![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Oct 28, 2018, 10:53 AM IST
ಕಾಲ ಬದಲಾಗಿದೆ. ಜೊತೆಗೆ ಇದೀಗ ತಂತ್ರಜ್ಞಾನವೂ ಹೊಸದಾಗಿದೆ. ಈಗಾಗಲೇ ಹಳೆಯ ಹಾಡುಗಳಿಗೆ ಹೊಸ ಸಂಗೀತ ಸ್ಪರ್ಶ ನೀಡಿದ ಉದಾಹರಣೆ ಸಾಕಷ್ಟಿದೆ. ಹಳೆಯ ಮಧುರ ಹಾಡುಗಳಿಗೆ ಈಗಿನ ಸಂಗೀತ ಸೇರಿಸಿ ಅದೆಷ್ಟೋ ಆಡಿಯೋ, ವಿಡಿಯೋ ಆಲ್ಬಂಗಳು ಬಂದಿವೆ, ಬರುತ್ತಲೂ ಇವೆ. ಆ ಸಾಲಿಗೆ ಈಗ ಹೊಸ ಸೇರ್ಪಡೆ ಅಂದರೆ, ಪ್ರಸಿದ್ಧ ಜಾನಪದ ಹಾಡುಗಳೂ ಸೇರಿವೆ.
ಹೌದು. ಈಗ ಜನಪ್ರಿಯ ಜಾನಪದ ಹಾಡುಗಳಿಗೆ ರೀಮಿಕ್ಸ್ ಮಾಡಿ ಹೊಸ ಸೌಂಡಿಂಗ್‌ನೊಂದಿಗೆ ಆಲ್ಬಂವೊಂದನ್ನು ಬಿಡುಗಡೆ ಮಾಡಲಾಗಿದೆ. ಡಿ.ಜೆ.ಯಶ್‌ಗೌಡ ಅವರ ಮೊದಲ ಪ್ರಯತ್ನವಿದು. ಹಳೆಯ ಹಾಡುಗಳು ಇಂದಿಗೂ, ಎಂದಿಗೂ ಅಚ್ಚುಮೆಚ್ಚು. ಅಂತಹ ಹಾಡುಗಳನ್ನು ಇನ್ನಷ್ಟು ಹೆಚ್ಚು ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಯಶ್‌ಗೌಡ ಈಗ, “ಜಾನಪದ ಸಮ್ಮಿಲನ’ ಹೆಸರಿನ ಆಲ್ಬಂ ಹೊರತಂದಿದ್ದಾರೆ.
ಈ ಆಲ್ಬಂನಲ್ಲಿ “ಹೇಳ್ಕೊಳ್ಳೋಕೆ ಒಂದೂರು’, “ಸಿದ್ದಯ್ಯ ಸ್ವಾಮಿ ಬನ್ನಿ’,” ಚೆಲುವಯ್ಯ ಚೆಲುವಾ’,”ಗಲ್ಲು ಗಲೆನುತಾ,”ಚೆಲ್ಲಿದರೂ ಮಲ್ಲಿಗೆಯಾ’ ಸೇರಿದಂತೆ ಹಲವು ಜಾನಪದ ಗೀತೆಗಳಿವೆ. ಇದರೊಂದಿಗೆ ಉಪೇಂದ್ರ ಅವರ “ಎ’ ಚಿತ್ರ ಹಾಗೂ ವಿಜಯರಾಘವೇಂದ್ರ ನಟನೆಯ “ಸೇವಂತಿ ಸೇವಂತಿ’ ಹಾಡುಗಳನ್ನೂ ಬಳಸಲಾಗಿದೆ.
ಇನ್ನು, ಈ ಆಲ್ಬಂ ಗೀತೆಗಳಿಗೆ ವಿಜಯ ಪ್ರಕಾಶ್, ರಘು ದೀಕ್ಷಿತ್, ಅನನ್ಯಭಟ್ ಮತ್ತು ಹೊಸ ಗಾಯಕರಾದ ಶ್ವೇತಾ ರಾಕೇಶ್, ಶ್ವೇತಾ ಸುಬ್ರಮಣ್ಯ, ವೈಶಾಖ ವರ್ಮ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಲಹರಿ ಆಡಿಯೋ ಕಂಪೆನಿ ಮೂಲಕ ಹಾಡುಗಳನ್ನು ಹೊರತರಲಾಗಿದೆ. ಇಲ್ಲಿರುವ ಎಲ್ಲಾ ಹಾಡುಗಳು ಲಹರಿ ಸಂಸ್ಥೆಯ ಹಕ್ಕುಗಳಾಗಿದ್ದು, ಅವರ ಅನುಮತಿ ಪಡೆದೇ ಯುಟ್ಯೂಬ್‌ನಲ್ಲಿ ಹಾಡುಗಳನ್ನು ಅಪ್‌ಲೋಡ್ ಮಾಡಲಾಗಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.