ತಳಸಮುದಾಯದ ತಳಮಳ ಬಂಗಾರಿಯಲ್ಲಿ ಅಡಕ
Team Udayavani, Oct 29, 2018, 12:28 PM IST
ಮೈಸೂರು: ಅಭಿರುಚಿ ಪ್ರಕಾಶನ ಮತ್ತು ಗುರುತು ತಂಡದಿಂದ ಲೇಖಕ ವರದಳ್ಳಿ ಆನಂದ ಅವರ “ಬಂಗಾರಿ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಕರಿಕಲ್, ಬಂಗಾರಿ ಕಾದಂಬರಿ ಓದುವಾಗ ದೇವನೂರು ಮಹದೇವ ಅವರ ಕಥೆಯನ್ನು ಮತ್ತೆ ಓದುತ್ತಿರುವ ಭಾವನೆ ಮೂಡಲಿದೆ. ಈ ಕೃತಿ ಮಹದೇವ ಅವರ ಭಾಷೆ ಮುಂದುವರಿಕೆಯಾಗಿ ಗೋಚರಿಸುತ್ತಿದ್ದು, ಕೃತಿಯ ಹಲವು ಪಾತ್ರ ಮತ್ತು ಸನ್ನಿವೇಶಗಳು ಚೋಮನ ದುಡಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳನ್ನು ನೆನಪಿಸುತ್ತವೆ.
ಅಂತಹ ಬರವಣಿಗೆ ಸ್ವರೂಪ ಈ ಕೃತಿಯಲ್ಲಿ ಅಡಗಿದ್ದು, ಕಾದಂಬರಿಯಲ್ಲಿ ಹುಟ್ಟು-ಸಾವಿನ ಚರ್ಚೆ, ಜಾತಿ-ಧರ್ಮ-ಅಸ್ಪಶ್ಯತೆ ಲೇಖಕರನ್ನು ಬಹಳವಾಗಿ ಕಾಡಿವೆ ಎನಿಸುತ್ತದೆ. ಜಾತಿ, ಧರ್ಮ ಮೀರಿ ನಡೆಯುವ ಹಲವು ಸನ್ನಿವೇಶಗಳು, ತಳಸಮುದಾಯದ ಹೆಣ್ಣುಮಕ್ಕಳ ಗಟ್ಟಿತನವನ್ನು ಕೃತಿಕಾರ ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂದು ಪ್ರಶಂಶಿಸಿದರು.
ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಬಂಗಾರಿ ಒಂದು ಓದಿಗೆ ಅರ್ಥ ಆಗಲ್ಲ, ಭಾಷೆಯ ತೂಕ ಭಾರವಾಗಿದೆ. ಕೃತಿಯ ಗ್ರಾಮ್ಯ ಭಾಷೆ ಸೊಗಡು ಚೆನ್ನಾಗಿದೆ. ಅದನ್ನು ಅರಗಿಸಿಕೊಳ್ಳಲು ಇಂಥ ಕಾದಂಬರಿಗಳನ್ನು ಹೆಚ್ಚು ಸಲ ಓದಬೇಕು. ಕೃತಿ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ಮನುಷ್ಯತ್ವದ ಮೇಲೆ ಬೆಳಕು ಚೆಲ್ಲಿದ ಮಾನವೀಯ ಕಥೆ ಬಂಗಾರಿ ಎಂದರು.
ಚಿಂತಕ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ದೇವನೂರು ಮಹದೇವ ಅವರ ಕುಸುಮಬಾಲೆ, ಮರಣ ಮಂಡಲ ಮಧ್ಯದೊಳಗೆ, ಊರು-ಕೇರಿ ಕೃತಿಗಳ ನಂತರದ ಕೃತಿಯಾಗಿ ಬಂಗಾರಿಯನ್ನು ಇಟ್ಟು ನೋಡಬಹುದು. ಅಷ್ಟು ಮೌಲ್ಯಯುತ ಕಾದಂಬರಿಯಾಗಿದೆ. ಇದೇ ವೇಳೆ ಲೇಖಕ ವರಹಳ್ಳಿ ಆನಂದ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶಕ ಅಭಿರುಚಿ ಗಣೇಶ್, ಡಾ.ಹೊಂಬಯ್ಯ, ಯುವ ಲೇಖಕ ಎನ್.ಪುನೀತ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
EVM Issue: ಇವಿಎಂಗೂ ಮುನ್ನ ರಾಹುಲ್‌ರನ್ನು ಬದಲಿಸಿ ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್
MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ
Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ
Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್!
Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.