ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್: ಸಮ್ಮಾನ
Team Udayavani, Oct 27, 2018, 2:29 PM IST
ಕಲ್ಯಾಣ್: ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ಇದರ ವತಿಯಿಂದ ಇತ್ತೀಚೆಗೆ ಕಲ್ಯಾಣ್ ಪೂರ್ವದ ಲೋಕ ಫೆಡರೇಶನ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ನಗರದ ಸಾಧಕ ಶಿಕ್ಷಕರುಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪ್ರಕಾಶ್ ಕುಂಠಿನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಅಂಬರ್‌ನಾಥ್ ನಗರ ಪಾಲಿಕೆ ಕನ್ನಡ ಶಾಲೆಯ ಶಿಕ್ಷಕಿ ರಾಬಿಯಾ ಎ. ರಾಜೂರ್, ಕಲ್ಯಾಣ್ ನಿವೃತ್ತ ಶಿಕ್ಷಕಿ ಸರೋಜಿನಿ ಎಸ್. ಹಿರೇಮಠ ಅವರನ್ನು ಸಮ್ಮಾನಿಸಲಾಯಿತು.
ಪರಿಸರದ ಮಾತ್ರವಲ್ಲ ಸಂಸ್ಥೆಯ ಸದಸ್ಯ ಶಿಕ್ಷಕರುಗಳಾದ ಜಯಂತಿ ಮನೋಹರ ದಾಂಡೆಕರ, ಉಷಾ ರಾಜೀವ ಹುನಗುಂದ, ಶ್ರೀದೇವಿ ಸ್ವಾಮಿ, ಪದ್ಮಜಾ ಪಾಚಾಪುರ್ಕರ್, ಶಂಕರ ರಾಥೋಡ್, ಕಮಲಾ ಪೂಜಾರಿ, ಶ್ಯಾಮಲಾ ಶೆಟ್ಟಿ, ಜಯಶ್ರೀ ಬುರ್ಲಿ, ಭಾರತಿ ಶೆಟ್ಟಿ, ಮಹಾಲಿಂಗ ಹೊಸಕೋಟಿ, ಶಂಕರ ಶಿರಹಟ್ಟಿ, ಕುಶಲ ಬಿ. ಶೆಟ್ಟಿ, ಆರ್. ಎಚ್. ಕುಲಕರ್ಣಿ ಮತ್ತು ವನಜಾಕ್ಷೀ ಜಿಗಳೂರು ಸೇರಿದಂತೆ 15 ಮಂದಿ ಶಿಕ್ಷಕ-ಶಿಕ್ಷಕಿಯರನ್ನು ಗೌರವಿಸಲಾಯಿತು. ಸಮ್ಮಾನಿತರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆಯ ದಾನಿಗಳಾದ ಎಂ. ಎಸ್. ನಾರಾ, ಸಚಿನ್ ಸಾಲ್ಯಾನ್, ವಿ. ಡಿ. ಹಿರೇಮಠ, ಶಿವಶಂಕರ್ ಕೊಂಡಗುಳಿ, ಶಿವಾನಂದ ಸಂಕಪಾಲಿ, ಬಸವಲಿಂಗಪ್ಪ ಸೊಡ್ಡಗಿ, ಅಕ್ಷಯ ಪಾಟೀಲ್, ಚೆನ್ನಬಸವಪ್ಪ ಸಿಂಧೂರ, ಜಿ. ಕೆ. ಮಡಿವಾಳ, ಸಿದ್ಧರಾಮಯ್ಯ ಕೊಳೂರು, ಇಂದಿರಾ ಶೆಟ್ಟಿಗಾರ್, ಮಮತಾ ಹುಸೇನಪ್ಪಾ ಮೊದಲಾದವರನ್ನು ಗೌರವಿಸಲಾಯಿತು.
ಅತಿಥಿಗಳಾಗಿ ಥಾಣೆ ಶ್ರೀ ಆದಿಶಕ್ತಿ ಕನ್ನಡ ಶಾಲೆಯ ಮಾಜಿ ಅಧ್ಯಕ್ಷ ಶಂಕರ ಶೆಟ್ಟಿ ಶಿಮಂತೂರು, ಗೌರವ ಅತಿಥಿಯಾಗಿ ಭಿವಂಡಿ ಹೊಟೇಲ್ ಆ್ಯಂಡ್ ಪರ್ಮಿಟ್ ರೂಮ್ ಓನರ್ ಅಸೋಸಿಯೇಶನ್ ಅಧ್ಯಕ್ಷ ದೊಂಡೆರಂಗಡಿ ಭಾಸ್ಕರ ಟಿ. ಶೆಟ್ಟಿ, ಕಲ್ಯಾಣ್ ಪರಿಸರದ ಶಿಕ್ಷಕ, ಸಮಾಜ ಸೇವಕ ಕರ್ನಾಟಕ ಮಿತ್ರಮಂಡಳಿ ಕಲ್ಯಾಣ್ ಅಧ್ಯಕ್ಷ ಮರೋಲಿ ದಿವಾಕರ ಸಾಲ್ಯಾನ್, ಸಂಸ್ಥೆಯ ಗೌರವಾಧ್ಯಕ್ಷ ಮಂಜುನಾಥ ರೈ, ಉಪಾಧ್ಯಕ್ಷ ಎಂ. ಬಿ. ಬಿರಾದರ್, ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ನಾೖಕ್, ಜೊತೆ ಕೋಶಾಧಿಕಾರಿ ಮಹಾಲಿಂಗ ಹೊಸಕೋಟಿ, ಜತೆ ಕಾರ್ಯದರ್ಶಿ ಪ್ರಕಾಶ್ ಕುಂಠಿನಿ, ಗೌರವಾಧ್ಯಕ್ಷ ಮಂಜುನಾಥ ರೈ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಬಸವರಾಜ ಜತ್ತಿ ಕಾರ್ಯಕ್ರಮ ನಿರ್ವಹಿಸಿದರು. ಕೊಟ್ರೇಶ್ ಮಠ, ಪುಟ್ಟಪ್ಪ ಹಾನಗಲ್, ಎಂ. ಬಿ. ಬಿರಾದರ್, ಸರೋಜಾ ಅಮಾತಿ, ಭಾರತಿ ಶೆಟ್ಟಿ ಅತಿಥಿಗಳನ್ನು, ಸಮ್ಮಾನಿತರನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಪ್ರಕಾಶ್ ಕುಂಠಿನಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.