ಗಲ್ಲಿ ಬೇಕರಿಯಲ್ಲಿ ಮನ ಮಿಡಿಯುವ ಪ್ರೇಮಕಥೆ
Team Udayavani, Oct 30, 2018, 11:06 AM IST
“ಗಲ್ಲಿ ಬೇಕರಿ’…. ಇದು ವಿದೇಶಿ ಕನ್ನಡಿಗ ನಿರ್ಮಾಣದ ಚಿತ್ರ. ನಿರ್ಮಾಪಕರ ಹೆಸರು ಮಹ್ಮದ್ ಮುಸ್ತಾಫ. ಮೂಲತಃ ಮಂಗಳೂರಿನವರಾದ ಮಹ್ಮದ್ ಮುಸ್ತಾಫ, ಕತಾರ್‌ನಲ್ಲಿ ನೆಲೆಸಿದ್ದಾರೆ. ನಿರ್ದೇಶಕ ವಿ.ಆರ್.ಕೆ.ರಾಧಾಕೃಷ್ಣ ಹೇಳಿದ ಕಥೆ ಕೇಳಿ, ನಿರ್ಮಾಣಕ್ಕೆ ಇಳಿದಿದ್ದಾರೆ.
ಗಲ್ಲಿ ಬೇಕರಿಯಲ್ಲಿ ಕೆಲಸ ಮಾಡುವ ಹುಡುಗ, ಅದೇ ಏರಿಯಾದಲ್ಲಿರುವ ಪೋಲೀಸ್ ಅಧಿಕಾರಿ ಮಗಳ ನಡುವಿನ ಲವ್‌ಸ್ಟೋರಿ ಇಲ್ಲಿದೆ. ಇದು ನೈಜ ಘಟನೆ ಆಧರಿಸಿದ ಮಾಡಿದ ಚಿತ್ರ ಎನ್ನುವ ನಿರ್ದೇಶಕರು, ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ.
ಇನ್ನು, ಇಲ್ಲಿ ಹಲವು ವಿಶೇಷತೆಗಳಿದ್ದು, ಅದನ್ನು ಸಿನಿಮಾದಲ್ಲೇ ನೋಡಬೇಕೆಂಬುದು ನಿರ್ದೇಶಕರ ಮಾತು. ಇಲ್ಲಿ ಜಯಕರ್ನಾಟಕ ಸಂಘದ ಕೆಲಸವನ್ನೂ ತೋರಿಸಲಾಗಿದೆ. ಅದಕ್ಕೊಂದು ಹಾಡು ಇರಿಸಿ, ರಾಜ್ಯದ 20 ಜಿಲ್ಲೆಗಳಲ್ಲಿ ಚಿತ್ರೀಕರಿಸಲಾಗಿದೆ. ಸಂತೋಷ್ ಚಿತ್ರದ ನಾಯಕರಾದರೆ, ಆರ್ಯನ್ ಮತ್ತೂಂದು ನಾಯಕನ ಪಾತ್ರ ಮಾಡಿದ್ದಾರೆ.
ಪ್ರಜ್ವಲ್‌ಪೂವಯ್ಯ ನಾಯಕಿ. ಇನ್ನುಳಿದಂತೆ ಚಿತ್ರದಲ್ಲಿ ಸುಚೇಂದ್ರಪ್ರಸಾದ್, ಯಮುನಾ ಶ್ರೀನಿಧಿ, ರಮೇಶ್‌ಭಟ್, ಉಗ್ರಂಮಂಜು ಇತರರು ನಟಿಸಿದ್ದಾರೆ. ಅಂದಹಾಗೆ, ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಲಹರಿ ವೇಲು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಸುನಾದ್ ಗೌತಮ್ ಸಂಗೀತವಿದೆ. ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಚಿತ್ರದಲ್ಲಿ ಹಾಡು ಮತ್ತು ಟ್ರೇಲರ್ ಪ್ರದರ್ಶನ ಮಾಡಿದ್ದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.