದರು.
ಕಾಯಕ, ದಾಸೋಹ ಬಸವಣ್ಣ ಹೇಳಿದ ಪ್ರಮುಖ ಸಂಗತಿ. ಎಲ್ಲರೂ ಕಾಯಕ ಮಾಡಬೇಕು ಅಂತಾ ಬಸವಣ್ಣ ಹೇಳಿದರು. ನೀವು ಕೆಲಸ ಮಾಡುವ ಮೂಲಕ ದೇವರನ್ನು ಕಾಣಬೇಕು. ಎಲ್ಲರೂ ಸೇರಿ ಉತ್ಪಾದನೆ ಮಾಡಬೇಕು. ಉತ್ಪಾದಿಸಿದ್ದು ಹಂಚಿ ತಿನ್ನಬೇಕು. ಅದೇ ದಾಸೋಹ. ಸಮಾನತೆಯ
ತತ್ವವನ್ನು ಜಗತ್ತಿಗೆ ಮೊದಲು ಬೋಧಿಸಿದ್ದು ಬಸವಣ್ಣ. ಬಸವಣ್ಣ ಹೇಳಿದ್ದು ಇದನ್ನೇ, ಗಾಂಧೀಜಿ ಹೇಳಿದ್ದು ಇದನ್ನೇ. ಇದೇ ಸಂವಿಧಾನದಲ್ಲಿ ಇರೋದು ಎಂದರು. ವಿಜಯಪುರ ಮಹಿಳಾ ವಿವಿ ಆಗಿದ್ದು ಎಸ್.ಎಂ. ಕೃಷ್ಣ ಕಾಲದಲ್ಲಿ. ಅದಕ್ಕೆ ಅಕ್ಕಮಹಾದೇವಿ ಹೆಸರಿಡಬೇಕು ಅಂತ ಕೂಗು ಇತ್ತು. ಯಡಿಯೂರಪ್ಪ, ಶೆಟ್ಟರ್ ಸಿಎಂ ಆದಾಗ ಅದಕ್ಕೆ ಯಾಕೆ ಆ ಹೆಸರಿಡಲಿಲ್ಲ. ನಾನು ಸಿಎಂ ಆದಾಗ ಕ್ಯಾಬಿನೆಟ್‌ನಲ್ಲಿ ತಂದು ಹೆಸರಿಟ್ಟೆ. ಕಿತ್ತೂರು ರಾಣಿ ಚೆನ್ನಮ್ಮ, ಹೇಮರೆಡ್ಡಿ ಮಲ್ಲಮ್ಮ ಜಯಂತಿ ಮಾಡಿದ್ದು ಯಾರು? ನಾನು. ಹಾಗಿದ್ದರೆ ನಾನು ಹೇಗೆ ಲಿಂಗಾಯತ, ವೀರಶೈವ ವಿರೋಧಿ ಆಗ್ತಿನಿ ಎಂದು ಖಾರವಾಗಿ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.