ಪ್ರಖರ ದೀಪ ತೆರವಿಗೆ ಸಾರಿಗೆ ಇಲಾಖೆ ಕ್ರಮ
Team Udayavani, Oct 29, 2018, 10:00 AM IST
ಕುಂದಾಪುರ: ಹೆದ್ದಾರಿಗಳಲ್ಲಿ ರಾತ್ರಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಎಲ್ಲ ವಾಹನಗಳಲ್ಲಿ ಪ್ರಖರ ಬೆಳಕು ಸೂಸುವ ಹೆಲೋಜಿನ್ ದೀಪಗಳ ತೆರವಿಗೆ ಉಡುಪಿಯ ಪ್ರಾದೇಶಿಕ ಸಾರಿಗೆ ಇಲಾಖೆ ಮುಂದಾಗಿದೆ. ಎದುರು ವಾಹನಗಳಿಗೆ ತೊಡಕಾಗುವ ಪ್ರಖರ ಹೆಲೋಜಿನ್ ದೀಪಗಳನ್ನು ಅಳವಡಿಸಬಾರದು ಎನ್ನುವ ಕಾನೂನು ಇದ್ದರೂ ಯಾರೂ ಪಾಲಿಸುತ್ತಿಲ್ಲ. ತಡವಾಗಿಯಾದರೂ ಇಲಾಖೆ ಎಚ್ಚೆತ್ತುಕೊಂಡಿದೆ.
ಸ್ವಇಚ್ಛೆಯಿಂದ ತೆರವು
ಬೇರೆ ವಾಹನಗಳಿಗೆ ತೊಂದರೆ ಮಾಡುವಂತಹ ದೀಪಗಳನ್ನು ವಾಹನ ಮಾಲಕರು ಸ್ವಇಚ್ಛೆಯಿಂದ ತೆರವು ಮಾಡಿ ಎನ್ನುವುದಾಗಿ ಸಾರಿಗೆ ಇಲಾಖೆ ಮನವಿ ಮಾಡಿದೆ.
ವಾರದ ಗಡುವು
ಅಪಾಯಕಾರಿ ಲೈಟ್ ತೆರವಿಗೆ ವಾಹನ ಸವಾರರಿಗೆ ಒಂದು ವಾರದ ಗಡುವು ನೀಡಲಾಗಿದೆ. ಆ ಬಳಿಕವೂ ತೆರವು ಮಾಡದಿದ್ದಲ್ಲಿ, ನಿರಂತರ ಕಾರ್ಯಾಚರಣೆ ನಡೆಸಿ, ಕಾನೂನಿನಂತೆ ತಲಾ 1 ಸಾವಿರ ರೂ. ದಂಡ ವಿಧಿಸಲಾಗುವುದು. ಇದನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಜಾರಿಗೆ ತರಲು ಚಿಂತಿಸಲಾಗಿದೆ ಎಂದು ಉಡುಪಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಆಯುಕ್ತ ರಮೇಶ್ ವರ್ಣೇಕರ್ “ಉದಯವಾಣಿ’ಗೆ ತಿಳಿಸಿದ್ದಾರೆ.
2 ವರ್ಷದಿಂದ ಇಲ್ಲ ಸಭೆ
ರಸ್ತೆ ಅಪಘಾತ ನಿಯಂತ್ರಿಸುವಲ್ಲಿ ರಸ್ತೆ ಸುರಕ್ಷತಾ ಸಮಿತಿಯ ಪಾತ್ರ ಮಹತ್ವದ್ದಾಗಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಡಿಸಿ, ಎಸ್ಪಿ, ಆರ್‌ಟಿಒ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯೇ ನಡೆದಿಲ್ಲ. ಉಡುಪಿ ಜಿಲ್ಲೆಯಲ್ಲಿ ಕಳೆದ ತಿಂಗಳು ಸಮಿತಿ ಸಭೆ ನಡೆದಿತ್ತು.
ಸಮಿತಿ ಕ್ರಿಯಾಶೀಲವಾಗಬೇಕು
ಇತ್ತೀಚೆಗಿನ ಮಾಡೆಲ್‌ಗಳ ಕಾರುಗಳಲ್ಲಿ ಪ್ರಖರ ಬೆಳಕು ಸೂಸುವ ದೀಪ ಇರುವುದು ಸಾಬೀತಾಗಿದೆ. ರಾತ್ರಿ ವೇಳೆ ಸಂಭವಿಸುವ ಹೆಚ್ಚಿನ ರಸ್ತೆ ಅಪಘಾತ ಪ್ರಕರಣಗಳಿಗೆ ಹೆಲೋಜಿನ್ ಲೈಟ್‌ಗಳೇ ಕಾರಣ. ಇವುಗಳ ತೆರವು ಸಾರಿಗೆ ಇಲಾಖೆ ಯಿಂದ ಮಾತ್ರ ಅಸಾಧ್ಯ. ಮೋಟಾರು ಕಾಯ್ದೆ ಉಲ್ಲಂಘನೆ ಸಂಬಂಧ ಡಿಸಿ, ಎಸ್ಪಿ , ಆರ್‌ಟಿಒ ಆಯುಕ್ತರನ್ನೊಳಗೊಂಡ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗೆ ಹೆಚ್ಚಿನ ಅಧಿಕಾರವಿದೆ. ಇದು ಕ್ರಿಯಾಶೀಲವಾದರೆ ಅಪಘಾತ ಕಡಿಮೆಯಾಗಬಹುದು.
ಗಂಭೀರವಾಗಿ ಪರಿಗಣಿಸಿದ್ದೇವೆ
ಹೆದ್ದಾರಿಯಲ್ಲಿ ಇತ್ತೀಚೆಗೆ ಸಂಭವಿಸಿರುವ ಕೆಲವು ಅಪಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಉಡುಪಿ ಜಿಲ್ಲೆಯಾದ್ಯಂತ ವಾಹನಗಳ ಹೆಲೋಜಿನ್ ದೀಪ ತೆರವು ಮಾಡಲು ಮುಂದಾಗಿದ್ದೇವೆ. ವಾಹನ ಸವಾರರಿಗೆ ಒಂದು ವಾರ ಸಮಯ ನೀಡಲಾಗಿದೆ, ತಪ್ಪಿದಲ್ಲಿ ದಂಡ ವಿಧಿಸಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲಿ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲಾಗುವುದು.
ರಮೇಶ್ ವರ್ಣೇಕರ್, ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ
ಸಿಬಂದಿ ಕೊರತೆ
ಅಪಘಾತ ತಡೆಯಲು ಹೆಲೋಜಿನ್ ಲೈಟ್‌ಗಳಿಗೆ ಕಡಿವಾಣ ಹಾಕಬೇಕಾದುದು ತೀರಾ ಅಗತ್ಯ. ಆದರೆ ಇದರ ಕಾರ್ಯಾಚರಣೆಗೆ ಬಂಟ್ವಾಳ ಹಾಗೂ ಪುತ್ತೂರು ವ್ಯಾಪ್ತಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಸಿಬಂದಿ ಕೊರತೆ ಅಡ್ಡಿ ಯಾಗಿದೆ. ಪೊಲೀಸ್ ಇಲಾಖೆಯೊಂದಿಗೆ ಜಂಟಿಯಾಗಿ ಮುಂದಿನ ದಿನಗಳಲ್ಲಿ ಈ ಸಂಬಂಧ ಕಾರ್ಯಾಚರಣೆ ನಡೆಸಲು ಚಿಂತನೆ ನಡೆಸಲಾಗುವುದು.
ಜಿ.ಎಸ್. ಹೆಗ್ಡೆ , ಸಾರಿಗೆ ಆಯುಕ್ತರು (ಪ್ರಭಾರ) ಪುತ್ತೂರು ಹಾಗೂ ಸಹಾಯಕ ಆಯುಕ್ತರು, ಬಂಟ್ವಾಳ
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.