ಪೂರ್ವಿಕಾ ಮೊಬೈಲ್ ಮಳಿಗೆಗಳಲ್ಲಿ ದೀಪಾವಳಿ ಕೊಡುಗೆ
Team Udayavani, Oct 30, 2018, 11:51 AM IST
ಬೆಂಗಳೂರು: ದೀಪಾವಳಿ ಹಬ್ಬದ ಕೊಡುಗೆಯಾಗಿ ಪೂರ್ವಿಕಾ ಮೊಬೈಲ್ಸ್ ಸಂಸ್ಥೆ ತನ್ನ ಗ್ರಾಹಕರಿಗಾಗಿ ಐದು ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಕಾಯ್ದಿರಿಸಿದೆ. ಪೂರ್ವಿಕಾ ಮೊಬೈಲ್ ಮಳಿಗೆಗಳಲ್ಲಿ ದೀಪಾವಳಿ ವಿಶೇಷ ಕೊಡುಗೆ ಅ.18ರಂದಲೇ ಆರಂಭವಾಗಿದ್ದು, ನ.7ರ ತನಕ ನಡೆಯಲಿದೆ. ಈ ಅವಧಿಯಲ್ಲಿ ಪೂರ್ವಿಕಾ ಮಳಿಗೆಯಲ್ಲಿ ಮೊಬೈಲ್ ಖರೀದಿಸುವ ಗ್ರಾಹಕರು ಕಾರು, ರಾಯಲ್ ಎನ್‌ಫೀಲ್ಡ್, ಸ್ಕೂಟಿ, ಟಿವಿ, ಫ್ರಿಜ್, ವಾಷಿಂಗ್ ಮಷಿನ್, ಸ್ಮಾರ್ಟ್‌ಫೋನ್, ಚಿನ್ನದ ನಾಣ್ಯ ಸೇರಿದಂತೆ 5 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಗೆಲ್ಲಬಹುದು.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿಯಲ್ಲಿರುವ ಪೂರ್ವಿಕಾ ಮಳಿಗೆಗಳಲ್ಲಿ ಗ್ರಾಹಕರು ಖರೀದಿಸುವ ಮೊಬೈಲ್‌ಗೆ ಕುಕ್ಕರ್, ಮಿಕ್ಕರ್ ಗೆùಂಡರ್, ಟೇಬಲ್ ಫ್ಯಾನ್, ಇನ್‌ಡಕ್ಷನ್ ಸ್ಟವ್, ಸ್ಪೀಕರ್, ಹೆಡ್‌ಫೋನ್ ಇತ್ಯಾದಿ ಗಿಫ್ಟ್ ಈಗಾಗಲೇ ಪಡೆಯುತ್ತಿದ್ದಾರೆ. ಪೂರ್ವಿಕಾ ಮೊಬೈಲ್ ಅತ್ಯಂತ ವಿಶ್ವಾಸಾರ್ಹ ಮಳಿಗೆಯಾಗಿದ್ದು, ಗ್ರಾಹಕರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ದೀಪಾವಳಿ ಆಚರಣೆಗೆ ಇನ್ನಷ್ಟು ಖುಷಿ ನೀಡಲು ವಿಶೇಷ ಉಡುಗೊರೆ ಘೋಷಣೆ ಮಾಡಲಾಗಿದೆ ಎಂದು ಪೂರ್ವಿಕಾ ಮೊಬೈಲ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಉವರಾಜ್ ತಿಳಿಸಿದರು.
ಆಯ್ದ ಮೊಬೈಲ್‌ಗಳ ಮೇಲೆ ಪೇಟಿಯಂ ಶೇ.20ರಷ್ಟು ಕ್ಯಾಶ್‌ಬ್ಯಾಕ್ ಆಫರ್, ಒಂದುಕೊಂಡರೆ ಇನ್ನೊಂದು ಉಚಿತ, ಶೇ.60ರಷ್ಟು ರಿಯಾಯ್ತಿ ಇದೆ. ಇದರ ಜತೆಗೆ 10ಸಾವಿರ ರೂ.ಗಿಂತ ಮೇಲ್ಪಟ್ಟ ಸ್ಮಾರ್ಟ್‌ಫೋನ್ ಖರೀದಿಸುವ ಮೂಲಕ ಗ್ರಾಹಕರು ಪೂರ್ವಿಕಾ ಘೋಷವಾಕ್ಯ(ಸ್ಲೋಗನ್) ಸ್ಪರ್ಧೆಯಲ್ಲೂ ಭಾಗವಹಿಸಬಹುದು. ಉತ್ತಮ ಸ್ಲೋಗನ್ ನೀಡಿದ ಗ್ರಾಹಕರಿಗೆ ವಿಶೇಷ ಬಹುಮಾನ ದೊರೆಯಲಿದೆ. ದೀಪಾವಳಿ ಹಬ್ಬದ ನಿಮಿತ್ತ ಗ್ರಾಹಕರಿಗೆ ವಿಶೇಷ ಕೊಡುಗೆಯ ಜತೆಗೆ ಗುಣಮಟ್ಟದ ಸೇವೆಯನ್ನು ನೀಡುತ್ತಿದ್ದೇವೆ ಎಂದರು.
ಬಜಾಜ್ ಕ್ಯಾಪಿಟಲ್, ಟಿವಿಎಸ್, ಎಚ್‌ಡಿಬಿ, ಎಚ್‌ಡಿಎಫ್ಸಿ, ಹೋಮ್ ಕ್ರೆಡಿಟ್, ಐಸಿಐಸಿಐ ಕಾರ್ಡ್‌ಗಳ ಮೇಲೆ ಝಿರೋ ಡೌನ್‌ಪೇಮೆಂಟ್ ಮತ್ತು ಇಜಿ ಇನ್‌ಸ್ಟಾಲ್ಮೆಂಟ್ ಆಫರ್ ಮತ್ತು ಇತರೆ ಕೆಲವು ಕಾರ್ಡ್‌ಗಳ ಮೇಲೆ ಕಡಿಮೆ ವೆಚ್ಚದ ಇಎಂಐ ಸೌಲಭ್ಯವೂ ಇದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಬಹುತೇಕ ಎಲ್ಲ ಬಗೆಯ ಮೊಬೈಲ್‌ಫೋನ್‌ಗಳು ಪೂರ್ವಿಕಾ ಮೊಬೈಲ್ ಮಳಿಗೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.