ವ್ಯಾಪಾರಿಗೆ ಖಾಸಗಿ ವಿಡಿಯೋ ತೋರಿಸೋ ಬೆದರಿಕೆ: 4 ಲಕ್ಷ  ಸುಲಿಗೆ


Team Udayavani, Oct 27, 2018, 11:15 AM IST

vyaparige.jpg

ಬೆಂಗಳೂರು: “ಖಾಸಗಿ ವಿಡಿಯೋ’ ಕುಟುಂಬದವರಿಗೆ ತೋರಿಸುವುದಾಗಿ ವ್ಯಾಪಾರಿಯೊಬ್ಬರಿಗೆ  ಬ್ಲಾಕ್‌ವೆುàಲ್‌ ಮಾಡಿ ಇಬ್ಬರು ಮಹಿಳೆಯರು ನಾಲ್ಕು ಲಕ್ಷ ರೂ. ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಖಾಸಗಿ ವಿಡಿಯೋ ಇಟ್ಟುಕೊಂಡು 4 ಲಕ್ಷ ರೂ. ಹಣ ಪಡೆದ ಬಳಿಕ ಪುನ: ಐದು ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟ ಮಹಿಳೆಯರ ವಿರುದ್ಧ ವ್ಯಾಪಾರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ವ್ಯಾಪಾರಿ ನೀಡಿರುವ ದೂರಿನ ಅನ್ವಯರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆ ಸಂಘಟನೆಯ ರಾಜ್ಯ ಮಹಿಳಾ ಅಧ್ಯಕ್ಷೆ ಎನ್ನಲಾದ ಭಾರತಿ ನಾಯಕ್‌, ನದಿಯಾ , ಸಾಗರ್‌ ಎಂಬುವರ ವಿರುದ್ಧ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. 

ದೂರು ನೀಡಿದ ವಿಷಯ ಗೊತ್ತಾದ ಕೂಡಲೇ ಆರೋಪಿಗಳು ತಮ್ಮ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡಿದ್ದಾರೆ. ಅವರ ಬಂಧನಕ್ಕೆ ಕ್ರಮ ವಹಿಸಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ದೂರುದಾರ ವ್ಯಾಪಾರಿ ಆರ್‌ಎಂಸಿ ಯಾರ್ಡ್‌ನಲ್ಲಿ ಹೋಲ್‌ಸೇಲ್‌ ತರಕಾರಿ ಅಂಗಡಿ ನಡೆಸುತ್ತಿದ್ದು, ಪ್ರಿಯದರ್ಶಿನಿ ಎಂಬಾಕೆ ಕೆಲಸ ಮಾಡುತ್ತಿದ್ದರು. ಈ ವೇಳೆ ಆಕೆಯ ತಂಗಿ ನದಿಯಾ ಕೂಡ ಆಗಾಗ್ಗೆ ಅಂಗಡಿ ಬಳಿ ಬಂದು ಹೋಗುತ್ತಿದ್ದಳು. ಈ ಮಧ್ಯೆ ವ್ಯಾಪಾರಿಯನ್ನು ಪರಿಚಯಿಸಿಕೊಂಡ ನದಿಯಾ, ಕಷ್ಟ ಎಂದು ಹೇಳಿಕೊಂಡು ಸಾಲ ಪಡೆದಿದ್ದಳು. ಇದಾದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ವ್ಯಾಪಾರಿ ಜತೆಗಿದ್ದ ಖಾಸಗಿ ಬೆತ್ತಲೆ ವಿಡಿಯೋವನ್ನು ನದಿಯಾ ವಿಡಿಯೋ ರೆಕಾರ್ಡ್‌ ಮಾಡಿಟ್ಟುಕೊಂಡಿದ್ದಳು.

ವ್ಯಾಪಾರಿ ಜತೆಗಿನ ಖಾಸಗಿ ವಿಡಿಯೋ ಇಟ್ಟುಕೊಂಡು ಬೇರೊಂದು  ನಂಬರ್‌ನಿಂದ ಕರೆ ಮಾಡಿದ್ದ ನದಿಯಾ, ನಿನ್ನ ಬೆತ್ತಲೆ ವಿಡಿಯೋ ಇದೆ. ಇದನ್ನು ನಿಮ್ಮ ಕುಟುಂಬಸ್ಥರಿಗೆ ಕಳುಹಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡುತ್ತೇನೆ. ಹಾಗೆ ಮಾಡಬಾರದು ಎಂದಾದರೆ ವಾಸಕ್ಕೆ ಒಂದು ಮನೆ ಹಾಗೂ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ.

ಇದಾದ ಕೆಲವೇ ದಿನಗಳಲ್ಲಿ ಸಂಘಟನೆಯ ನಾಯಕಿ ಭಾರತಿ ನಾಯಕ್‌, ವ್ಯಾಪರಿಗೆ ಕರೆ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾರೆ. ನದಿಯಾಗೆ 5 ಲಕ್ಷ ರೂ. ನನಗೆ 2ಲಕ್ಷ ರೂ, ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ಮರ್ಯಾದೆ ಹೋಗುತ್ತದೆ ಎಂದು ಹೆದರಿಕೊಂಡು ಏಪ್ರಿಲ್‌ನಿಂದ ಜೂನ್‌ ತಿಂಗಳವರೆಗೆ ಹಂತ ಹಂತವಾಗಿ 4 ಲಕ್ಷ ರೂ.  ನೀಡಿದ್ದಾರೆ. 

ಸ್ಟಿಂಗ್‌ ಆಪರೇಶನ್‌ ಮಾಡಲು ಹೋದಾಗ ಹಲ್ಲೆ: ನಾಲ್ಕು ಲಕ್ಷ ರೂ. ಪಡೆದ ಬಳಿಕ ಸುಮ್ಮನಾಗದ ಭಾರತಿ, ಪುನಃ ಕರೆ ಮಾಡಿ 5 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಇದಕ್ಕೂ ಒಪ್ಪಿದ ವ್ಯಾಪಾರಿ, 3.50 ಲಕ್ಷ ರೂ. ನೀಡಲು ಒಪ್ಪಿಕೊಂಡಿದ್ದು, ಹಣ ತಲುಪಿಸಲು ಅ.25ರಂದು ಓರಾಯನ್‌ ಮಾಲ್‌ಗೆ ಬರಲು ಹೇಳಿದ್ದಳು. ಭಾರತಿ ಕಾಟದಿಂದ ಬೇಸತ್ತು ಹೋಗಿದ್ದ ವ್ಯಾಪಾರಿ,

ಆಕೆ ಹಣ ಸುಲಿಗೆ ಮಾಡುವುದನ್ನು ಆಕೆಗೆ ಗೊತ್ತಾಗದಂತೆ ರೆಕಾರ್ಡ್‌ ಮಾಡಲು ಮಧ್ಯಾಹ್ನ 3.30ರ ಸುಮಾರಿಗೆ ಮಾಲ್‌ನ ಫ‌ುಡ್‌ಕೋರ್ಟ್‌ಗೆ ಹೋಗಿದ್ದಾರೆ. ಈ ವೇಳೆ ಮಾತುಕತೆ ನಡೆಯುತ್ತಿರುವಾಗಲೇ ವ್ಯಾಪಾರಿ ಬಳಿ ಹಿಡನ್‌ ಕ್ಯಾಮೆರಾ ಇರುವುದನ್ನು ಪತ್ತೆಹಚ್ಚಿದ ಭಾರತಿ ಹಾಗೂ ಆಕೆಯ ಮಗ ಸಾಗರ್‌, ಆತನ ಬಳಿ ಇದ್ದ ಕ್ಯಾಮೆರಾ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪರಿಚಯವಿದೆ ಎಂದು ಧಮ್ಕಿ ಹಾಕಿದ ಭಾರತಿ: ಅಪರಿಚಿತ ನಂಬರ್‌ನಿಂದ ಕರೆ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಸಂಬಂಧ ಮಧ್ಯಸ್ಥಿಕೆ ನಡೆಸಲು ಬಂದ ಭಾರತಿನಾಯಕ್‌, ಪದೇ ಪದೇ ಹಣಕ್ಕೆ ಬೇಡಿಕೆ  ಇಡುತ್ತಿದ್ದರು. ಪೊಲೀಸರಿಂದ ನಿನ್ನನ್ನು ರಕ್ಷಿಸಿದ್ದೇನೆ. ನೀನು ನನಗೆ ದೇವರಂತೆ ನೋಡಬೇಕು.ನನಗೆ ಪೊಲೀಸರು ಎಲ್ಲರೂ ಗೊತ್ತು. ಸುಮ್ಮನೆ ಆಟ ಆಡಬೇಡ  ಕೊಟ್ಟ ಮಾತಿಗೆ ತಪ್ಪದೆ ನಡೆದುಕೋ ಎಂದು ಭಾರತಿನಾಯಕ್‌ ಬೆದರಿಕೆ ಹಾಕುತ್ತಿದ್ದರು ಎಂದು ದೂರುದಾರ ವ್ಯಾಪಾರಿ ಹೇಳಿದರು.

ಟಾಪ್ ನ್ಯೂಸ್

water

Poison ಬೆರೆಸಿದ ಕಿಡಿ ಗೇಡಿಗಳು;ಸಾವಿರಾರು ಜನರ ಜೀವ ಉಳಿಸಿದ ವಾಟರ್‌ಮನ್‌!

imran-khan

Pakistan; ರಾಜಕೀಯ ಅಸ್ಥಿರತೆಯ ಬಿರುಗಾಳಿ: ಇಮ್ರಾನ್‌ ಪರ ಭಾರೀ ಪ್ರತಿಭಟನೆ,ಹಿಂಸೆ

police crime

Bhopal;1,800 ಕೋ.ರೂ. ಡ್ರಗ್ಸ್‌ ವಶ!; ದಿಲ್ಲಿಯಲ್ಲಿ ಕೊಕೇನ್‌ ಪತ್ತೆ ಬೆನ್ನಲ್ಲೇ ಘಟನೆ

HDK (3)

NDA ಅಭ್ಯರ್ಥಿ ಗೆಲ್ಲಿಸುವ ಮಾತು ಕೊಡಿ: ಎಚ್‌ಡಿಕೆ ಪರೋಕ್ಷ ಸುಳಿವು

1-reee

Chennai Airshow; ಸುಡು ಬಿಸಿಲಿಗೆ 4 ಸಾ*ವು:200 ಮಂದಿ ಆಸ್ಪತ್ರೆಗೆ

mohan bhagwat

RSS; ಭಾರತ ಹಿಂದೂ ರಾಷ್ಟ್ರ, ಅದನ್ನು ಹಿಂದೂಗಳು ರಕ್ಷಿಸಬೇಕು: ಭಾಗವತ್‌

1-sidd

Siddaramaiah; ಶೋಷಿತರ ಪರ ಇದ್ದಿದ್ದಕ್ಕೆ ಮಸಿ ಬಳಿಯುವ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Railway-min-Ashiwini

Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್‍ಯಾಪಿಡ್‌ ರೈಲು: ರೈಲ್ವೆ ಸಚಿವ

8

Bengaluru: ಅಪಾರ್ಟ್‌ಮೆಂಟ್‌ನಿಂದ ಜಾರಿ ಬಿದ್ದು ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು!

7

Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

water

Poison ಬೆರೆಸಿದ ಕಿಡಿ ಗೇಡಿಗಳು;ಸಾವಿರಾರು ಜನರ ಜೀವ ಉಳಿಸಿದ ವಾಟರ್‌ಮನ್‌!

imran-khan

Pakistan; ರಾಜಕೀಯ ಅಸ್ಥಿರತೆಯ ಬಿರುಗಾಳಿ: ಇಮ್ರಾನ್‌ ಪರ ಭಾರೀ ಪ್ರತಿಭಟನೆ,ಹಿಂಸೆ

police crime

Bhopal;1,800 ಕೋ.ರೂ. ಡ್ರಗ್ಸ್‌ ವಶ!; ದಿಲ್ಲಿಯಲ್ಲಿ ಕೊಕೇನ್‌ ಪತ್ತೆ ಬೆನ್ನಲ್ಲೇ ಘಟನೆ

HDK (3)

NDA ಅಭ್ಯರ್ಥಿ ಗೆಲ್ಲಿಸುವ ಮಾತು ಕೊಡಿ: ಎಚ್‌ಡಿಕೆ ಪರೋಕ್ಷ ಸುಳಿವು

1-reee

Chennai Airshow; ಸುಡು ಬಿಸಿಲಿಗೆ 4 ಸಾ*ವು:200 ಮಂದಿ ಆಸ್ಪತ್ರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.