ಕುಡಿಯುವ ನೀರು ಚರಂಡಿ ಪಾಲು
Team Udayavani, Oct 27, 2018, 10:04 AM IST
ಮಹಾನಗರ: ಬೇಸಗೆ ಶುರುವಾದರೆ ಸಾಕು ನಗರದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ಪರಿಸ್ಥಿತಿ ಹೀಗಿರುವಾಗ, ಮನೆಗಳಿಗೆ ಸರಬರಾಜು ಆಗಬೇಕಾದ ಈ ಕುಡಿಯುವ ನೀರು ಚರಂಡಿಯಲ್ಲಿ ಪೋಲಾಗುತ್ತಿದ್ದರೆ ದಿನನಿತ್ಯ ಸಂಕಷ್ಟ ಎದುರಿಸುತ್ತಿರುವವರಿಗೆ ಮಾತ್ರ ನೀರಿನ ಪ್ರಾಮುಖ್ಯತೆ ಗೊತ್ತಾಗುತ್ತದೆ.
ನಗರದಲ್ಲಿಯೂ ಅನೇಕ ಕಡೆಗಳಲ್ಲಿ ಕುಡಿಯುವ ನೀರು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಚರಂಡಿ ಪಾಲಾಗುತ್ತಿದೆ. ಅದಕ್ಕೆ ಉದಾಹರಣೆಯಂತೆ ಒಂದು ವರ್ಷಗಳಿಂದ ನಗರದ ಅನೇಕ ಕಡೆಗಳಲ್ಲಿ ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿರುವುದು ಗಮನಕ್ಕೂ ಬಂದರೂ ಸಂಬಂಧಪಟ್ಟವರು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ.
ನಗರದ ಲೋವೆರ್ ಬೆಂದೂರ್‌ವೆಲ್‌ನ 3ನೇ ಅಡ್ಡರಸ್ತೆಯ ಬಳಿ ಇರುವ ಡೋಮಿನಸ್ ಪಿಜ್ಜಾ ಅಂಗಡಿಯ ಪಕ್ಕದಲ್ಲಿ ಹಾದು ಹೋಗುವ ನೀರಿನ ಪೈಪ್‌ಲೈನ್ ಒಂದು ವರ್ಷಗಳಿಂದ ಒಡೆದು ಹೋಗಿದ್ದು, 24 ಗಂಟೆಗಳ ಕಾಲ ನಿರಂತರವಾಗಿ ನೀರು ಪೋಲಾಗುತ್ತಿದೆ. ಪಾಲಿಕೆ ತನ್ನ ಗಮನಕ್ಕೆ ಬಂದರೂ, ಸರಿಪಡಿಸಲು ದಿನದೂಡುತ್ತಿದೆ. ಪಕ್ಕದಲ್ಲಿಯೇ ನೀರಿನ ಟ್ಯಾಂಕ್ ಇದ್ದು, ಅದರಿಂದ ಮನೆಗಳ ನೀರು ಸರಬರಾಜಿಗೆಂದು ಈ ಪೈಪ್ ಸಂಪರ್ಕ ಕಲ್ಪಿಸುತ್ತಿದೆ.
ಹಳೆಯ ಪೈಪ್
ಮೂವತ್ತು ವರ್ಷಗಳ ಹಳೆಯ ಕಬ್ಬಿಣದ ಪೈಪ್ ಇದಾಗಿದ್ದು, ಸುಮಾರು 10 ಇಂಚು ಗಾತ್ರವಿದೆ. ಪೈಪ್ ಪೂರ್ತಿ ತುಕ್ಕು ಹಿಡಿದಿದ್ದು, ಇದೇ ಕಾರಣಕ್ಕೆ ಅಲ್ಲಲ್ಲಿ ತೂತು ಬೀಳುತ್ತಿದೆ. ಪೈಪ್‌ನಿಂದ ಪೋಲಾದ ನೀರು ಅಲ್ಲೇ ಪಕ್ಕದಲ್ಲಿರುವ ತೋಡಿನಲ್ಲಿ ಹರಿಯುವ ಕಾರಣ ಸುತ್ತಮುತ್ತಲಿನ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಶಾಶ್ವತ ಪರಿಹಾರ ಅಗತ್ಯ
ಸಾರ್ವಜನಿಕರು ಈ ಬಗ್ಗೆ ಪಾಲಿಕೆಗೆ ದೂರು ನೀಡಿದರೆ ಸಂಬಂಧಪಟ್ಟ ಇಲಾಖೆ ಅಸಮರ್ಪಕ ಕಾಮಗಾರಿ ನಡೆಸುತ್ತದೆ. ಪೈಪ್‌ಲೈನ್‌ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು ಅರೆಬರೆ ಕಾಮಗಾರಿ ನಡೆಸುತ್ತಿದೆ. ಇದಾದ ಕೆಲವೇ ದಿನಗಳ ಬಳಿಕ ಪಕ್ಕದಲ್ಲಿಯೇ ಮತ್ತೂಂದು ತೂತಾಗಿ ನೀರು ಪೋಲಾಗಲು ಪ್ರಾರಂಭವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುತ್ತಾರೆ ಸಾರ್ವಜನಿಕರು. ಸದ್ಯ ನೀರು ಪೋಲಾಗುತ್ತಿರುವ ಸ್ಥಳದ ಪಕ್ಕದಲ್ಲಿಯೇ ಪೈಪ್‌ಲೈನ್‌ನ ಧಾರಣಾ ಸಾಮರ್ಥ್ಯ ಕುಂಠಿತವಾದ ಕಾರಣದಿಂದ ಸೆ.10ರಂದು ಸಂಜೆ 4.15ರ ವೇಳೆಗೆ ಪೈಪ್‌ಲೈನ್ ಎರಡು ಭಾಗದಲ್ಲಿ ಒಡೆದು, ನೀರು ಹೊರಕ್ಕೆ ಚಿಮ್ಮಿದ ರಭಸಕ್ಕೆ ಕಾಂಕ್ರೀಟ್ ರಸ್ತೆಯ ಪಕ್ಕದ ಪಾದಾಚಾರಿ ಮಾರ್ಗಕ್ಕೆ ಹಾನಿಯಾಗಿತ್ತು. ಜತೆಗೆ ಹತ್ತಿರದಲ್ಲಿರುವ ಫ್ಲ್ಯಾಟ್‌ನ ಒಳಗೆ ನೀರು ನುಗ್ಗಿದ ಘಟನೆ ನಡೆದಿತ್ತು.
30 ವರ್ಷದ ಹಿಂದಿನ ಪೈಪ್‌ಲೈನ್
ಸಾರ್ವಜನಿಕರು ಹೇಳುವ ಪ್ರಕಾರ ಇದು ಸುಮಾರು 30 ವರ್ಷಗಳ ಹಿಂದಿನ ಪೈಪ್ ಲೈನ್. ಈವರೆಗೆ ಯಾವುದೇ ಹೊಸ ಪೈಪ್ ಸಂಪರ್ಕವನ್ನು ಅಳವಡಿಸಲಿಲ್ಲ. ಇದೇ ಕಾರಣ ಪೈಪ್ ತುಕ್ಕು ಹಿಡಿದು ತೂತಾಗುತ್ತಿದೆ. ಸಾರ್ವಜನಿಕರು ಈ ಬಗ್ಗೆ ಪಾಲಿಕೆಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.
ಅನೇಕ ಕಡೆ ಇದೇ ಸಮಸ್ಯೆ
ಪಾಲಿಕೆಯು ಸಾರ್ವಜನಿಕರ ಉಪಯೋಗಕ್ಕೆ ಪೈಪ್ ಮೂಲಕ ನೀರು ಬಿಡುವ ಸಮಯದಲ್ಲಿ ವಿವಿಧೆಡೆ ಪೋಲಾಗುತ್ತಿದೆ. ಚಿಲಿಂಬಿ ಬಳಿ ಎರಡು ವಾರದಿಂದ ಮುಂಜಾನೆ ಹೊತ್ತು ಗೇಟ್‌ವಾಲ್ ಓಪನ್ ಮಾಡುವ ಸಮಯದಲ್ಲಿ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸಂಬಂಧ ಪಟ್ಟವರ ಗಮನಕ್ಕೆ ತಂದಿದ್ದರೂ ಇಲ್ಲಿಯವರೆಗೂ ಅದನ್ನು ಸರಿಪಡಿಸಿಲ್ಲ. ಇಲ್ಲಿಯೂ ಬೆಳಗ್ಗಿನ ಜಾವ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರು ಹರಿದು ಚರಂಡಿ ಸೇರುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ‘ಸುದಿನ’ಕ್ಕೆ ತಿಳಿಸಿದ್ದಾರೆ.
ತತ್‌ಕ್ಷಣ ಪರಿಹಾರ
ಲೋವರ್ ಬೆಂದೂರ್ ವೆಲ್ ಪ್ರದೇಶದಲ್ಲಿ ನೀರು ಪೋಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತತ್‌ಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಕಲ್ಪಿಸುತ್ತೇವೆ.
– ಭಾಸ್ಕರ್ ಕೆ.,ಮೇಯರ್
ಹೊಸ ಪೈಪ್ ಅಳವಡಿಕೆ
ಮೂವತ್ತು ವರ್ಷಗಳ ಹಿಂದಿನ ಪೈಪ್ ಆದ್ದರಿಂದ ನೀರು ಪೋಲಾಗುತ್ತಿದೆ. ಈ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೇ ಹೊಸ ಪೈಪ್ ಅಳವಡಿಸಲಾಗುವುದು.
– ನವೀನ್ ಡಿ’ಸೋಜಾ, ಸ್ಥಳೀಯ
ಕಾರ್ಪೋರೇಟರ್
ದಿನಕ್ಕೆ ಐದು ಟ್ಯಾಂಕರ್ ನೀರು ಪೋಲು
ಒಂದು ವರ್ಷಗಳಿಂದ ಈ ಪ್ರದೇಶದಲ್ಲಿ ನೀರು ಪೋಲಾಗುತ್ತಿದೆ. ಪಾಲಿಕೆ ತಾತ್ಕಾಲಿಕ ಕಾಮಗಾರಿ ನಡೆಸಿದ ಒಂದು ವಾರದೊಳಗೆ ಪುನಃ ಈ ಸಮಸ್ಯೆ ಮರುಕಳಿಸುತ್ತದೆ. ದಿನಕ್ಕೆ ಸುಮಾರು 5-6 ಟ್ಯಾಂಕರ್ ನೀರು ಪೋಲಾಗುತ್ತಿದ್ದು, ಪಾಲಿಕೆ ಈ ಬಗ್ಗೆ ಗಮನಹರಿಸಬೇಕಿದೆ.
- ರಾಕೇಶ್ ಬೋಳಾರ್, ಸ್ಥಳೀಯ ನಿವಾಸಿ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.