ಅಸಿಡಿಟಿ ಸಮಸ್ಯೆಗೆ ಮನೆ ಔಷಧ
Team Udayavani, Oct 8, 2020, 1:10 PM IST
ಹೊಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಆಮ್ಲದ ಉತ್ಪಾದನೆಯಿಂದ ಆಸಿಡಿಟಿ (ಪಿತ್ತ) ಕಾಣಿಸಿಕೊಳ್ಳುತ್ತದೆ. ನಾವು ಸೇವಿಸಿದ ಆಹಾರವು ಹೊಟ್ಟೆಯಲ್ಲಿ ಆಮ್ಲೀಯವಾಗಿ ಪರಿವರ್ತನೆ ಹೊಂದಿ ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಆಮ್ಲದ ಪ್ರಮಾಣ ಹೆಚ್ಚಾದರೆ ಅಸಿಡಿಟಿಗೆ ಕಾರಣವಾಗುತ್ತದೆ. ಪಿತ್ತ ಹೆಚ್ಚಾದಾಗ ಎದೆಯಲ್ಲಿ ಉರಿ, ಉದ್ವೇಗ ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಅನ್ನನಾಳದ ಕೋಶದ ವೈಫಲ್ಯದಿಂದ ಆಮ್ಲವು ಅನ್ನನಾಳಕ್ಕೆ ಹೋಗದಂತೆ ತಡೆ ಉಂಟಾಗುವುದರಿಂದ ಅಸಿಡಿಟಿ ಹೆಚ್ಚಾಗುತ್ತದೆ. ಅಸಿಡಿಟಿಗೆ ನಾವು ಸೇವಿಸುವ ಆಹಾರವೇ ಮುಖ್ಯ ಕಾರಣ.
ಮನೆ ಔಷಧಗಳು
ಜೀರಿಗೆ
ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ, ಸೋಸಿ ಕುಡಿಯಬೇಕು ಅಥವಾ ಸ್ವಲ್ಪ ಪ್ರಮಾಣದ ಹುರಿದ ಜೀರಿಗೆಯನ್ನು ಅರೆದು ಒಂದು ಲೋಟ ನೀರಿಗೆ ಬೆರೆಸಿ ಊಟವಾದ ಬಳಿಕ ಕುಡಿದರೂ ಸಮಸ್ಯೆಯಿಂದ ಪರಿಹಾರವಾಗುತ್ತದೆ.
ಎಳನೀರು ಸೇವನೆ
ಅಸಿಡಿಟಿ ನಿವಾರಣೆಗೆ ಎಳನೀರು ಉತ್ತಮ ಔಷಧವಾಗಿದೆ. ಹೊಟ್ಟೆಯಲ್ಲಿ ಲೋಳೆ ಪ್ರಮಾಣವನ್ನು ಹೆಚ್ಚಿಸಿ ಪಿತ್ತವನ್ನು ಇದು ಕಡಿಮೆ ಮಾಡುತ್ತದೆ.
ಬಾಳೆಹಣ್ಣು
ಅತಿಯಾದ ಅಸಿಡಿಟಿಯಿಂದ ನೀವು ಬಳಲುತ್ತಿದ್ದಲ್ಲಿ, ಚೆನ್ನಾಗಿ ಕಲಿತ ಬಾಳೆ ಹಣ್ಣು ಸೇವಿಸಿ. ಅಂಟಾಸಿಡ್ ಗುಣಗಳಿಂದ ತುಂಬಿರುವ ಬಾಳೆಹಣ್ಣು ನೈಸರ್ಗಿಕವಾಗಿ ಪಿತ್ತ ಶಮನ ಮಾಡುವ ಗುಣಗಳನ್ನು ಹೊಂದಿದೆ.
ಪುದೀನಾ
ಕೆಲ ಪುದೀನಾ ಎಲೆಗಳನ್ನು ಸಣ್ಣದಾಗಿ ಹೆಚ್ಚಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ ಆರಿಸಿದ ಅನಂತರ ಕುಡಿಯಬೇಕು. ಪಿತ್ತ ನಿವಾರಣೆಯಲ್ಲಿ ಪುದೀನಾ ಪ್ರಮುಖ ಪಾತ್ರ ವಹಿಸುತ್ತದೆ. ಪುದೀನಾ ಅಜೀರ್ಣವನ್ನು ನಿವಾರಿಸಿ, ದೇಹಕ್ಕೆ ತಂಪು ನೀಡುತ್ತದೆ.
ಮಜ್ಜಿಗೆ
ಪಿತ್ತವನ್ನು ಶೀಘ್ರವಾಗಿ ನಿವಾರಣೆ ಮಾಡುವ ಗುಣ ಮಜ್ಜಿಗೆಗೆ ಇದೆ. ಸ್ವಲ್ಪ ಕರಿಮೆಣಸಿನ ಪುಡಿಯನ್ನು ಮಜ್ಜಿಗೆಗೆ ಸೇರಿಸಿ ಕುಡಿಯುವುದು ಪಿತ್ತ ನಿವಾರಣೆಗೆ ಪರಿಣಾಮಕಾರಿಯಾಗಿದೆ.
ಲವಂಗ
ಬಾಯಲ್ಲಿ ಲವಂಗವನ್ನಿಟ್ಟುಕೊಂಡು ಅದು ರಸ ಬಿಡುವವರೆಗೂ ಚೆನ್ನಾಗಿ ಜಗಿಯಬೇಕು. ಇದರಿಂದಲೂ ಪಿತ್ತವನ್ನು ನಿವಾರಿಸಬಹುದು. ಸಮಪ್ರಮಾಣದಲ್ಲಿ ಲವಂಗ ಹಾಗೂ ಏಲಕ್ಕಿ ಪುಡಿ ಮಿಕ್ಸ್ ಮಾಡಿ ಸೇವಿಸುವುದು ಸಹ ಒಳ್ಳೆಯದು.
ಶುಂಠಿ
ಶುಂಠಿ ಚೂರುಗಳನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಬಳಿಕ ಸೇವಿಸಿ. ಒಂದಿಷ್ಟು ಶುಂಠಿಯನ್ನು ಚೆನ್ನಾಗಿ ಅರೆದು ಇದರ ರಸ ತೆಗೆದು ಸೇವಿಸುವುದು ಕೂಡ ಪರಿಣಾಮಕಾರಿಯಾಗಿದೆ.
ದಾಲ್ಚಿನ್ನಿ
ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ ಇದಕ್ಕೆ ಒಂದು ಚಮಚ ದಾಲಿcನ್ನಿ ಹುಡಿ ಹಾಕಿ. ದಾಲ್ಚಿನ್ನಿ ತನ್ನ ರಸ ಬಿಟ್ಟ ಅನಂತರ ಈ ನೀರನ್ನು ಕುಡಿಯಬೇಕು. ಇದು ಪಿತ್ತಶಮನ ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.