ಟ್ಯಾಕ್ಸ್ ಟಾಕ್
Team Udayavani, Oct 29, 2018, 4:00 AM IST
ತೆರಿಗೆ ಎಂದರೆ ಹಾವು ಅಂತಲೇ ತಿಳಿಯುವವರು ಹೆಚ್ಚು. ನಮ್ಮ ಆದಾಯಕ್ಕೆ ಸರಿಯಾಗಿ ತೆರಿಗೆ ಕಟ್ಟಿದರೆ ಇಂಥ ಭಯ ಇರುವುದಿಲ್ಲ. ಆದರೆ ತೆರಿಗೆಗೆ ಸಂಬಂಧಿಸಿದಂತೆ ಎಲ್ಲರಿಗೂ ಹಲ ಬಗೆಯ ಪೂರ್ವಾಗ್ರಹಗಳು ಇರುವುದರಿಂದ ಟ್ಯಾಕ್ಸ್ ಅಂದರೆ ಸಾಕು; ಎಲ್ಲರೂ ಭಯ ಬೀಳುತ್ತಾರೆ. ತೆರಿಗೆಯಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಿರುತ್ತಾರೆ.
ಮುಖ್ಯವಾಗಿ, ತೆರಿಗೆಯಲ್ಲಿ ಸಿಗುವ ವಿನಾಯಿತಿಗಳು ಯಾವುವು ಅನ್ನೋದನ್ನೇ ಎಷ್ಟೋಜನ ತಿಳಿದುಕೊಂಡಿರುವುದಿಲ್ಲ. ಎಷ್ಟೋ ಸಲ ದಾನ ಮಾಡಿರುತ್ತೇವೆ. ಅದು 80ಜಿ ಅಡಿ ಬಂದಿರುತ್ತದೆ. ಅದಕ್ಕೆ ಪಡೆದ ರಸೀದಿಯನ್ನು ತೆರಿಗೆಯಲ್ಲಿ ತೋರಿಸಿದರೆ ಮಾಫಿ ಆಗುವುದಿಲ್ಲವೆ?
ಮಕ್ಕಳಿಗೆ ಕಟ್ಟುವ ಸ್ಕೂಲ್‌ನ ಶುಲ್ಕ ಇದೆಯಲ್ಲ ಅದಕ್ಕೂ ಕೂಡ ವಿನಾಯಿತಿ ಉಂಟು. ಕೆಲವೊಂದು ಆರೋಗ್ಯ ವಿಮೆ ಕೂಡ ಈ ಕ್ಲೈಮಿನ ವ್ಯಾಪ್ತಿಯಲ್ಲಿದೆ. ಅದು ಯಾವುವು ಅಂತ ತಿಳಿದು ಕೊಂಡರೆ ಇನ್‌ಕಮ್ ಟ್ಯಾಕ್ಸ್ ಕುರಿತು ಇರುವ ಭಯ ಸ್ವಲ್ಪ ಕಡಿಮೆಯಾದೀತು. ಇವೆಲ್ಲ ತೆರಿಗೆ ಅಂದರೆ ಭೂತ ಎಂಬ ಪರಿಕಲ್ಪನೆಯಲ್ಲಿ ನೋಡಿದರೆ ಕಾಣುವುದಿಲ್ಲ.
ಇದು ತಿಳ್ಕೊಳ್ಳಿ: ಡಿಪಾಜಿಟ್ ಗಳ ಮೇಲಿನ ಬಡ್ಡಿಗೆ ಮೂಲದಲ್ಲಿ ಶೇ:10 ಕಡಿತಗೊಳಿಸಿರುತ್ತಾರೆ. ಆದರೆ ಅದನ್ನೇ ಪರಿಪೂರ್ಣ ತೆರಿಗೆ ಎಂದು ಪರಿಗಣಿಸಲಾಗದು. ಏಕೆಂದರೆ, ಒಬ್ಬ ವ್ಯಕ್ತಿಗೆ ಇರುವ ಆದಾಯದ ಗಾತ್ರಕ್ಕೆ ಅನುಗುಣವಾಗಿ ೆ ಅನ್ವಯವಾಗುವ ತೆರಿಗೆಯ ಶೇಕಡಾವಾರು ನಿಷ್ಪತ್ತಿಯೂ ವ್ಯತ್ಯಯವಾಗುತ್ತದೆ. ಅದು ಶೇ:10ರಿಂದ 30ರ ತನಕವೂ ಇರಬಹುದು.
ಹೀಗಿರುವಾಗ, ಬ್ಯಾಂಕಿನವರು ಮೂಲದಲ್ಲಿ ಕಡಿತ ಮಾಡಿದ್ದಷ್ಟೇ ತೆರಿಗೆ, ಅದನ್ನು ರಿಟರ್ನಿನಲ್ಲಿ ಘೋಷಿಸಬೇಕಿಲ್ಲ ಎಂಬುದು ತಪ್ಪು ಕಲ್ಪನೆ. ಅಲ್ಲದೇ ರಿಟರ್ನಿನಲ್ಲಿ ಘೋಷಿಸಿ, ಬ್ಯಾಂಕಿನವರು ಮೂಲದಲ್ಲಿ ಕಡಿತಗೊಳಿಸಿದ ತೆರಿಗೆಯನ್ನು ರೀಫಂಡ್ ಪಡೆಯುವುದಕ್ಕೂ ಅವಕಾಶವಿದೆ. ಹಾಗಾಗಿ, ಅವೆಲ್ಲವನ್ನೂ ತೆರಿಗೆ ರಿಟರ್ನಿನಲ್ಲಿ ಸೇರಿಸುವುದು ಸೂಕ್ತ.
ಸರ್ಕಸ್‌ಬೇಡ: ಒಂದು ಸತ್ಯ ಗೊತ್ತಿರಬೇಕು. ಬ್ಯಾಂಕಲ್ಲಿ ದುಡ್ಡು ಇಟ್ಟೋರಿಗೆಲ್ಲಾ ತೆರಿಗೆ ತಲೆಯ ಮೇಲೆ ಬಂದು ಕೂರುವುದಿಲ್ಲ. ಇದಕ್ಕೂ ವಿನಾಯಿತಿ ಉಂಟು. ಅಂದರೆ, ಯಾರಿಗೆ ವಾರ್ಷಿಕ ವರಮಾನ ಎರಡೂವರೆ ಲಕ್ಷ ಮೀರುವುದಿಲ್ಲವೋ ಅಂಥವರು 15ಜಿ.
ಎಚ್ ಅರ್ಜಿ ಸಲ್ಲಿಸುವ ಮೂಲಕ ತೆರಿಗೆಯಲ್ಲಿ ವಿನಾಯಿತಿ ಕೇಳಬಹುದು. ಆಗ ನಿಮಗೆ ಬರುವ ಬಡ್ಡಿಯಲ್ಲಿ ಟಿಡಿಎಸ್ ಕಟ್ಟಾಗುವುದಿಲ್ಲ. ಬಹುತೇಕರು, ತಂದೆ, ತಾಯಿ, ಹೆಂಡತಿ- ಹೀಗೆ ಯಾರಿಗೆ ತಿಂಗಳ ಆದಾಯ ಇರುವದಿಲ್ಲವೋ ಅಂಥವರ ಹೆಸರಲ್ಲಿ ಹಣ ಇಟ್ಟಿರುತ್ತಾರೆ. ಆದರೆ ತೆರಿಗೆಯ ಭಯದಿಂದ ಅದನ್ನೂ ಮರೆತು ಹೋಗಿರುತ್ತಾರೆ.
ಇನ್ನೂ ಕೆಲವು ಭೂಪರಿದ್ದಾರೆ. ತಮ್ಮಲ್ಲಿರುವ ಹಣವನ್ನು ತೆರಿಗೆಯ ಕಾರಣದಿಂದಾಗಿ ಅದು ಕಡಿಮೆ ಆಗುತ್ತದೆ ಎಂದು ಹಲವಾರು ಬ್ಯಾಂಕ್‌ಗಳಲ್ಲಿ ಎಫ್.ಡಿ. ಮಾಡಿ ಇಟ್ಟಿರುತ್ತಾರೆ. ಉಳಿತಾಯದ ಲೆಕ್ಕದಲ್ಲಿ ದೊಡ್ಡ ಮೊತ್ತ ಕಾಣಬಾರದು ಅಂತ. ಆದರೆ ಪಾನ್ ನಂಬರ್ ಒಂದೇ ಆಗಿರುವುದರಿಂದ ಇಂಥವರು ತೆರಿಗೆ ಬಲೆಗೆ ಬೀಳುತ್ತಾರೆ. ಇಂಥ ಸರ್ಕಸ್ಸು ಏಕೆ ಬೇಕು?
ಉದ್ಯೋಗ ಬದಲಿಸಿದರೆ: ಆರ್ಥಿಕ ವರ್ಷದಲ್ಲಿ ಕೆಲಸ ಬಿಟ್ಟರೆ ಸಮಸ್ಯೆ ಇಲ್ಲ. ಆದರೆ, ನಡುವೆ ಕೆಲಸ ಬಿಟ್ಟು, ಹೊಸ ಕೆಲಸಕ್ಕೆ ಸೇರಿಕೊಂಡರೆ ಹಳೆ ಕೆಲಸದ ಆದಾಯವನ್ನು ಎಷ್ಟೋ ಜನ ತೆರಿಗೆ ವ್ಯಾಪ್ತಿಗೆ ತರುವುದೇ ಇಲ್ಲ. ಇದರಿಂದ, ಏನೋ ದೊಡ್ಡ ತೆರಿಗೆ ಮೊತ್ತ ಉಳಿದು ಬಿಡುತ್ತದೆ ಅಂತೇನಿಲ್ಲ. ಆದರೂ, ಸಂಬಳದಲ್ಲಿ ಆಗಿರುವ ಬದಲಾವಣೆಯನ್ನು ಹೇಳಿಬಿಡುವುದು ಒಳ್ಳೆಯದು.
ಇದೇ ರೀತಿ, ಹೆಂಡತಿ ಅಥವಾ ಮಕ್ಕಳ ಹೆಸರಿನಲ್ಲಿ ಮಾಡಿರುವ ಹೂಡಿಕೆಗಳನ್ನು, ಅವುಗಳಿಂದ ಬರುವ ಬಡ್ಡಿಯನ್ನು, ಯಜಮಾನನ ತೆರಿಗೆ ರಿಟರ್ನ್ನಲ್ಲಿ ತೋರಿಸಬೇಕು ಅನ್ನೋದು ನಿಯಮ. ಎಷ್ಟೋ ಮಂದಿ ಅವಳು ರಿಟರ್ನ್ ಸಲ್ಲಿಸಲು ಬೇಕಾದಷ್ಟು ವರಮಾನ ಹೊಂದಿಲ್ಲ ಅಂತ ಸುಮ್ಮನಾಗಿ ಬಿಡುತ್ತಾರೆ. ಒಂದು ಪಕ್ಷ ಈ ರೀತಿ ತೆರಿಗೆಪಾವತಿಯಲ್ಲಿ ಚ್ಯುತಿ ಮಾಡಿದ್ದು ಇಲಾಖೆಯ ಗಮನಕ್ಕೆ ಬಂದರೆ ಅದಕ್ಕೆ ಮುಂದೆ ದಂಡಪಾವತಿ ಮಾಡಬೇಕಾಗಬಹುದು.
* ನಿರಂಜನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.