ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆಗೆ ಚಾಲನೆ
Team Udayavani, Oct 27, 2018, 2:36 PM IST
ಮುಂಬಯಿ: ನಾಟಕಗಳು ಸಂಸ್ಕೃತಿಯ ಭವಿಷ್ಯ ಉಜ್ವಲಗೊಳಿಸುವುದರ ಜೊತೆಗೆ ಸಂಸ್ಕಾರ ಯುತ ಬದುಕು ರೂಪಿಸುತ್ತದೆ. ಕಲಾ ಮಾತೆಯ ಪರಿಪೂರ್ಣವಾದ ಅನುಗ್ರಹ ದೊಂದಿಗೆ ಇಂತಹ ಸಾಧನೆ ಸಿದ್ಧಿಯಾಗಿದ್ದು ಅಭಿನಂದನೀಯ. ನಾಟಕ ಸ್ಪರ್ಧೆಯಂತಹ ಚಿಂತನೆ ಮಹಾರಾಷ್ಟ್ರದಲ್ಲಿ ತುಳು ಭಾಷೆಯನ್ನು ಉಳಿಸಿ ಬೆಳೆಸಲು ಪ್ರೋತ್ಸಾಹದಾ ಯಕವಾಗಿದೆ. ಇದಕ್ಕೆ ತ್ರಿಮೂರ್ತಿ ಕಲಾವಿದರ ರಂಗ ಗೌರವವೇ ಸಾಕ್ಷಿಯಾಗಿದೆ ಎಂದು ಪುರೋಹಿತ ಡಾ| ಎಂ. ಜೆ. ಪ್ರವೀಣ್ ಭಟ್ ನುಡಿದರು.
ಅ.26 ರಂದು ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಾಂಸ್ಕೃತಿಕ ಉಪಸಮಿತಿ ಅಸೋಸಿ ಯೇಶನ್‌ನ ಸ್ಥಳೀಯ ಸಮಿತಿಗಳಿಗೆ ಆಯೋಜಿಸಿರುವ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾ ಧ್ಯಕ್ಷ ಶಂಕರ ಡಿ. ಪೂಜಾರಿ ಅಧ್ಯಕ್ಷತೆ ವಹಿಸಿ ಮಾತ ನಾಡಿ, ನಾಟಕದ ಎಲ್ಲಾ ದಿನಗಳಲ್ಲೂ ಈ ಸಭಾಗೃಹದ ತುಂಬಿ ತುಳುಕಲಿದೆ. ಆದ್ದರಿಂದ ನಾವು ಬಿಲ್ಲವರು ಅತಿಥಿ-ಬಂಧುಗಳಿಗೆ ಸ್ಥಳಾವಕಾಶ ಕೊಡ ಬೇಕು. ಆ ಮೂಲಕ ನಾವು ಶಿಸ್ತಿಗೆ ಪ್ರೇರಕರಾಗಬೇಕು.
ಇದೀಗಲೇ ಸ್ಪರ್ಧೆ ಮೂಲಕ 800 ಕಲಾವಿದರನ್ನು ಸಿದ್ಧಗೊಳಿಸಿದ್ದು ನಮ್ಮ ಸಾಂಸ್ಕೃತಿಕ ಸಮಿತಿಯ ಸಾಧನೆಯೇ ಸರಿ. ಇದರ ಯಶಸ್ಸಿನ ಹಿಂದೆ ಹಗಲಿರುಳಿನ ಶ್ರಮ ಅಡಗಿದೆ. ತುಳುವಿನ ಅಭಿವೃದ್ಧಿಗೆ ಈ ಸ್ಪರ್ಧೆ ಪ್ರೇರಕವಾಗಿದೆ ಎಂದರು.
ಗೌರವ ಅತಿಥಿಯಾಗಿ ಪಾಲ್ಗೊಂಡ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರು ಮಾತನಾಡಿ, ಮಹಾನಗರದಲ್ಲಿನ ಸಂಘ-ಸಂಸ್ಥೆಗಳಲ್ಲಿ ನಾಯಕತ್ವ, ಸಾಂಘಿಕ ಶಕ್ತಿ ಮತ್ತು ಒಳ್ಳೆ ಜನರ ಒಗ್ಗೂಡುವಿಕೆಯೇ ಬಿಲ್ಲವರ ಅಸೋಸಿಯೇಶನ್‌ನ ಆಸ್ತಿಯಾಗಿದೆ. ಕಲೆ-ಸಂಸ್ಕೃತಿಯನ್ನು ಸದಾ ಎತ್ತಿ ಹಿಡಿದ ಸಂಸ್ಥೆ. ನಾಟಕದಿಂದ ಸಂಸ್ಕೃತಿಯ ಮೂಲ ತಿಳಿಯುತ್ತದೆ. ಆದ್ದರಿಂದ ಬಿಲ್ಲವರು ಭವಿಷ್ಯತ್ತಿನಲಿ ವ್ಯಾಪ್ತಿ ಮೀರಿ ಎಲ್ಲಾ ಕಲಾವಿದರಿಗೆ ಸ್ಪರ್ಧೆಯನ್ನು ನಡೆಸಿ, ಕಲಾವಿದರಿಗೂ ಒಂದೇ ಜಾತಿ ಎನ್ನುವುದನ್ನು ಸಾರಲಿ ಎಂದು ನುಡಿದರು.
ಗೌರವ ಅತಿಥಿಗಳಾಗಿ ಭಾರತ್ ಬ್ಯಾಂಕಿನ ನಿರ್ದೇಶಕರುಗಳಾದ ಎಲ್. ವಿ. ಅಮೀನ್ ಮತ್ತು ಗಂಗಾಧರ್ ಜೆ. ಪೂಜಾರಿ, ಸಮಾಜ ಸೇವಕ, ಉದ್ಯಮಿಗಳಾದ ರಾಮಚಂದ್ರ ಎಂ. ಗಾಣಿಗ, ಸುರೇಶ್ ಆರ್. ಕಾಂಚನ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗಣ್ಯರು ರಂಗಕರ್ಮಿಗಳಾದ ಲಕ್ಷ್ಮಣ ಕಾಂಚನ್, ನಾರಾಯಣ ಶೆಟ್ಟಿ ನಂದಳಿಕೆ ಮತ್ತು ಅಶೋಕ್‌ಕುಮಾರ್ ಕೊಡ್ಯಡ್ಕ ಅವರಿಗೆ ವೀಳ್ಯದೆಲೆ, ಅಡಿಕೆ, ಹಿಂಗಾರ, ಶ್ರೀಫಲ, ಸ್ಮರಣಿಕೆ, ಸಮ್ಮಾನ ಪತ್ರ, ಫಲಪುಷ್ಪಗಳನ್ನಿತ್ತು ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, “ರಂಗ ಗೌರವ’ ಪ್ರದಾನಿಸಿ ಅಭಿನಂದಿಸಿ ಶುಭಹಾರೈಸಿದರು.
ಗೌ| ಪ್ರ| ಕಾರ್ಯದರ್ಶಿ ಧನಂಜಯ ಶಾಂತಿ ಪ್ರಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ದಿ-ಸಾಧನೆಗಳನ್ನು ವಿವರಿಸಿದರು. ಅಸೋಸಿಯೇಶನ್‌ನ ಉಪಾಧ್ಯಕ್ಷ, ಸಾಂಸ್ಕೃತಿಕ ಉಪಸಮಿತಿ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ ಸ್ವಾಗತಿಸಿ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದರು. ಅಸೋಸಿಯೇಶನ್‌ನ ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎಂ. ಕೋಟ್ಯಾನ್, ಸೇವಾದಳದ ದಳಪತಿ ಗಣೇಶ್ ಜಿ. ಪೂಜಾರಿ, ರಂಗಕರ್ಮಿಗಳಾದ ಡಾ| ಭರತ್‌ಕುಮಾರ್ ಪೊಲಿಪು, ಮೋಹನ್ ಮಾರ್ನಾಡ್, ಓಂದಾಸ್ ಕಣ್ಣಾಂಗಾರ್ ಸೇರಿದಂತೆ ಅಸೋಸಿಯೇಶನ್‌ನ ಹಲವು ಸ್ಥಳೀಯ ಸಮಿತಿಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಸೋಸಿಯೇಶನ್‌ನ ಪದಾಧಿಕಾರಿಗಳು ಉಪಸ್ಥಿತ ಪ್ರಾಯೋಜಕರು, ನಾಟಕಕಾರರು, ನಿರ್ದೇಶಕರು, ಕಲಾವಿದರನ್ನು ಗೌರವಿಸಿದರು. ಪದ್ಮನಾಭ ಸಸಿಹಿತ್ಲು ಪ್ರಾರ್ಥನೆಗೈದರು. ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ಹರೀಶ್ ಜಿ. ಅಮೀನ್, ಶ್ರೀನಿವಾಸ ಆರ್. ಕರ್ಕೇರ, ಸಾಂಸ್ಕೃತಿಕ ಸಮಿತಿಯ ಗೌರವ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ಅತಿಥಿಗಳನ್ನು ಗೌರವಿಸಿದರು. ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪ್ರಥಮ ದಿನ ಎನ್. ಎಂ. ಸನಿಲ್, ಉಮೇಶ್ ಪೂಜಾರಿ ಕೊಪ್ಪ ಮತ್ತು ತೋನ್ಸೆ ಸಂಜೀವ ಪೂಜಾರಿ ಪ್ರಾಯೋಜಕತ್ವದಲ್ಲಿ ಚೆಂಬೂರು ಸ್ಥಳೀಯ ಸಮಿತಿಯಿಂದ ರವಿ ಕುಮಾರ್ ಕಡೆಕಾರ್ ಕಥೆ, ಸಂಭಾಷಣೆಯ, ಸತೀಶ್ ಎರ್ಮಾಳ್ ನಿರ್ದೇಶಿಸಿದ “ಕನಕನ ಕನ’, ಸ್ವರ್ಗಿàಯ ಎಂ. ಅಪ್ಪಣ್ಣ ಪರಿವಾರ, ಕೃಷ್ಣ ಎಂ. ಪೂಜಾರಿ ನೆರೂಲ್ ಮತ್ತು ಜಗದೀಶ್ ಸಿ. ಕೌಡೂರು ಪ್ರಾಯೋಜಕತ್ವದಲ್ಲಿ ನವಿಮುಂಬಯಿ ಸ್ಥಳೀಯ ಸಮಿತಿಯಿಂದ ಪ್ರಕಾಶ್ ಧರ್ಮನಗರ ರಚಿಸಿ, ಸತೀಶ್ ಎರ್ಮಾಳ್ ಸಂಭಾಷಣೆಗೈದು, ಅನಿಲ್‌ಕುಮಾರ್ ಹೆಗ್ಡೆ ನಿರ್ದೇಶಿಸಿದ “ಏರೆಗ್ಲಾ ಪನೊಡಿc’, ಜಗನ್ನಾಥ್ ವಿ. ಕೋಟ್ಯಾನ್, ರಾಮ ಜಿ. ಸುವರ್ಣ ಮತ್ತು ಗಂಗಾಧರ್ ಕೋಟ್ಯಾನ್ ಪ್ರಾಯೋಜಕತ್ವದಲ್ಲಿ ಗೋರೆಗಾಂವ್ ಸ್ಥಳೀಯ ಸಮಿತಿಯಿಂದ ಸಮೀರ್ ಪೆಣRರ್ ರಚನೆಯ, ಲತೇಶ್ ಪೂಜಾರಿ ಸಂಭಾಷಣೆ, ನಿರ್ದೇಶನದ “ಈದಿ’ ನಾಟಕಗಳು ಪ್ರದರ್ಶನಗೊಂಡಿತು.
ಬಿಲ್ಲವ ಸಮಾಜವು ಎಂದಿಗೂ ಜಾತಿಭೇದವಿಲ್ಲದೆ ಪ್ರತಿಭಾನ್ವೇಷಣೆ ಮಾಡುತ್ತಿದೆ. ಎಲ್ಲಾ ವರ್ಗದ ಪ್ರತಿಭೆಗಳಿಗೆ ಅವಕಾಶ ಒದಗಿಸಿ ಪ್ರಕಾಶಿಸುವಂತಿದೆ. ಇದರ ಶ್ರೇಯಸ್ಸು ಕಲಾಭಿಮಾನಿಗಳಿಗೆ ಸಲ್ಲುತ್ತದೆ. ಜಾತಿಭೇದ ಸಲ್ಲದು ಎನ್ನುವ ಗುರುನಾರಾಯಣರ ಸಂದೇಶಕ್ಕೆ ಈ ಸಂಸ್ಥೆ ಬದ್ಧವಾಗಿ ಮುನ್ನಡೆಯುತ್ತಿದೆ.
– ಎಲ್. ವಿ. ಅಮೀನ್, ನಿರ್ದೇಶಕರು : ಭಾರತ್ ಬ್ಯಾಂಕ್ ಮುಂಬಯಿ
ಬಿಲ್ಲವರ ಈ ಸಂಸ್ಥೆ ಎಲ್ಲಾ ಸಮುದಾಯ, ಸಮಾಜಕ್ಕೂ ಮಾದರಿಯಾಗಿ ನಿಂತಿದೆ. ಎಲ್ಲಾ ಸಮಾಜ ದವರನ್ನೂ ಪ್ರೇರೇಪಿಸುತ್ತಾ ಬಂಧುಗಳನ್ನಾಗಿ ಬೆಸೆಯುತ್ತಿದ್ದಾರೆ. ನಾಟಕೋತ್ಸವ ಮೂಲಕ ಸಮಾಜ, ಕಲಾವಿದರು, ಕಲಾಭಿಮಾನಿಗಳಿಗೆ ಪ್ರೋತ್ಸಾಹ ನೀಡಿ ಸರ್ವರನ್ನೂ ಒಗ್ಗೂಡಿಸುತ್ತಿರುವುದು ಸ್ತುತ್ಯರ್ಹ.
– ಸುರೇಶ್ ಕಾಂಚನ್, ಉದ್ಯಮಿ, ಸಮಾಜ ಸೇವಕರು
ಬಿಲ್ಲವರದ್ದು ಮತ್ತು ನಮ್ಮ ದೋಸ್ತಿ ಬಹು ಹಳೆಯದ್ದು. ಆದುದರಿಂದ ನಮ್ಮಲ್ಲಿನ ಮಾನವೀಯತೆಯೇ ದೊಡ್ಡದು. ಅವರ ಪ್ರೋತ್ಸಾಹಕ್ಕೆ ನಾನು ಪ್ರಭಾವಿತನಾ ಗಿದ್ದೇನೆ. ನನ್ನ ಅಣ್ಣ ಸ್ವರ್ಗೀಯ ಆನಂದ ಗಾಣಿಗರೂ ರಾಜ್ಯೋತ್ಸವ ಪುರಸ್ಕೃತ ನಾಟಕ ಕಲಾವಿದ. ನನ್ನ ಪರಿವಾರವೇ ರಂಗಭೂಮಿಯ ಹಿನ್ನೆಲೆಯಿಂದ ಬಂದಿದೆ.
– ರಾಮಚಂದ್ರ ಗಾಣಿಗ , ಉದ್ಯಮಿ, ಸಮಾಜ ಸೇವಕರು
ಚಿತ್ರ-ವರದಿ:ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.