ಪುಣೆ ತುಳುಕೂಟ ಪಿಂಪ್ರಿ-ಚಿಂಚ್ವಾಡ್‌ ಪ್ರಾ. ಸಮಿತಿ: ಪದಗ್ರಹಣ


Team Udayavani, Oct 27, 2018, 2:33 PM IST

2610mum11.jpg

ಪುಣೆ: ಪುಣೆ ತುಳುಕೂಟದ ಪಿಂಪ್ರಿ-ಚಿಂಚಾÌಡ್‌ ಪ್ರಾದೇಶಿಕ ಸಮಿತಿಯ 2018-2020ರ ಅವಧಿಗೆ ನೂತನ ಕಾರ್ಯಾಧ್ಯಕ್ಷರಾಗಿ ಹರೀಶ್‌ ಶೆಟ್ಟಿ ಕುರ್ಕಾಲ್‌ ಅವಿರೋಧವಾಗಿ ಆಯ್ಕೆಗೊಂಡಿದ್ದು, ಅ. 23 ರಂದು ನಿಗಿxಯ ಹೊಟೇಲ್‌ ಪೂನಾಗೇಟ್‌ ಸಭಾಂಗಣದಲ್ಲಿ ನಡೆದ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಡೆಯಿತು. ಪ್ರಾರಂಭದಲ್ಲಿ ವೇದಮೂರ್ತಿ ರಾಘವೇಂದ್ರ ಭಟ್‌ ಪ್ರಾರ್ಥನೆ ಯೊಂದಿಗೆ ಗಣ್ಯರು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆ ನೀಡಿದರು. 

ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಹರೀಶ್‌ ಶೆಟ್ಟಿ ಕುರ್ಕಾಲ್‌ ಇವರನ್ನು ಮಾತೃ ಸಂಘವಾದ ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಮತ್ತು ಪದಾಧಿ ಕಾರಿಗಳು ಪುಷ್ಪ ಗುತ್ಛ ನೀಡಿ ಅಭಿನಂದಿಸಿದರು.

ಈ ಸಂದರ್ಭ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್‌ ಶೆಟ್ಟಿ ಕುರ್ಕಾಲ್‌ ಎಲ್ಲರಿಗೂ ಶುಭ ಹಾರೈಸಿ ಮಾತನಾಡಿ, ಕಳೆದ 7 ವರ್ಷಗಳಿಂದ ಪಿಂಪ್ರಿ-ಚಿಂಚಾÌಡ್‌ ಪರಿಸರದಲ್ಲಿರುವ ತುಳುನಾಡ ಬಂಧುಗಳನ್ನು ಜಾತಿ, ಮತ, ಬಡವ ಬಲ್ಲಿದನೆಂಬ ಭೇದವಿಲ್ಲದೆ ಒಂದು ಗೂಡಿಸುವಲ್ಲಿ ಪುಣೆ ತುಳುಕೂಟದ ನಮ್ಮ ಪ್ರಾದೇಶಿಕ ಸಮಿತಿಯು ಶ್ರಮಿಸುತ್ತಾ ಬಂದಿದೆ. ಇದೀಗ ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟು ಸಮಿತಿಯ ಜವಾಬ್ದಾರಿಯುತ ಸ್ಥಾನವನ್ನು ನೀಡಿರುವುದಕ್ಕಾಗಿ ವಂದನೆಗಳನ್ನು ಸಲ್ಲಿಸುತ್ತೇನೆ. ಪಿಂಪ್ರಿ-ಚಿಂಚಾÌಡ್‌ ಪರಿಸರದಲ್ಲಿರುವ ತುಳುಕನ್ನಡಿಗರ ಎÇÉಾ ಸಂಘ ಸಂಸ್ಥೆಗಳ ಅಂತೆಯೇ ಸರ್ವ ತುಳುನಾಡ ಬಾಂಧವರ ಸಹಕಾರವನ್ನು ಬಯಸುತ್ತಾ ಸಮಿತಿಯನ್ನು ಪ್ರಗತಿಯ ಹಾದಿಯಲ್ಲಿ ಮುಂದುವರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಸಮಿತಿಯ ಪದಾಧಿಕಾರಿಗಳೆಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಸೂಕ್ತವಾಗಿ ನಿಭಾಯಿಸಿ ಕೊಂಡು ಸಮಿತಿಯನ್ನು ಬಲಪಡಿ ಸುವಲ್ಲಿ ತೊಡಗಿಸಿಕೊಳ್ಳಬೇಕು ಎಂದು ನುಡಿದರು.

ಸಮಿತಿಯ ಉಪಾಧ್ಯಕ್ಷರಾಗಿ ದಿನೇಶ್‌ ಶೆಟ್ಟಿ ಉಜಿರೆ, ಶೇಖರ ಚಿತ್ರಾಪು, ಕಾರ್ಯ ದರ್ಶಿಯಾಗಿ ವಿನಯ್‌ ಶೆಟ್ಟಿ ನಿಟ್ಟೆ, ಕೋಶಾಧಿ ಕಾರಿಯಾಗಿ ಗಣೇಶ್‌ ಅಂಚನ್‌, ಜತೆ ಕಾರ್ಯದರ್ಶಿಯಾಗಿ ಶುಭಕರ ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ಅಲ್ತಾಫ್‌ ಉಡುಪಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷರಾಗಿ ಸಂತೋಷ್‌ ಶೆಟ್ಟಿ ಪೆರ್ಡೂರು, ಉಪ ಕಾರ್ಯಾ ಧ್ಯಕ್ಷೆಯಾಗಿ ಸುಮಿತಾ ಪೂಜಾರಿ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷರಾಗಿ ನಿತಿನ್‌ ಶೆಟ್ಟಿ ನಿಟ್ಟೆ, ಉಪ ಕಾರ್ಯಾಧ್ಯಕ್ಷರಾಗಿ ಜಯ ಶೆಟ್ಟಿ ದೇಹುರೋಡ್‌, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷರಾಗಿ ಸತೀಶ್‌ ಶೆಟ್ಟಿ, ಉಪ ಕಾರ್ಯಾಧ್ಯಕ್ಷರಾಗಿ ವಿಕಾಸ್‌ ಅಡಪ, ಜನಸಂಪರ್ಕಾಧಿಕಾರಿಗಳಾಗಿ ರತ್ನಾಕರ ಶೆಟ್ಟಿ ಹಿಂಜೆವಾಡಿ, ಉದಯ್‌ ಶೆಟ್ಟಿ ಲೋನಾವಾಲ, ಚಂದ್ರಶೇಖರ ಪೂಜಾರಿ ವಾಕಡ್‌, ಕುಸುಮಾ ಸಾಲ್ಯಾನ್‌, ಯುವ ವಿಭಾಗದ ಕಾರ್ಯಾ ಧ್ಯಕ್ಷರಾಗಿ ಮಿಥುನ್‌ ಶೆಟ್ಟಿ, ಸಮಿತಿ ಸದಸ್ಯರಾಗಿ ಸಂತೋಷ್‌ ಶೆಟ್ಟಿ ವಾಕಡ್‌, ಸಂತೋಷ್‌ ಕಡಂಬ, ರಾಜೇಶ್‌ ಶೆಟ್ಟಿ ಗಿರಿಜಾ, ಚೇತನ್‌ ಶೆಟ್ಟಿ ಮೂಲ್ಕಿ, ಪ್ರಭಾಕರ ಶೆಟ್ಟಿ, ಕುಶ ಶೆಟ್ಟಿ, ಜಗದೀಶ್‌ ಶೆಟ್ಟಿ ಹವೇಲಿ, ರಘು ಪೂಜಾರಿ, ಪ್ರೇಮಾ ಪೂಜಾರಿ ತಮ್ಮ ತಮ್ಮ ಸ್ಥಾನಗಳ ಜವಾಬ್ದಾರಿಯನ್ನು ಸ್ವೀಕರಿಸಿಕೊಂಡರು. ಕಾರ್ಯಾಧ್ಯಕ್ಷ  ಹರೀಶ್‌ ಶೆಟ್ಟಿಯವರು ಎಲ್ಲರಿಗೂ ಪುಷ್ಪಗುತ್ಛ ನೀಡಿ ಅಭಿನಂದಿಸಿದರು.

ಸಭೆಯಲ್ಲಿ ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು, ಪ್ರಾದೇಶಿಕ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷ ಶ್ಯಾಮ್‌ ಸುವರ್ಣ, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಅಧ್ಯಕ್ಷ ವಿಜಯ್‌ ಎಸ್‌. ಶೆಟ್ಟಿ ಕಟ್ಟಣಿಗೆ ಮನೆ ಬೋರ್ಕಟ್ಟೆ, ಪಿಂಪ್ರಿ-ಚಿಂಚಾÌಡ್‌  ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ  ವಿಶ್ವನಾಥ ಡಿ. ಶೆಟ್ಟಿ, ಎರ್ಮಾಳ್‌ ವಿಶ್ವನಾಥ ಶೆಟ್ಟಿ, ಕೆ. ಪದ್ಮನಾಭ ಶೆಟ್ಟಿ, ಎರ್ಮಾಳ್‌ ಸೀತಾರಾಮ ಶೆಟ್ಟಿ, ಪಿಂಪ್ರಿ-ಚಿಂಚಾÌಡ್‌  ಬಂಟರ ಸಂಘದ ಉಪಾಧ್ಯಕ್ಷ ರಾಕೇಶ್‌ ಶೆಟ್ಟಿ ಬೆಳ್ಳಾರೆ, ಕಾರ್ಯದರ್ಶಿ ಅರುಣ್‌ ಶೆಟ್ಟಿ ಬೆಳ್ಳಂಪಳ್ಳಿ, ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು, ಪಿಂಪ್ರಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್‌ ಸಾಲ್ಯಾನ್‌, ಮಹಾಗಣಪತಿ ಯಕ್ಷಗಾನ ಮಂಡಳಿ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು, ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು  ಮತ್ತಿತರ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ನೂತನ್‌ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಮನೋರಂಜನೆಯ ಅಂಗವಾಗಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸುಧಾಕರ ಶೆಟ್ಟಿ ಪೆಲತ್ತೂರು, ದಿನೇಶ್‌ ಶೆಟ್ಟಿ ಉಜಿರೆ, ಸಂತೋಷ್‌ ಶೆಟ್ಟಿ ಪೆರ್ಡೂರು, ರತ್ನಾಕರ ಶೆಟ್ಟಿ ಹಿಂಜೆವಾಡಿ, ದಿನೇಶ್‌ ಶೆಟ್ಟಿ  ನಡೊÂàಡಿಗುತ್ತು, ಪ್ರತೀಕ್‌ ಜತ್ತನ್‌, ಸಂತೋಷ್‌ ಕಡಂಬ ತುಳುಕನ್ನಡ ಹಾಡುಗಳನ್ನು ಹಾಡಿ ರಂಜಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

ವರದಿ : ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.