ಶಿಕ್ಷಕರಿಗೆ ಬರೆ: ವರ್ಗಾವಣೆ ರಾಜಕೀಯ


Team Udayavani, Oct 30, 2018, 6:00 AM IST

v-8.jpg

ರಾಜ್ಯ ಸರ್ಕಾರಿ ಪ್ರಾಥ ಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಕಳೆದ ಸುಮಾರು ಒಂದು ವರ್ಷಗಳಿಂದ ಒಂದಲ್ಲ ಒಂದು ಕಾರಣದಿಂದ ಮುಂದೂಡಿಕೊಂಡೇ ಬರಲಾಗುತ್ತಿದೆ. ಹಿಂದಿನ ಸರ್ಕಾರದಿಂದ ಆರಂಭವಾಗಿ ಇಲ್ಲಿಯ ತನಕ ಒಂದಲ್ಲ ಒಂದು ನೆಪ ಮುಂದಿಟ್ಟುಕೊಂಡು ವರ್ಗಾವಣೆ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕುತ್ತಿರುವುದನ್ನು ನೋಡಿದರೆ, ವರ್ಗಾವಣೆ ಬಯಸದ ಶಿಕ್ಷಕರ ಲಾಬಿಗೆ ಸರ್ಕಾರ ಮಣಿದಿರುವುದು ಸ್ಪಷ್ಟ ಎನ್ನಬಹುದು. ಕೌನ್ಸೆಲಿಂಗ್‌ ಆರಂಭವಾದ ನಂತರವಾದರೂ ಎಲ್ಲವೂ ಸುಸೂತ್ರವಾಗಿ ನಡೆಯಬಹುದು ಎಂದು ನಿರೀಕ್ಷಿಸಿದ ಸಾವಿರಾರು ಶಿಕ್ಷಕರಿಗೆ ಮತ್ತೆ ಭ್ರಮನಿರಸನವಾಗಿದೆ.

2007ರ ನವೆಂಬರ್‌ನಲ್ಲಿ ಶಿಕ್ಷಕರ ವರ್ಗಾವಣೆಯ ಸಂಬಂಧ ಹೊಸ ಕಾಯ್ದೆ ಜಾರಿಗೆ ಬಂದ ನಂತರ ವಿವಿಧ ಹಂತದಲ್ಲಿ ತಿದ್ದುಪಡಿ ಆಗುತ್ತಲೇ ಬಂದಿದೆ. ಸಹ ಶಿಕ್ಷಕರಿಗಾಗಿ ಸೇವೆಗೆ ಸೇರಿದ ಐದು ವರ್ಷದ ನಂತರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಸೇವಾ ಜೇಷ್ಠತೆಯ ಆಧಾರದಲ್ಲಿ ವರ್ಗಾವಣೆ ನಡೆಸಲಾಗುತ್ತಿದೆ. ಎ, ಬಿ ಮತ್ತು ಸಿ ವಲಯವಾಗಿ ವಿಂಗಡಿಸಲಾಗಿದೆ.   ನಗರದ ಪ್ರದೇಶವನ್ನು ಎ ವಲಯವೆಂದೂ, ಗ್ರಾಮೀಣ ಪ್ರದೇಶವನ್ನು ಸಿ ವಲಯ ಎಂದೂ ಹಾಗೂ ಗ್ರಾಮೀಣ ಹಾಗೂ ನಗರಕ್ಕೆ ಸೇರದ ಪ್ರದೇಶವನ್ನು ಬಿ ವಲಯವಾಗಿ ವರ್ಗಿ ಕರಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ(ಶಿಕ್ಷಕರ ವರ್ಗಾವಣೆ)ನಿಯಮ 2017ರಲ್ಲಿ ವರ್ಗಾವಣೆಗೆ ಸಂಬಂಧಿಸಿದಂತೆ ಹಲವು ಬದಲಾವಣೆ ಮಾಡಲಾಗಿದೆ.

 ಆದರೆ, ಈ ನಿಯಮ ಜಾರಿಗೆ ಬಂದ ನಂತರ ಒಮ್ಮೆಯೂ ವರ್ಗಾವಣೆ ಸಸೂತ್ರವಾಗಿ ನಡೆಸಲು ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಾಧ್ಯವಾಗಿಲ್ಲ. ಇದಕ್ಕೆ ಹತ್ತಾರು ಕಾರಣಗಳಿವೆ. ಎ ವಲಯದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚುಕಾಲ ಸೇವೆ ಸಲ್ಲಿಸಿದ ಶಿಕ್ಷಕರನ್ನು (ಶೇಕಡವಾರು ಆಧಾರದಲ್ಲಿ) ಕಡ್ಡಾಯ ವರ್ಗಾವಣೆ ಮಾಡುವ ನಿರ್ಧಾರ ಹಿಂದಿನ ಸರ್ಕಾರ ಮಾಡಿತ್ತು ಮತ್ತು ಈ ಸಂಬಂಧ ಗೆಜೆಟ್‌ ಅಧಿಸೂಚನೆ ಹೊರಡಿಸಿತ್ತು. ನಗರ ಪ್ರದೇಶದಲ್ಲಿ ಬಹುಕಾಲದಿಂದ ಇರುವ ಶಿಕ್ಷಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು,  ಕೆಲವು ಶಿಕ್ಷಕರು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಆನಂತರ ಚುನಾವಣೆ ನೆಪದಲ್ಲಿ ವರ್ಗ ನಡೆಯಲಿಲ್ಲ.

ವರ್ಗಾವಣೆ ಪ್ರಕ್ರಿಯೆಗಾಗಿಯೇ ಹೊಸ ಸಾಫ್ಟ್ವೇರ್‌ ಕೂಡ ಸಿದ್ಧಪಡಿಸಲಾಗಿತ್ತು.  ಶಿಕ್ಷಕರ ಸೇವಾ ವಿವರನ್ನು ಆನ್‌ಲೈನ್‌ ಮೂಲಕವೇ ಸಂಗ್ರಹಿಸಲಾಗಿದೆ. ಶಿಕ್ಷಕರು ತಪ್ಪು ಮಾಹಿತಿ ಒದಗಿಸಿದರೆ ಸಾಫ್ಟ್ವೇರ್‌ ಅದನ್ನು ಸಾರಸಗಟಾಗಿ ತಿರಸ್ಕರಿಸುತ್ತದೆ. ಸಾಫ್ಟ್ವೇರ್‌ ನಿರ್ವಹಣೆಗೆ ಒಂದು ಪ್ರತ್ಯೇಕ ತಂಡವೇ ಇದೆ. ಎಲ್ಲ ರೀತಿಯ ವ್ಯವಸ್ಥೆ ಇದ್ದರೂ ವರ್ಗಾವಣೆ ಮಾತ್ರ ಗಣಪತಿ ಮದುವೆಯಂತಾಗಿದೆ.

ವರ್ಗಾವಣೆ ಪ್ರಕ್ರಿಯೆಗಾಗಿ ಮೂರ್‍ನಾಲ್ಕು ಬಾರಿ ಪರಿಷ್ಕೃತ ವೇಳಾಪಟ್ಟಿಯನ್ನು ಇಲಾಖೆ ಪ್ರಕಟಿಸಿತ್ತು. ವೇಳಾಪಟ್ಟಿ ಪ್ರಕಟಿಸಿ ಒಂದೇ ವಾರದಲ್ಲಿ ಪ್ರಕ್ರಿಯೆಗೆ ಇಲಾಖೆಯೇ ತಾತ್ಕಾಲಿಕ ತಡೆ ನೀಡುತ್ತಿತ್ತು. ಇದು ಕಳೆದೊಂದು ವರ್ಷದಿಂದ ನಡೆದುಕೊಂಡು ಬರುತ್ತಿದೆ. ಚುನಾವಣಾ ನೀತಿ ಸಂಹಿತೆ, ಕೋರ್ಟ್‌ ಪ್ರಕರಣವೂ ಇದಕ್ಕೆ ಕಾರಣ ಇರಬಹುದು. ಒಂದು ಹಂತದಲ್ಲಿ ನಗರದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚಿದ್ದ ಶಿಕ್ಷಕರ ಲಾಬಿ ವರ್ಗಾವಣೆಗೆ ಅಡ್ಡಿ ಮಾಡಿದರೆ, ಈಗ ಹೆಚ್ಚುವರಿ ಶಿಕ್ಷಕರ ಪ್ರಭಾವಕ್ಕೆ ಸರ್ಕಾರ ಮಣಿದಂತಿದೆ. ಇಲ್ಲಿ ರಾಜಕೀಯ ನಾಯಕರ, ಸರ್ಕಾರದ ಹಸ್ತಕ್ಷೇಪವೂ ಇದೆ. ಕಡ್ಡಾಯ ವರ್ಗಾವಣೆ ಬಯಸದ ಶಿಕ್ಷಕರ ಒತ್ತಡವೂ ಇದೆ. ಇದೆಲ್ಲದರ ನಡುವೆ ಹತ್ತಾರು ವರ್ಷಗಳಿಂದ ವರ್ಗಾವಣೆಗಾಗಿ ಕಾದುಕುಳಿತಿರುವ ಸಾಮಾನ್ಯ ಶಿಕ್ಷಕರಿಗೆ ಸದಾ ಅನ್ಯಾಯವಾಗುತ್ತಲೇ ಇದೆ.

ವರ್ಗಾವಣೆ ಪ್ರಕ್ರಿಯೆಗೆ ಸುಮಾರು 78 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚುವರಿ ಶಿಕ್ಷಕರು ಇದ್ದಾರೆ. ಪ್ರಾಥಮಿಕ ಶಾಲೆಯ ಹೆಚ್ಚುವರಿ ಶಿಕ್ಷಕರ ನಿಯೋಜನೆ ಪೂರ್ಣಗೊಂಡಿದ್ದು, ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರು ಪಟ್ಟಿ ಪ್ರಕಟಿಸುತ್ತಿದ್ದಂತೆ ಇಡೀ ವರ್ಗಾವಣೆ ಪ್ರಕ್ರಿಯೆಗೆ ಇಲಾಖೆ ತಾತ್ಕಾಲಿಕ ತಡೆ ನೀಡಿದೆ. ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಸಹಿತವಾಗಿ ಬಿಸಿಯೂಟ, ಕ್ಷೀರಭಾಗ್ಯ, ವಿದ್ಯಾರ್ಥಿ ಸಮಗ್ರ ಮೌಲ್ಯಮಾಪನ, ಪೌಷ್ಠಿಕಾಂಶಯುಕ್ತ ಮಾತ್ರೆ ವಿತರಣೆ, ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ ಸಹಿವಾಗಿ ಎಲ್ಲವನ್ನು ಶಾಲಾ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರೇ ಮಾಡಬೇಕು. ಇದರ ಜತೆಗೆ ಚುನಾವಣಾ ಕಾರ್ಯ ಹಾಗೂ ಸರ್ಕಾರ ವಹಿಸುವ ಇತರೆ ಕೆಲಸವನ್ನು ಚಾಚೂತಪ್ಪದೇ ಮಾಡಬೇಕು. ಇಲ್ಲವಾದರೆ ಹಿಂಬಡ್ತಿಯ ಅಸ್ತ್ರ ಬಳಸಲಾಗುತ್ತದೆ. ಎಲ್ಲ ಕಾರ್ಯವನ್ನು ಅಚ್ಚುಕಟ್ಟಾಗಿ ನೆರವೇರಿಸುವ ಶಾಲಾ ಶಿಕ್ಷಕರಿಗೆ ವರ್ಗಾವಣೆ ವಿಷಯದಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಲೇ ಬಂದಿದೆ.

ಟಾಪ್ ನ್ಯೂಸ್

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

ಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವುಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವು

ಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವು

ಗ್ರಾಮೀಣ ಬಡಜನರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರಕಾರ

ಗ್ರಾಮೀಣ ಬಡಜನರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರಕಾರ

Jammu-Kashmir ಗಡಿಯಲ್ಲಿ ಉದ್ಧಟತನ: ಪಾಠ ಕಲಿಯದ ಪಾಕ್‌

Jammu-Kashmir ಗಡಿಯಲ್ಲಿ ಉದ್ಧಟತನ: ಪಾಠ ಕಲಿಯದ ಪಾಕ್‌

Train ಹಳಿ ತಪ್ಪಿಸುವ ಯತ್ನ: ಉಗ್ರರ ಷಡ್ಯಂತ್ರ ಮಟ್ಟ ಹಾಕಿ

Train ಹಳಿ ತಪ್ಪಿಸುವ ಯತ್ನ: ಉಗ್ರರ ಷಡ್ಯಂತ್ರ ಮಟ್ಟ ಹಾಕಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.