ಕಂದಾಯ ಕಟ್ಟಿ ಎಂದ್ರೆ ಕಾಸೇ ಬಿಚ್ಚೋದಿಲ್ಲ
Team Udayavani, Oct 27, 2018, 5:05 PM IST
ಚಿತ್ರದುರ್ಗ: ಗ್ರಾಮ ಪಂಚಾಯತ್‌ಗೆ ಕಂದಾಯ ಕಟ್ಟಿ ಎಂದು ಅಂಗಲಾಚಿದರೂ ಯಾರು ಕೈಯಿಂದ ಕಾಸು ಬಿಚ್ಚೋದಿಲ್ಲ ಎಂದು ತಾಪಂ ನೂತನ ಅಧ್ಯಕ್ಷ ಡಿ.ಎಂ. ಲಿಂಗರಾಜ್ ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕಿನ 38 ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಹಾಗೂ ತಾಪಂ ಸಿಬ್ಬಂದಿಗಳಿಗಾಗಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮೊಬೈಲ್‌ಗೆ ಕರೆನ್ಸಿ ಹಾಕಿಕಿಸಿಕೊಳ್ತಾರೆ, ಬೈಕ್‌ಗಳಿಗೆ ಪೆಟ್ರೋಲ್ ಹಾಕಿಸಲು ಕೈಯಲ್ಲಿ ಕಾಸಿದೆ. ಎಲ್ಲ ರೀತಿಯ ಎಂಜಾಯ್ ಮಾಡಲು ಯಾವ ಬರಗಾಲವೂ ಇಲ್ಲ. ಗ್ರಾಪಂಗೆ ಕಂದಾಯ ಪಾವತಿಸಿ ಅಂದರೆ ಬರಗಾಲ ಬಿಲ್‌ಕಲೆಕ್ಟರ್‌ಗಳಿಗೆ ಹೇಳುತ್ತಾರೆ ಎಂದರು.
ತಾಲೂಕಿನ 38 ಗ್ರಾಪಂ ಅಧ್ಯಕ್ಷರು ಈ ವಿಚಾರವಾಗಿ ಕೆಲಸ ಮಾಡಬೇಕಿದೆ. ಗ್ರಾಮದಲ್ಲಿ ಯಾರು ಗ್ರಾಪಂಗೆ ಕಂದಾಯ ಕಟ್ಟುವುದಿಲ್ಲ. ಮನೆ ಬಾಗಿಲಿಗೆ ಹೋಗಿ ಕೇಳಿದರೆ ನಿಮ್ಮ ಪಂಚಾಯಿತಿಯಿಂದ ನಮಗೆ ಯಾವ ಸೌಲಭ್ಯ ನೀಡಿದ್ದೀರೆಂದು ನಿಮಗೆ ಕಂದಾಯ ಪಾವತಿಸಬೇಕು ಎಂದು
ಸಿಬ್ಬಂದಿಗಳನ್ನು ದಬಾಯಿಸಿ ಕಳಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರಿಗೆ ಮೂಲ ಸೌಲಭ್ಯ ಒದಗಿಸಿ ನಂತರ ಕಂದಾಯ ವಸೂಲಿಗೆ ಪಿಡಿಒಗಳು ಮುಂದಾಗಬೇಕು ಎಂದರು.
ಗ್ರಾಪಂ ಅಧ್ಯಕ್ಷರು ಬಿಲ್ ಕಲೆಕ್ಟರ್‌ಗಳು ನಮ್ಮ ಹಿಡಿತದಲ್ಲಿಲ್ಲ ಎಂದು ದೂರಿದಾಗ ಬಿಲ್ ಕಲೆಕ್ಟ್ರ್ಗಳು ಆಡಿದ್ದೆ ಆಟ. ಹೂಡಿದ್ದೆ ಲಗ್ಗೆ ಎನ್ನುವುದಾದರೆ ಅಧ್ಯಕ್ಷರು, ಪಿಡಿಒಗಳು ಇರುವುದು ಏಕೆ? ತಾಲೂಕು ಪಂಚಾಯತ್ ಆದರೂ ಏಕಿರಬೇಕು ಎಂದು ತಾಪಂ ಅಧ್ಯಕ್ಷರು ಪ್ರಶ್ನಿಸಿದರು.
ಗ್ರಾಪಂ ಬಿಲ್ ಕಲೆಕ್ಟರ್‌ಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಕೆಲಸ ತೆಗೆದುಕೊಳ್ಳುವ ಹೊಣೆಗಾರಿಕೆ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳಿಗೆ ಸೇರಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಭೀಕರ ಬರಗಾಲ ಎದುರಾದಾಗಲೆಲ್ಲ ಟ್ಯಾಂಕರ್ ಗಳಲ್ಲಾದರೂ ಜನರಿಗೆ ಕುಡಿಯುವ ನೀರನ್ನು ಪೂರೈಸಲಾಗಿದೆ. ಎಲ್ಲಾ ಸೌಲಭ್ಯಗಳನ್ನು ಪಂಚಾಯಿತಿ ನೀಡಿದಾಗ ಗ್ರಾಮಸ್ಥರ ಮನವೊಲಿಸಿ ಕಂದಾಯ ವಸೂಲಿ ಮಾಡಿ ಎಂದು ಅಧ್ಯಕ್ಷರು ಮತ್ತು ಪಿಡಿಒಗಳಿಗೆ ತಾಕೀತು ಮಾಡಿದರು. ಮಳೆ-ಬೆಳೆಯಿಲ್ಲದೆ ಬರಗಾಲ ವಿರುವುದರಿಂದ ಕಡ್ಡಾಯವಾಗಿ ಕಂದಾಯ ವಸೂಲಿ ಮಾಡಬೇಡಿ.
ಬದಲಾಗಿ ಗ್ರಾಮೀಣ ಜನರ ಮನವೊಲಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಕಂದಾಯ ಸಂಗ್ರಹಿಸಿ. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಕುಡಿಯುವ ನೀರು ಪೂರೈಸಿರುವ ಬಿಲ್ ಕೊಟ್ಟಿಲ್ಲ ಎಂದು ಸಭೆಯಲ್ಲಿ ದೂರು ಹೇಳುವುದು ಸಹಜ. ಕೇವಲ ಎರಡು ಪಂಚಾಯತ್ ಕೊಟ್ಟಿಲ್ಲ ಅಂದರೆ 36 ಪಂಚಾಯಿತಿಗಳ ಬಿಲ್ ಪೆಂಡಿಂಗ್ ಇದೆ. ಇದರಿಂದ ಬೇರೆ ಪಂಚಾಯಿತಿಗಳಿಗೆ ತೊಂದರೆಯಾಗುತ್ತಿರುವುದರಿಂದ ಸರಿಪಡಿಸಿಕೊಳ್ಳಿ ಎಂದು ತಿಳಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ ಮಾತನಾಡಿ, ಮುಂದೆ ಗಮನಕ್ಕೆ ತಾರದೆ ಯಾರು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಡಿ. ಕುಡಿಯುವ ನೀರು ಪೂರೈಕೆ ಜವಾಬ್ದಾರಿಯನ್ನು ವಾಟರ್ ಸಪ್ಲೈ ಇಂಜಿನಿಯರ್‌ಗೆ ವಹಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಟ್ಯಾಂಕರ್‌ನಿಂದ ನೀರು ಪೂರೈಸಿರುವುದಕ್ಕೆ ಮುಂದೆ ಜಿಪಿಎಸ್ ಫೋಟೋ ಕಡ್ಡಾಯವಾಗಿರಬೇಕು. ಇಲ್ಲದಿದ್ದರೆ ಬಿಲ್ ಪಾವತಿಸಲಾಗುವುದಿಲ್ಲ.
ನೀರು ಪೂರೈಕೆಗೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಅರ್ಧ ಹಣವನ್ನು ಬಿಡುಗಡೆ ಮಾಡಲಾಗುವುದು. ಬಾಕಿ ಹಣವನ್ನು ನಂತರ ನೀಡುವುದಾಗಿ ಭರವಸೆ ಕೊಟ್ಟರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವು ಗ್ರಾಪಂಗಳಲ್ಲಿ ಕನಿಷ್ಠ ಮಾನವ ದಿನಗಳ ಕೂಲಿ ಕೆಲಸ ನೀಡುತ್ತಿಲ್ಲ. ಇಡೀ ರಾಜ್ಯದಲ್ಲಿಯೇ ಚಿತ್ರದುರ್ಗ ಅತ್ಯಂತ ಹಿಂದಿದೆ. ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಎನ್‌ಆರ್‌ಇಜಿಯಲ್ಲಿ ಐದು ಲಕ್ಷ ಮಾನವ ಸೃಜಿಸಿ, ಅಗತ್ಯ ಕಾಮಗಾರಿ ನಡೆಸಬೇಕು ಎಂದು ತಿಳಿಸಿದರು.
ಗ್ರಾಪಂಗಳಲ್ಲಿ ಬಿಲ್‌ಕಲೆಕ್ಟರ್‌ಗಳು ಪ್ರಭಾವಿ ಪ್ರತಿ ಗ್ರಾಮ ಪಂಚಾಯುತ್‌ಗಳಲ್ಲಿಯೂ ಬಿಲ್ ಕಲೆಕ್ಟರ್‌ಗಳದ್ದೇ ದೊಡ್ಡ ಸಮಸ್ಯೆ ಎಂದು ಬಹುತೇಕ ಗ್ರಾಪಂ ಅಧ್ಯಕ್ಷರು ಸಭೆಯಲ್ಲಿ ತಮ್ಮ ಅಸಹಾಯಕತೆ ತೋಡಿಕೊಂಡರು. ಕೂನಬೇವು ಗ್ರಾಪಂ ಅಧ್ಯಕ್ಷೆ ಕೆಲವು ಪಂಚಾಯಿತಿಗಳಲ್ಲಿ ಪಿಡಿಒ, ಅಧ್ಯಕ್ಷರನ್ನೇ ಬದಲಾಯಿಸುವಷ್ಟು ಪ್ರಭಾವಿ ಬಿಲ್‌ಕಲೆಕ್ಟರ್‌ಗಳಿದ್ದಾರೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.