ಕೌನ್ಸೆಲಿಂಗ್‌ ಸ್ಥಗಿತ ಖಂಡಿಸಿ ಶಿಕ್ಷಕರ ಧರಣಿ

Team Udayavani, Oct 29, 2018, 12:28 PM IST

m4-counseling.jpg

ಮೈಸೂರು: ಏಕಾಏಕಿ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ಸ್ಥಗಿತಗೊಳಿಸಿದ್ದನ್ನು ಖಂಡಿಸಿ ಹಾಗೂ ವರ್ಗಾವಣೆ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಆರೋಪಿಸಿ ನೂರಾರು ಶಿಕ್ಷಕರು ಭಾನುವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ನಗರದ ಮಹಾರಾಣಿ ಎನ್‌ಟಿಎಂಎಸ್‌ ಶಾಲೆಯಲ್ಲಿ ನಡೆಯುತ್ತಿದ್ದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಪ್ರಕ್ರಿಯೆ ಆಯೋಜಿಸಲಾಗಿತ್ತು. ಕೋರಿಕೆ ವರ್ಗಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರ ಸೇರಿದಂತೆ ವಿವಿಧೆಡೆಗಳಿಂದ ನೂರಾರು ಶಿಕ್ಷಕರು ಪಾಲ್ಗೊಂಡಿದ್ದರು. ಆದರೆ ಏಕಾಏಕಿ ನಡೆಯುತ್ತಿದ್ದ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಶಿಕ್ಷಕರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು. 

ಶಿಕ್ಷಕರ ಕೌನ್ಸೆಲಿಂಗ್‌ ನಡೆಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಅಂದಾಜು 10-11 ಶಿಕ್ಷಕರಿಗೆ ಅವರ ಕೋರಿಕೆ ಮೇರೆಗೆ ವರ್ಗಾವಣೆ ಆದೇಶವನ್ನು ನೀಡಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ “ಎ’ ವಲಯ(ನಗರ ಪ್ರದೇಶ)ದಲ್ಲಿ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದು, “ಸಿ’ ವಲಯ(ಗ್ರಾಮೀಣ ಪ್ರದೇಶ)ಕ್ಕೆ ಹೋಗಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಅವರಿಗೆ ನೀಡಿರುವ ವರ್ಗಾವಣೆ ಆದೇಶವನ್ನು ಕೂಡಲೇ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ಏಕಾಏಕಿ ಸ್ಥಗಿತಗೊಳಿಸಿದ್ದಾರೆ. ಇದರಿಂದ ಅಸಮಾಧಾನಗೊಂಡು ಪ್ರತಿಭಟನೆ ನಡೆಸಿದ ಶಿಕ್ಷಕರು, ವರ್ಗಾವಣೆ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಆರೋಪಿಸಿದ್ದಲ್ಲದೆ, ಶೀಘ್ರವೇ ವರ್ಗಾವಣೆ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿದರು. 

ಇದರಿಂದಾಗಿ ಕೌನ್ಸೆಲಿಂಗ್‌ ನಡೆಯುತ್ತಿದ್ದ ಎನ್‌ಟಿಎಂಎಸ್‌ ಶಾಲೆಯ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಡಿಡಿಪಿಐ ಮಮತಾ ಮಾತನಾಡಿ, ಅಧಿಕಾರಿಗಳು ಶಿಕ್ಷಣ ಇಲಾಖೆ ಕಾರ್ಯದರ್ಶಿ ಆದೇಶದ ಮೇರೆಗೆ ವರ್ಗಾವಣೆ ನಿಲ್ಲಿಸಿದ್ದು, ಯಾವ ಕಾರಣಕ್ಕೆ ವರ್ಗಾವಣೆ ನಿಲ್ಲಿಸಿದ್ದಾರೆ ಎಂಬುದು ತಿಳಿದಿಲ್ಲ. ಹೀಗಾಗಿ ಶಿಕ್ಷಣ ಇಲಾಖೆಯಿಂದ ಮುಂದಿನ ಆದೇಶ ಬರುವವರೆಗೂ ಕೌನ್ಸೆಲಿಂಗ್‌ ಮಾಡುವುದಿಲ್ಲ. ಶಿಕ್ಷಕರು ಲಿಖೀತ ರೂಪದಲ್ಲಿ ದೂರು ನೀಡಿದರೆ ಇಲಾಖೆ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು. 

ನಗರದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಶಿಕ್ಷಕರ ಕೋರಿಕೆ ಕೌನ್ಸೆಲಿಂಗ್‌ ಪ್ರಕ್ರಿಯೆ ಮೊದಲ ದಿನದಂದು ತಾಂತ್ರಿಕ ಕಾರಣದಿಂದ ನಡೆಯಲಿಲ್ಲ. ಹೀಗಾಗಿ 400ಕ್ಕೂ ಹೆಚ್ಚು ಶಿಕ್ಷಕರು ಭಾನುವಾರ ನಡೆದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದರು. ಆದರೆ ಏಕಾಏಕಿ ಕೌನ್ಸೆಲಿಂಗ್‌ ಪ್ರಕ್ರಿಯೆ ಸ್ಥಗಿತಗೊಳಿಸಿದ್ದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ಕೌನ್ಸೆಲಿಂಗ್‌ ವೇಳೆ ನೀಡಿರುವ ವರ್ಗಾವಣೆ ಆದೇಶ ಹಿಂದಿರುಗಿಸುವಂತೆ ಹೇಳಿರುವುದು ಗೊಂದಲ ಮೂಡಿಸಿದೆ. 
-ಕುಮಾರ್‌, ಶಿಕ್ಷಕ. 

ಟಾಪ್ ನ್ಯೂಸ್

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

MVA-maha

Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್‌!

Lokasabha

Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ

Sim-Card

Cyber Crime: ಸೈಬರ್‌ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ

Rahul

Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್‌ ಗಾಂಧಿ

Rain-TN

Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

MVA-maha

Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್‌!

Lokasabha

Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ

Sim-Card

Cyber Crime: ಸೈಬರ್‌ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.