ಐಟಿ ಉದ್ಯೋಗಿಗಳ ರಂಗಾಸಕ್ತಿಗೆ ದಂಗಾದ ಸಂದರ್ಶಕರು!
Team Udayavani, Oct 27, 2018, 5:03 PM IST
ಹಾವೇರಿ: ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯಾದ್ಯಂತ ನ. 21ರಿಂದ ಮಾರ್ಚ್ 31ರ ವರೆಗೆ ಹಮ್ಮಿಕೊಂಡಿರುವ ಮಹಾತ್ಮಾಗಾಂಧೀಜಿ ಅವರ ಕುರಿತ ರಂಗ ರೂಪಕದಲ್ಲಿ ಅಭಿನಯಿಸಲು ರಾಜ್ಯದ ವಿವಿಧ ಭಾಗಗಳಿಂದ ನೂರಕ್ಕೂ ಅಧಿಕ ಕಲಾವಿದರು ಸಂದರ್ಶನಕ್ಕೆ ಹಾಜರಾದರು.
ಕಲಾವಿದರ ಆಯ್ಕೆ ಪ್ರಕ್ರಿಯೆ ಶುಕ್ರವಾರ ವಾರ್ತಾ ಭವನದಲ್ಲಿ ನಡೆಯಿತು. ‘ಗಾಂಧಿ 150’ರಂಗ ಪಯಣದ ನಿರ್ದೇಶಕ ಶ್ರೀಪಾದ್ ಭಟ್ ನೇತೃತ್ವದ ಕಲಾವಿದರ ಆಯ್ಕೆ ತಂಡದ ಎದುರು ರಂಗ ಭೂಮಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಕಲಾವಿದರು ರಂಗಾಯಣ ಹಾಗೂ ಸಮುದಾಯ ಸೇರಿದಂತೆ ವಿವಿಧ ರಂಗ ಸಂಘಟನೆಯ ಕಲಾವಿದರು, ರಂಗ ಶಿಕ್ಷಣ ಪಡೆದ ಪದವೀಧರರು ಸೇರಿದಂತೆ ನೂರಕ್ಕೂ ಹೆಚ್ಚು ಕಲಾವಿದರು ಸಂದರ್ಶನದಲ್ಲಿ ಭಾಗವಹಿಸಿದ್ದರು.
ವಿಶೇಷವಾಗಿ ಹರಿಯಾಣ ಮೂಲದ ದೆಹಲಿ ಜವಾಹರಲಾಲ್ ನೆಹರು ರಾಷ್ಟ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುಲ್‌ಷನ್, ಬೆಂಗಳೂರು, ಮೈಸೂರು ಹಾಗೂ ದೆಹಲಿಯಲ್ಲಿ ಪ್ರತಿಷ್ಠಿತ ವಿಪ್ರೋ, ಇನ್ಫೋಸಿಸ್ ಸೇರಿದಂತೆ ವಿವಿಧ ಐಟಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು ಅಭಿನಯಿಸಲು ಆಸಕ್ತಿ ತೋರಿ ಸಂದರ್ಶನಕ್ಕೆ ಹಾಜರಾಗಿ ಎಲ್ಲರ ಗಮನ ಸೆಳೆದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರ ಪರಿಕಲ್ಪನೆಯಲ್ಲಿ ಗಾಂಧಿ ರೂಪಕ ಸಿದ್ಧವಾಗಿದೆ. ಈ ರೂಪಕ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಗಾಂಧೀಜಿಯವರ ಜೀವನ ಸಂದೇಶಗಳನ್ನು ತಲುಪಿಸುವ ನಿಟ್ಟಿನಲ್ಲಿ ಬೋಳೂವಾರು ಮಹಮದ್ ಕುಂಞ ಅವರ ಬಾಪು ಗಾಂಧಿ , ಗಾಂಧಿ ಬಾಪು ಆದ ಕಥೆ, ಕಿರು ಕಾದಂಬರಿಯನ್ನು ರಂಗ ಕರ್ಮಿ ಡಾ| ಶ್ರೀಪಾದ್ ಭಟ್ ಅವರು ರಂಗರೂಪಕ್ಕಿಳಿಸಿ ನಿರ್ದೇಶನ ಮಾಡುತ್ತಿದ್ದಾರೆ. ನವೆಂಬರ್ 1 ರಿಂದ 20ರ ವರೆಗೆ ಹಾವೇರಿಯಲ್ಲಿ ತರಬೇತಿ ಜರುಗಲಿದೆ. 21ರಿಂದ ಗಾಂಧಿ ಪಯಣದ ತಿರುಗಾಟ ಆರಂಭಗೊಳ್ಳಲಿದೆ. 32 ಜನ ಕಲಾವಿದರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು.
ಐಟಿಗಿಂತ ಕಲೆ ಮುಖ್ಯ
ನಮಗೆ ಬದಲಾವಣೆ ಬೇಕಾಗಿದೆ. ತರಬೇತಿಗೆ ಆಯ್ಕೆಯಾದರೆ ಕೆಲಸ ತೊರೆಯಲು ಸಿದ್ಧ ಹಾಗೂ ರಂಗ ಕ್ಷೇತ್ರದಲ್ಲಿ ನಾವು ಮುಂದುವರೆಯಲು ಬದ್ಧ ಎಂದು ಐಟಿ ಉದ್ಯೋಗಿಗಳು ಹೇಳಿದ್ದು ಸಂದರ್ಶನ ವೇಳೆ ಎಲ್ಲರ ಗಮನ ಸೆಳೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
By Polls: ನಾನು ಉಳಿಯಬೇಕಾದರೆ ಶಿಗ್ಗಾವಿಯಲ್ಲಿ ಪಠಾಣ ಗೆಲ್ಲಬೇಕು: ಸಿಎಂ ಸಿದ್ದರಾಮಯ್ಯ
ಗತ್ತಿನೊಂದಿಗೆ ಅಖಾಡಕ್ಕಿಳಿದ ರಾಕ್‌ಸ್ಟಾರ್, ಜನನಾಯಕ, ಘಟಸರ್ಪ; ದಿಕ್ಕೆಟ್ಟು ಓಡಿದ ಹೋರಿ..
Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.