ರಸ್ತೆಬದಿ ಅನಧಿಕೃತ ಜಾಹೀರಾತು ಫಲಕಗಳ ತೆರವು ಆರಂಭ


Team Udayavani, Oct 27, 2018, 6:00 AM IST

27-ad.jpg

ಕಾಸರಗೋಡು: ರಾಜ್ಯದಲ್ಲಿ ರಸ್ತೆ ಬದಿಗಳ ಅನಧಿಕೃತ ಫ್ಲೆಕ್ಸ್‌ ಬೋರ್ಡ್‌ಗಳು, ಜಾಹೀರಾತು ಫಲಕಗಳು ಮತ್ತು  ಬ್ಯಾನರ್‌ ಇತ್ಯಾದಿಗಳನ್ನು  ಅ.30ರೊಳಗಾಗಿ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್‌ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲಾಡಳಿತೆ ನೇತೃತ್ವದಲ್ಲಿ ಜಾಹೀರಾತು ಫಲಕ ತೆರವುಗೊಳಿಸುವ ಪ್ರಕ್ರಿಯೆ ಆರಂಭಗೊಂಡಿತು.

ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಸಾರಿಗೆ ತಡೆ ಉಂಟಾಗುವ ರೀತಿಯಲ್ಲಿ ಹಾಗೂ ಅನಧಿಕೃತವಾಗಿ ಸ್ಥಾಪಿಸಿರುವ ಜಾಹೀರಾತು ಫಲಕ ಗಳನ್ನು, ಹೋರ್ಡಿಂಗ್‌, ಫ್ಲೆಕ್ಸ್‌ಗಳನ್ನು ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಎ.ಶ್ರೀನಿವಾಸ್‌ ನೇತೃತ್ವದಲ್ಲಿ ಹಳೆಯ ಪ್ರಸ್‌ ಕ್ಲಬ್‌ ಜಂಕ್ಷನ್‌ನಲ್ಲಿ ತೆರವುಗೊಳಿಸಲು ಚಾಲನೆ ನೀಡಿದರು. ಜಿಲ್ಲೆಯ ಎಲ್ಲೆಡೆ ಏಕ ಸಮಯದಲ್ಲಿ ಜಾಹೀರಾತು ಫಲಕ ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಪೊಲೀಸರು, ಲೋಕೋಪಯೋಗಿ ಮೊದಲಾದ ಇಲಾಖೆಗಳು ಪ್ರಕ್ರಿಯೆ ಆರಂಭಿಸಿವೆ.
ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ಈ ಮೊದಲು ಆದೇಶ ನೀಡಲಾಗಿತ್ತು. ಜಿಲ್ಲಾಯೋಜನಾ ಸಮಿತಿ ಸಭೆ ಹಾಗೂ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಗಳಲ್ಲೂ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು. ಜಾಹೀರಾತು ಫಲಕಗಳನ್ನು ಸ್ಥಾಪಿಸಿದವರಿಗೆ ಈ ಮೊದಲು ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ವೆಚ್ಚವನ್ನು ಆಯಾಯ ಸಂಸ್ಥೆಗಳಿಂದ ವಸೂಲು ಮಾಡಲಾಗುವುದು. ಆರಾಧನಾಲಯಗಳು ಸ್ಥಾಪಿಸಿರುವ ಫಲಕಗಳನ್ನು 24 ಗಂಟೆಗಳೊಳಗೆ ತೆರವುಗೊಳಿಸಬೇಕು  ಇಲ್ಲದಿದ್ದಲ್ಲಿ ಜಿಲ್ಲಾಡಳಿತ ತೆರವುಗೊಳಿಸಲಿದೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಎಡಿಎಂ ದೇವಿದಾಸ್‌, ಕಾಂಞಂಗಾಡ್‌ ಸಬ್‌ ಕಲೆಕ್ಟರ್‌ ಅರುಣ್‌ ಕೆ.ವಿಜಯನ್‌, ಡೆಪ್ಯೂಟಿ ಕಲೆಕ್ಟರ್‌ಗಳಾದ ಕೆ.ರವಿ ಕುಮಾರ್‌,ಮಚಂದ್ರನ್‌, ವಿಹಾಗೂ ಅಧಿಕಾರಿಗಳು ಜಾಹೀರಾತು ಫಲಕ ತೆರವುಗೊಳಿಸಲು ನೇತೃತ್ವ ನೀಡಿದ್ದಾರೆ. ಇದೇ ವೇಳೆ ರಸ್ತೆ  ಬದಿಯ ಬೋರ್ಡ್‌ಗಳು ಮತ್ತು ಅನಧಿಕೃತ ಜಾಹೀರಾತು ಫಲಕ ಗಳನ್ನು  ತೆರವುಗೊಳಿಸುವ ಕ್ರಮಕ್ಕೆ ಕೆಲವು ಸ್ಥಳೀಯಾಡಳಿತ ಸಂಸ್ಥೆಗಳು ಈಗಾಗಲೇ ಚಾಲನೆ ನೀಡಿವೆ. ಈ ಕಾರ್ಯಾಚರಣೆಯನ್ನು ಅ.30 ರೊಳಗಾಗಿ ಪೂರ್ತಿಗೊಳಿಸಲಾಗುವುದು ಎಂದು ರಾಜ್ಯ ಸರಕಾರದ ಪರ ಸ್ಟೇಟ್‌ ಅಟರ್ನಿ ಜನರಲ್‌ ಕೆ.ವಿ.ಸೋಹನ್‌ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದಲ್ಲಿ ಏನಿದೆ?
ಆದೇಶವನ್ನು  ಪಾಲಿಸುವಲ್ಲಿ  ವಿಳಂಬ ನೀತಿ ಅನುಸರಿಸಿದಲ್ಲಿ  ಅದರಿಂದ ಸರಕಾರಕ್ಕೆ ಉಂಟಾಗುವ ನಷ್ಟ  ಹಾಗೂ ಅಂತಹ ಜಾಹೀರಾತು ಮತ್ತಿತರ ಬೋರ್ಡ್‌ ಗಳನ್ನು  ತೆರವುಗೊಳಿಸಲು ತಗಲುವ ಸಂಪೂರ್ಣ ವೆಚ್ಚ ವನ್ನು  ಸಂಬಂಧಪಟ್ಟಡಳಿತ ಸಂಸ್ಥೆಗಳ ಕಾರ್ಯದರ್ಶಿಯವರಿಂದ ವಸೂಲು ಮಾಡಬೇಕೆಂದು ಉತ್ಛ ನ್ಯಾಯಾಲಯವು ಆದೇಶದಲ್ಲಿ  ಸ್ಪಷ್ಟವಾಗಿ ತಿಳಿಸಿದೆ.ರಸ್ತೆ  ಬದಿಯ ಬೋರ್ಡ್‌ಗಳು ಮತ್ತು ಜಾಹೀರಾತು ಫಲಕಗಳನ್ನು  ತೆರವುಗೊಳಿಸಬೇಕಾಗಿರುವುದು ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಯವರ ಹೊಣೆಗಾರಿಕೆಯಾಗಿದೆ. ಅದನ್ನು ಅವರು ಸಮರ್ಪಕವಾದ ರೀತಿಯಲ್ಲಿ ನಿರ್ವಹಿಸಬೇಕೆಂದು ನ್ಯಾಯಾಲಯವು ಮನದಟ್ಟು ಮಾಡಿದೆ.

 ಅ.30ರೊಳಗೆ ತೆರವು
ಅ.30 ರ ಮುಂಚಿತವಾಗಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವು ಗೊಳಿಸಬೇಕೆಂದು ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಐದು ದಿನಗಳೊಳಗಾಗಿ ಜಿಲ್ಲೆಯ ಎಲ್ಲೆಡೆ ಸ್ಥಾಪಿಸಲಾಗಿರುವ ಜಾಹೀರಾತು ಸಹಿತ ಎಲ್ಲಾ ಫಲಕಗಳನ್ನು ತೆರವುಗೊಳಿಸಲಾಗುವುದು
ಡಾ| ಸಜಿತ್‌ಬಾಬು,ಜಿಲ್ಲಾಧಿಕಾರಿ

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

Democracy-day

Democracy Day: ಕೊಡಗು: 72.2 ಕಿ.ಮೀ. ಅಂತರದ ಮಾನವ ಸರಪಳಿ

Accident-Logo

Kasaragodu: ಸ್ಕೂಟರ್‌ – ಕಾರು ಢಿಕ್ಕಿ: ಯುವಕ ಸಾವು

Z-THARUN

Madikeri: ಶುಂಠಿ ತುಂಬಿದ ಎತ್ತಿನಗಾಡಿ ಬಿದ್ದು ಬಾಲಕ ಸಾವು

Madikeri: ತಹಶೀಲ್ದಾರ್‌ ಸಹಿ ನಕಲಿ ಆರೋಪ: ವಿಷ ಸೇವಿಸಿದ್ದ ನೌಕರ ಸಾವು

Madikeri: ತಹಶೀಲ್ದಾರ್‌ ಸಹಿ ನಕಲಿ ಆರೋಪ: ವಿಷ ಸೇವಿಸಿದ್ದ ನೌಕರ ಸಾವು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.