ಲಘು ವ್ಯಾಯಾಮ ಮಾಡಿ , ಆರೋಗ್ಯ ಕಾಪಾಡಿ


Team Udayavani, Oct 30, 2018, 3:02 PM IST

30-october-9.gif

ಆರೋಗ್ಯವಂತರಾಗಿರಬೇಕು ಎಂದುಕೊಂಡು ಎಲ್ಲರೂ ತಮ್ಮ ದಿನಚರಿಯಲ್ಲಿ ವ್ಯಾಯಾಮಕ್ಕೆ ಒಂದಷ್ಟು ಸಮಯವನ್ನು ಮೀಸಲಿಟ್ಟಿರುತ್ತಾರೆ. ದೈನಂದಿನ ವ್ಯಾಯಾಮ ಹಾಗೂ ದೇಹದಂಡನೆಯಿಂದ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿದ್ದು, ತೂಕ ನಿರ್ವಹಣೆ, ರಕ್ತದೊತ್ತಡ ಹಾಗೂ ಹೃದ್ರೋಗ ಸಮಸ್ಯೆಗಳನ್ನು ನಿವಾರಿಸಲು ಸಹಾಯವಾಗುತ್ತದೆ. ಆದರೆ ಇಂದು ದಿನವಿಡೀ ಕೆಲಸ ಹಾಗೂ ಒತ್ತಡಗಳ ನಡುವೆ ವ್ಯಾಯಾಮಕ್ಕೆ ಸಮಯವಿಲ್ಲ ಎನ್ನುವವರೇ ಹೆಚ್ಚು. ಇದೊಂದು ಸಮಸ್ಯೆಯಾಗಿ ಬಾಧಿಸುತ್ತಿದೆ. ಹೀಗಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಫಿಟ್ನೆಸ್‌ ತಜ್ಞರು ಕೆಲವೊಂದು ಸರಳ ವಿಧಾನವನ್ನು ಪರಿಚಯಿಸಿದ್ದಾರೆ. ಅದುವೇ ಫಿಟ್ನೆಸ್‌ ಸ್ನ್ಯಾಕಿಂಗ್‌ (ಲಘು ವ್ಯಾಯಾಮ).

ನಮ್ಮ ದೇಹಕ್ಕೆ ಹೇಗೆ ಲಘು ಉಪಾಹಾರವನ್ನು ನೀಡುತ್ತೇವೆಯೋ ಅದೇ ರೀತಿ ದೈನಂದಿನ ಕೆಲಸದ ಒತ್ತಡಗಳ ನಡುವೆ ಕೆಲವೊಂದು ರೀತಿಯಲ್ಲಿ ಲಘು ವ್ಯಾಯಾಮ ಮಾಡಬಹುದು. ವಾರದಲ್ಲಿ ಕನಿಷ್ಠ 150 ನಿಮಿಷವಾದರೂ ದೇಹ ದಂಡಿಸದಿದ್ದರೆ ಭವಿಷ್ಯದಲ್ಲಿ ಹಲವಾರು ಅಪಾಯಗಳನ್ನು ಎದುರಿಸಬೇಕಾದೀತು ಎನ್ನುತ್ತದೆ ವೈದ್ಯಲೋಕ.

· ಸಮಯದ ಕೊರತೆ ನೀಗಿಸಿ
ವ್ಯಾಯಮ ಮಾಡಲು ಸಮಯದ ಕೊರತೆ ಇದ್ದರೆ ನಾವು ಮಾಡುವ ಕೆಲಸದ ಮಧ್ಯೆಯೇ ಕೆಲವೊಂದು ವ್ಯಾಯಾಮಗಳನ್ನು ಮಾಡಬಹುದು. ಉದಾಹರಣೆಗೆ ಆಫೀಸ್‌ ನಲ್ಲಿ ಲಿಫ್ಟ್ ಗಳ ಬದಲು ಮೆಟ್ಟಿಲುಗಳನ್ನು ಉಪಯೋಗಿಸುವುದು ಕೂಡ ಲಘು ವ್ಯಾಯಾಮವಾದಂತೆ. ಆಫೀಸ್‌ ಹತ್ತಿರದಲ್ಲೇ ಇದೇ ಎಂದಾದರೆ ವಾಹನದಲ್ಲಿ ಹೋಗುವ ಬದಲು ನಡೆದುಕೊಂಡು ಹೋಗಿ. ಇದರಿಂದಾಗಿ ದೇಹ ದಂಡನೆಯಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಮನೆಯಲ್ಲಿ ಕೂಡ ನಾವು ಲಘು ವ್ಯಾಯಾಮಗಳನ್ನು ಮಾಡಬಹುದು. ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ಮನೆಯ ಒಳಾಂಗಣ, ಹೊರಾಂಗಣ ಸ್ವಚ್ಛತೆಯ ಜತೆಗೆ ಸಮಯವಿದ್ದರೆ ಜಂಪಿಂಗ್‌, ಓಡುವುದು, ಹಗ್ಗ ಜಿಗಿತ ಮಾಡುವುದರಿಂದಲೂ ಫಿಟ್ನೆಸ್‌ ಕಾಪಾಡಿಕೊಳ್ಳಬಹುದು.

· ಬ್ರೇಕ್‌ ಬೇಕು
ಬ್ಯುಸಿ ಶೆಡ್ನೂಲ್ಡ್‌ ಮಧ್ಯೆ ಬ್ರೇಕ್‌ ತೆಗೆದುಕೊಳ್ಳಿ. ಹೆಚ್ಚು ಆಹಾರ ಸೇವನೆ ಎಷ್ಟು ಅಪಾಯಕಾರಿಯೋ ಆಹಾರ ಸೇವಿಸದೇ ಕೆಲಸ ಮಾಡುವುದು ಅದಕ್ಕಿಂತ ಹೆಚ್ಚು ಅಪಾಯಕಾರಿ ಎಂಬುದನ್ನು ಮರೆಯದಿರಿ. ಡಯಟ್‌ ಹೆಸರಿನಲ್ಲಿ ಊಟ, ತಿಂಡಿ ಬಿಟ್ಟು ಕೆಲಸ ಮಾಡುವುದು ತಪ್ಪು. ಬ್ಯುಸಿ ಶೆಡ್ನೂಲ್ಡ್‌ ನಲ್ಲಿರುವವರು ಆಗಾಗ ರಕ್ತದೊತ್ತಡ, ಕೊಲೆ ಸ್ಟ್ರಾಲ್‌ ಮಟ್ಟವನ್ನು ಪರಿಶೀಲಿಸುತ್ತಾ ಇರಬೇಕು. ಇದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತದೆ. ಇದು ಕೂಡ ಫಿಟ್ನೆಸ್‌ ಸ್ನ್ಯಾಕಿಂಗ್‌ನಲ್ಲೇ ಸೇರಿದೆ.

· ಮನೆ ಕೆಲಸ ಮಿಸ್‌ ಮಾಡಿಕೊಳ್ಳಬೇಡಿ
ಮುಂಜಾನೆ ಎದ್ದ ತತ್‌ ಕ್ಷಣ ಮನೆಯ ನಾಯಿಯನ್ನು ಹೊರಗೆ ಬಿಡುತ್ತೀರಿ ಎಂದಾದರೆ ಅದರೊಟ್ಟಿಗೆ ಸಣ್ಣದೊಂದು ವಾಕಿಂಗ್‌ ಹೋಗಿ ಬನ್ನಿ. ಇದು ಕೂಡ ಫಿಟ್ನೆಸ್‌  ಕಾಯ್ದುಕೊಳ್ಳುವಲ್ಲಿ ಸಹಕಾರಿ. ಮನೆಯಲ್ಲಿ ಮಾಡುವ ಪ್ರತಿಯೊಂದು ಕೆಲಸವೂ ಕೂಡ ಫಿಟ್ನೆಸ್‌ ಸ್ನ್ಯಾಕಿಂಗ್‌ ನಲ್ಲೇ ಬರುತ್ತದೆ. ಹೀಗಾಗಿ ಯಾವುದನ್ನೂ ಮಿಸ್‌ ಮಾಡಿಕೊಳ್ಳಬೇಡಿ.

· ನಡಿಗೆಯಷ್ಟೇ ಸಾಲದು
ಫಿಟ್ನೆಸ್‌ ಸ್ನ್ಯಾಕಿಂಗ್‌ ಎಂದರೆ ಕೇವಲ ದೇಹದಂಡನೆ ಮಾತ್ರವಲ್ಲ. ಮಾನಸಿಕ ನೆಮ್ಮದಿಯೂ ಮುಖ್ಯ. ಜತೆಗೆ ನೀವು ಮಾಡುವ ಕೆಲಸದ ವೇಗ ಹೆಚ್ಚಿಸುವುದು ಕೂಡ ಅಗತ್ಯ. ಕೇವಲ ನಡಿಗೆಯಷ್ಟೇ ಸಾಲದು. ಹಾಗಂತ ದೇಹ ದಂಡನೆ ಮಾಡಲು ದಿನವಿಡೀ ಭಾರದ ಸಾಮಗ್ರಿಗಳನ್ನು ಎತ್ತಿ, ಬೆವರು ಸುರಿಸಬೇಕಿಲ್ಲ. ಬದಲಿಗೆ ಸಣ್ಣ ಸಣ್ಣ ಮಾದರಿಯ ವ್ಯಾಯಾಮಗಳ ಮೂಲಕವೂ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

 ಶಿವ ಸ್ಥಾವರ ಮಠ

ಟಾಪ್ ನ್ಯೂಸ್

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.