ಗಡಿಪಿಲ: ಅಪಾಯಕಾರಿ ರೈಲು ಕಂಬಿ ತೆರವು
Team Udayavani, Oct 28, 2018, 2:52 PM IST
ನರಿಮೊಗರು: ಕಾಣಿಯೂರು-ಮಂಜೇಶ್ವರ ಹೆದ್ದಾರಿಯ ಮಧ್ಯೆ ನರಿಮೊಗರು ಸಮೀಪದ ಗಡಿಪಿಲ ಉದ್ದಮಜಲುವಿನಲ್ಲಿ ರೈಲು ಕಂಬಿಗಳು ದ್ವಿಚಕ್ರ ವಾಹನ ಸವಾರರಿಗೆ ಮೃತ್ಯುಪಾಶವಾಗಿ ಪರಿಣಮಿಸಿತ್ತು. ಈ ಬಗ್ಗೆ ‘ಉದಯವಾಣಿ’ ಸುದಿನ ವರದಿ ಪ್ರಕಟಿಸಿದ್ದು, ರೈಲ್ವೆ ಇಲಾಖೆಯವರು ಅಪಾಯಕಾರಿ ಕಂಬಿಗಳನ್ನು ತೆರವು ಮಾಡಿದ್ದಾರೆ.
ಈ ಹಿಂದೆ ರಸ್ತೆ ಕಿರಿದಾಗಿದ್ದ ಸಂದರ್ಭ ರೈಲು ಹಳಿ ಸಾಗುವ ಕಾರಣ ಸಣ್ಣ ಅಂತರವಿರುವ ರೈಲು ಕಂಬಿಗಳನ್ನು ಹಾಕಲಾಗಿತ್ತು. ಆದರೆ ಈಗ ರಸ್ತೆ ಅಭಿವೃದ್ಧಿಯಿಂದಾಗಿ ಹಿರಿದಾಗಿದ್ದು, ಹೊಸದಾಗಿ ಈಗಿನ ರಸ್ತೆಗೆ ಅನುಗುಣವಾಗಿ ಕಂಬಿಗಳನ್ನೂ ಹಾಕಲಾಗಿತ್ತು. ಆದರೆ ಈ ಹಿಂದೆ ಹಾಕಲಾಗಿದ್ದ ಕಂಬಿಗಳನ್ನು ತೆರವು ಮಾಡದೆ ಹಾಗೇ ಬಿಟ್ಟಿದ್ದರಿಂದ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು.
ಈ ಸಮಸ್ಯೆಯ ಕುರಿತು ಸುದಿನ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು.
ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ರೈಲು ಕಂಬಿಗಳನ್ನು ರೈಲ್ವೆ ಇಲಾಖೆ ತೆರವುಗೊಳಿಸುವ ಮೂಲಕ ಅಪಾಯವನ್ನು ದೂರ ಮಾಡಿದೆ. ಹಾಗೆಯೇ ಈಗಿರುವ ರೈಲು ಕಂಬಿಗೆ ರಿಫ್ಲೆಕ್ಟರ್ ಅನ್ನು ಅಳವಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.