ಫ್ರೆಂಚ್ ಓಪನ್: ಸಿಂಧು, ಶ್ರೀಕಾಂತ್ ನಿರಾಸೆ
Team Udayavani, Oct 28, 2018, 9:08 AM IST
ಪ್ಯಾರಿಸ್: ವಿಶ್ವದ ನಂ. 2 ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ. ಸಿಂಧು ಹಾಗೂ ಹಾಲಿ ಚಾಂಪಿಯನ್ ಕೆ. ಶ್ರೀಕಾಂತ್ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿ ನಿರಾಸೆ ಮೂಡಿಸಿದ್ದಾರೆ. ಈ ಮೂಲಕ ಸಿಂಗಲ್ಸ್ ವಿಭಾಗದಲ್ಲಿ ಭಾರತೀಯರ ಆಟ ಕೊನೆಗೊಂಡಿದೆ.
ಸಿಂಧುಗೆ ಸತತ 2ನೇ ಸೋಲು
ಪಿ.ವಿ. ಸಿಂಧು ವಿಶ್ವದ 7ನೇ ಶ್ರೇಯಾಂಕಿತೆ ಚೀನದ ಹಿ ಬಿಂಗ್‌ಜಿವೊ ವಿರುದ್ಧ 13-21, 16-21 ನೇರ ಗೇಮ್‌ಗಳಿಂದ ಸೋಲನುಭವಿಸಿ ಹೊರ ನಡೆದಿದ್ದಾರೆ. ಚೀನದ ಆಟಗಾರ್ತಿಯ ವಿರುದ್ಧ ಸಿಂಧುಗೆ ಇದು ಸತತ 2ನೇ ಸೋಲು. ಜುಲೈನಲ್ಲಿ ನಡೆದ ಇಂಡೋನೇಶ್ಯ ಓಪನ್ ಕೂಟದಲ್ಲಿ ನೇರ ಗೇಮ್‌ಗಳಿಂದ ಸೋತಿದ್ದರು. ಬಿಂಗ್‌ಜಿವೊ ಈ ಗೆಲುವಿನೊಂದಿಗೆ ಸಿಂಧು ವಿರುದ್ಧ 7-5 ಗೆಲುವಿನ ಅಂತರ ಹೊಂದಿದ್ದಾರೆ. ಆರಂಭದಲ್ಲೆ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಂಡ ಬಿಂಗ್‌ಜಿವೊ ಅವರು ಸಿಂಧು ಹೆಚ್ಚು ಅಂಕಗಳನ್ನು ಗಳಿಸಲು ಬಿಡದೆ 8 ಅಂಕಗಳ ಮುನ್ನಡೆಯಿಂದ ಮೊದಲ ಗೇಮ್‌ಗೆದ್ದರು.
ಶ್ರೀ ಕಾಂತ್‌ಗೂ ಸೋಲು
ಹಾಲಿ ಚಾಂಪಿಯನ್ ಶ್ರೀಕಾಂತ್ ಈ ಬಾರಿ ಕ್ವಾರ್ಟರ್ ಫೈನಲ್‌ನಲ್ಲೇ ಸೋತು ಅಘಾತ ಅನುಭವಿಸಿದ್ದಾರೆ. ಅವರು ಅಗ್ರ ಶ್ರೇಯಾಂಕಿತ ಕೆಂಟೊ ಮೊಮೊಟಾ ವಿರುದ್ಧ 16-21, 19-21 ನೇರ ಗೇಮ್‌ಗಳಿಂದ ಸೋತರು. ಕೆಂಟೊ ವಿರುದ್ಧ ಶ್ರೀಕಾಂತ್‌ಗೆ ಪ್ರಸಕ್ತ ಋತುವಿನಲ್ಲಿ ಸತತ 5ನೇ ಸೋಲಾಗಿದೆ. ಡೆನ್ಮಾರ್ಕ್ ಓಪನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಶ್ರೀಕಾಂತ್ ಕೆಂಟೊಗೆ ಶರಣಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Ranji match: ಉತ್ತರಪ್ರದೇಶ ಬೃಹತ್ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.