ತೆರೆ ಮರೆಯಲ್ಲಿ ಕನ್ನಡ ಪಸರಿಸುವ ಕಾಯಕ


Team Udayavani, Oct 28, 2018, 11:35 AM IST

teremare.jpg

ನವೆಂಬರ್‌ 1 ಕನ್ನಡ ರಾಜ್ಯೋತ್ಸವ. ಇದು ಕನ್ನಡಿಗರ ಹಬ್ಬ. ನಾಡು, ನುಡಿ, ನೆಲ, ಜಲ, ಹಿರಿಮೆ, ಗರಿಮೆ ಪ್ರಸ್ತಾಪಿಸಿ ಸಂಭ್ರಮಿಸುವ ಸಮಯ. ಇದರ ಜತೆಗೆ ಕನ್ನಡಕ್ಕೆ ಬಂದೊದಗಿರುವ ಆತಂಕ, ಅಪಾಯಗಳ ಬಗ್ಗೆಯೂ ಚರ್ಚೆಯೂ ನಡೆಯುತ್ತದೆ. ಆದರೆ ಕನ್ನಡವನ್ನು ಪ್ರಜ್ಞಾಪೂರ್ವಕವಾಗಿ ಬಳಸುವ ಜತೆಗೆ ಇತರರೂ ನಾಡಭಾಷೆಯನ್ನು ಕಲಿತು ಬಳಸುವಂತೆ ಪ್ರೇರೇಪಿಸುವ ಕಾರ್ಯದಲ್ಲಿ ಸಾಕಷ್ಟು ವ್ಯಕ್ತಿ, ಸಂಘ ಸಂಸ್ಥೆಗಳು ತೊಡಗಿಸಿಕೊಂಡಿವೆ. ಕನ್ನಡದ ಕೈಂಕರ್ಯದಲ್ಲಿ ಸಕ್ರಿಯರಾಗಿರುವ ಕನ್ನಡ ಪರಿಚಾರಕ ಸಂಸ್ಥೆಗಳ ಪರಿಚಯದ ಜತೆಗೆ ಕನ್ನಡ ಸೇವೆಯನ್ನು ದಾಖಲಿಸುವ ಪುಟ್ಟ ಪ್ರಯತ್ನ ಇಲ್ಲಿದೆ.

ಬೆಂಗಳೂರು: ನಾಡು ನುಡಿ ರಕ್ಷಣೆಗಾಗಿ ಹೋರಾಟ, ಹರತಾಳ ನಡೆಸುವವರ ನಡುವೆಯೇ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಕನ್ನಡ ಭಾಷೆ ಉಳಿವು ಹಾಗೂ ಬೆಳವಣಿಗೆಗಾಗಿ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಕನ್ನಡವನ್ನು ಪಸರಿಸುವ ಹಾಗೂ ಕನ್ನಡವನ್ನು “ಅನ್ನದ ಭಾಷೆ’ಯಾಗಿ ಪರಿವರ್ತಿಸುವ ಕಾರ್ಯವನ್ನು ಸದ್ದಿಲ್ಲದೆ ನಡೆಸುತ್ತಿಸದ್ದಾರೆ.

ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ಸಾಕಷ್ಟು ಐಟಿ-ಬಿಟಿ ಸಂಸ್ಥೆಗಳಿದ್ದು, ಪ್ರತಿ ವರ್ಷ ಸಾವಿರಾರು ಜನ ಕೆಲಸಕ್ಕಾಗಿ ಹೊರರಾಜ್ಯ ಹಾಗೂ ವಿದೇಶಿಗಳಿಂದ ಸಿಲಿಕಾನ್‌ ಸಿಟಿಯತ್ತ ಬರುತ್ತಿದ್ದಾರೆ. ಜತೆಗೆ ಆಧ್ಯಾತ್ಮ, ಪ್ರವಾಸ, ಸಂಸ್ಕೃತಿಯ ಆಧ್ಯಯನ ಹಾಗೂ ಶಿಕ್ಷಣಕ್ಕಾಗಿ ಉದ್ಯಾನ ನಗರಿಗೆ ಹೊರಗಿನಿಂದ ಬರುವವರ ಸಂಖ್ಯೆಯೂ ಹೆಚ್ಚಿದೆ. ಅಂತಹವರಿಗೆ ಕನ್ನಡ ಭಾಷೆ ಕಲಿಸುವ ಜತೆಗೆ, ನಾಡಿನ ಸಂಸ್ಕೃತಿ ಪರಿಚಯಿಸುವ ಕನ್ನಡ ಕೈಂಕರ್ಯದಲ್ಲಿ ಕೆಲವರು ತೊಡಗಿಸಿಕೊಂಡಿದ್ದಾರೆ.

ಕನ್ನಡ ಭಾಷೆ ಕಲಿಯಲು ಹೊರ ರಾಜ್ಯ ಹಾಗೂ ವಿದೇಶಿಗರಿಗೆ ಆಸಕ್ತಿಯಿದ್ದರೂ, ಸಮಯದ ಅಭಾವ, ಸಮರ್ಪಕ ಮಾಹಿತಿಯ ಕೊರತೆಯಿಂದ ಕನ್ನಡ ಕಲಿಯುವುದು ಸವಾಲಿನ ಕೆಲಸವಾಗಿತ್ತು. ಇದೀಗ ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ ಹಾಗೂ ಲೈವ್‌ಚಾಟ್‌ ಮೂಲಕ ಹಲವಾರು ಸ್ವಯಂ ಸೇವಕರು ಹಾಗೂ ಕೆಲವು ಸಂಸ್ಥೆಗಳು ಕನ್ನಡ ಕಲಿಸಲು ಪ್ರಯತ್ನ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ವಿವಿಧ ಸಂಘ-ಸಂಸ್ಥೆಗಳ ಮೂಲಕ ಕನ್ನಡ ಕಲಿತ ಸಾವಿರಾರು ಜನರು ಇಂದು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದು, ಅವರು ಹೊರಗಿನವರೆಂದು ಗುರುತಿಸುವುದೂ ಅಸಾಧ್ಯವೆನ್ನುವ ರೀತಿಯಲ್ಲಿ ಅವರಿಂದು ಕನ್ನಡ ಕಲಿತಿದ್ದಾರೆ. ಅದರಲ್ಲೂ ತಮಿಳುನಾಡಿನ ಬ್ಯಾಂಕ್‌ ಮ್ಯಾನೆಜರ್‌ ಸತ್ಯನಾರಾಯಣ, ಕನ್ನಡದಲ್ಲಿಯೇ ಕವಿತೆಗಳನ್ನು ರಚಿಸಿದ್ದು, ಇನ್ನೂ ಕೆಲವರು ಕನ್ನಡ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವಷ್ಟರ ಮಟ್ಟಿಗೆ ಕನ್ನಡ ಕಲಿತಿದ್ದಾರೆ.

ಕನ್ನಡಿಗರಿಗೆ ಮಾರ್ಗದರ್ಶಿ: ಸಾಫ್ಟ್ವೇರ್‌ ಉದ್ಯೋಗಿಯಾಗಿರುವ ಗುರುರಾಜ್‌, ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ಕೆಲಸಕ್ಕಾಗಿ ಬರುವ ನಿರುದ್ಯೋಗಿ ಕನ್ನಡ ಯುವಕರಿಗೆ ಕೆಲಸದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಅದಕ್ಕಾಗಿಯೇ 5 ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳನ್ನು ಸೃಷ್ಟಿಸಿರುವ ಅವರು, ಎಲ್ಲೆಲ್ಲಿ ಕೆಲಸಗಳು ಖಾಲಿ ಇವೆ ಎಂಬ ಮಾಹಿತಿ ನೀಡುತ್ತಿದ್ದಾರೆ. ಜತೆಗೆ ಕಂಪನಿಗಳಿಗೆ ತಮ್ಮ ಮೂಲಕ ಕೆಲಸಕ್ಕೆ ಸೇರಿಕೊಂಡ ಉದ್ಯೋಗಿಗಳ ಮೂಲಕ, ಇತರರಿಗೂ ಕೆಲಸ ಕೊಡಿಸಲು ಶಿಫಾರಸು ಮಾಡಿಸುತ್ತಾರೆ. ಈ ರೀತಿ ಇದುವರೆಗೆ 500ಕ್ಕೂ ಹೆಚ್ಚು ಮಂದಿ ಗ್ರಾಮೀಣ ಕನ್ನಡ ಪ್ರತಿಭೆಗಳನ್ನು ಐಟಿ ಕ್ಷೇತ್ರಕ್ಕೆ ಬರುವಂತೆ ಮಾಡಿದ್ದಾರೆ.

ಇಂಗ್ಲಿಷ್‌ ಕಲಿಸಿ, ಆತ್ಮಸ್ಥೈರ್ಯ ತುಂಬುತ್ತಾರೆ: ಕನ್ನಡಿಗರಿಗೆ ಉದ್ಯೋಗ ಕೊಡಿಸಲು ಹಾಗೂ ಇಂಗ್ಲಿಷ್‌ ಕಲಿಕೆ ಮತ್ತು ಸಂದರ್ಶನ ಎದುರಿಸುವ ಬಗ್ಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಕರವೇ ಐಟಿ ವಿಭಾಗದ ಫೇಸ್‌ಬುಕ್‌ ಪೇಜ್‌ ಮಾಡುತ್ತಿದೆ. ಪ್ರಮುಖವಾಗಿ ಮಾರ್ಗದರ್ಶಿ ಶಿಬಿರಗಳನ್ನು ನಡ3ಎಸುವ ಮೂಲಕ ನೇರವಾಗಿ ತರಬೇತಿ ನೀಡಲಾಗುತ್ತಿದೆ. ಜತೆಗೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕನ್ನಡಿಗರು ಹೆಚ್ಚಾಗಬೇಕೆಂಬ ಉದ್ದೇಶದಿಂದ ಉಚಿತ ಕಾರ್ಯಾಗಾರ ಸಹ ಹಮ್ಮಿಕೊಳ್ಳಲಾಗುತ್ತಿದ್ದು, ಸಾವಿರಾರು ಜನರಿಗೆ ಫೇಸ್‌ಬುಕ್‌ ಪೇಜ್‌ನಿಂದ ಉದ್ಯೋಗ ಸಿಕ್ಕಿದೆ ಎಂದು ಕರವೇ ಐಟಿ ವಿಭಾಗದ ಗಿರೀಶ್‌ ಕರಗದ್ದೆ ಹರ್ಷ ವ್ಯಕ್ತಪಡಿಸುತ್ತಾರೆ.

ದಿಗ್ಗಜ ಸಂಸ್ಥೆಗಳಿಂದ ಕನ್ನಡ ಪಾಠ: ಹಲವಾರು ಐಟಿ-ಬಿಟಿ ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿಯೇ “ಕನ್ನಡ ಕಲಿ’ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿವೆ. ಅದರಂತೆ ಇನ್ಫೋಸಿಸ್‌, ಸಿಸ್ಕೊ ಸೇರಿದಂತೆ ಹತ್ತಾರು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕನ್ನಡ ಕಲಿಸುತ್ತಿವೆ. 

“ಕನ್ನಡ ಗೊತ್ತಿಲ್ಲ’ ಅಂದ್ರೆ ಕಲಿಸ್ತಾರೆ!: ಅನೂಪ್‌ ಮಯ್ಯ ಎಂಬವರು “ಕನ್ನಡ ಗೊತ್ತಿಲ್ಲ’ ಎಂಬ ಫೇಸ್‌ಬುಕ್‌ ಪೇಜ್‌ ಆರಂಭಿಸಿದ್ದಾರೆ. ಮೂರು ಹಂತಗಳಲ್ಲಿ ಕನ್ನಡ ಭಾಷೆ ಬರೆಯುವುದು, ಓದುವುದು ಹಾಗೂ ಮಾತನಾಡುವುದನ್ನು ಅವರು ಕಲಿಸುತ್ತಾರೆ. ಕನ್ನಡ ಗೊತ್ತಿಲ್ಲ ಫೇಸ್‌ಬುಕ್‌ ಪೇಜ್‌ ಮೂಲಕ ಕಳೆದ ಎರಡು ವರ್ಷಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಜನರಿಗೆ ಕನ್ನಡ ಕಲಿಸಲಾಗಿದೆ ಎಂದು ಪೇಜ್‌ನ ಸದಸ್ಯೆ ನಿವೇದಿತಾ ಅವರು ಹರ್ಷ ವ್ಯಕ್ತಪಡಿಸುತ್ತಾರೆ.

ದಿನಕ್ಕೊಂದು ಪದ, ವಾರಕ್ಕೊಂದು ವೀಡಿಯೋ: ಫೇಸ್‌ಬುಕ್‌ ಹಾಗೂ ಯುಟ್ಯೂಬ್‌ ಮೂಲಕ ಹೊರ ರಾಜ್ಯದವರಿಗೆ ಕನ್ನಡ ಕಲಿಸುವ ಕೆಲಸವನ್ನು ಇಂಡ್‌ ಲ್ಯಾಂಗ್ಸ್‌ ಸಂಸ್ಥೆ ಕಳೆದ 8 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಅದರಂತೆ ದಿನಕ್ಕೊಂದು ಕನ್ನಡ ಪದದ ಅರ್ಥ ಹಾಗೂ ವಾರಕ್ಕೊಂದು ವೀಡಿಯೋ ಎಂಬ ಯೋಜನೆಯಡಿ ಹೊರ ರಾಜ್ಯದವರಿಗೆ ಕನ್ನಡ ಭಾಷೆ ತಿಳಿಸಲಾಗುತ್ತದೆ ಎನ್ನುತ್ತಾರೆ ಇಂಡ್‌ ಲ್ಯಾಂಗ್ಸ್‌ನ ಸಂಸ್ಥಾಪಕ ರಾಘವೇಂದ್ರ ಪ್ರಸಾದ್‌.

ಪ್ರಮುಖವಾಗಿ ನಾವು ರಿಯಲ್‌ ಟೈಮ್‌ ಇಂಪ್ಲಿಮೆಂಟ್‌ ತರಗತಿ ಮಾಡುತ್ತೇವೆ. ನಾವು ಆನ್‌ಲೈನ್‌ ಅಥವಾ ಸ್ಕೈಪ್‌ ಮೂಲಕ ಹೇಳಿ ಕೊಟ್ಟಿದ್ದನ್ನು ಕೂಡಲೇ ರಸ್ತೆಗೆ ಹೋಗಿ ಜನರೊಂದಿಗೆ ಮಾತನಾಡಬೇಕಾಗುತ್ತದೆ. ಇದರಿಂದ ಅವರು ಶೀಘ್ರ ಕನ್ನಡ ಕಲಿಯುತ್ತಾರೆ. ಕನ್ನಡ ಭಾಷೆಯನ್ನು ಚೆನ್ನೈ, ಹೈದರಾಬಾದ್‌, ಕೇರಳ, ಇಂಗ್ಲೆಡ್‌, ನೆದರ್‌ಲ್ಯಾಂಡ್‌, ಸಿಂಗಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಕಲಿಸಲಾಗುತ್ತದೆ.

* ವೆಂ.ಸುನೀಲ್‌ಕುಮಾರ್‌

ಟಾಪ್ ನ್ಯೂಸ್

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bengaluru

ಜಿ.ಪಂ-ತಾ.ಪಂ ಮೀಸಲು: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.