ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ: 77ನೇ ವಾರ್ಷಿಕ ಮಹಾಸಭೆ


Team Udayavani, Oct 30, 2018, 3:43 PM IST

2810mum08.jpg

ಮುಂಬಯಿ: ಯುವಪೀಳಿಗೆಯು ಸಂಘದ ಮುಖಾಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ನಿಸ್ವಾರ್ಥ ಭಾವನೆಯಿಂದ ಕಾರ್ಯನಿರ್ವಹಿಸಿ ಸಮಾಜದ ಶಕ್ತಿಯಾಗಬೇಕು. ಸಂಘವು ಕಳೆದ ಹಲವು ವರ್ಷಗಳಿಂದ ಸಮಾಜೋ ದ್ಧಾರ ಯೋಜನೆಗಳನ್ನು ಹಮ್ಮಿಕೊಂಡು ಸದಸ್ಯ ಬಾಂಧವರ ಮನೆ- ಮನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಮ್ಮ ಮುಂದಿನ ಗುರಿ ಸಂಸ್ಥೆಯ ವತಿಯಿಂದ ಕುಂದಾಪುರದಲ್ಲಿ ಮತ್ತು ಮುಂಬಯಿಯಲ್ಲಿ  ಭವ್ಯ ಮೊಗವೀರ ಭವನ ನಿರ್ಮಾಣವಾಗಿದೆ. ಅದಕ್ಕೆ ಎಲ್ಲರೂ ಸಹಕರಿಸಬೇಕು. 

ಮುಂಬಯಿಯಲ್ಲಿ ಭವ್ಯ ಭವನ ನಿರ್ಮಾಣದ ಕನಸನ್ನು ಹೊಂದಲಾಗಿದೆ. ನಾವೆಲ್ಲರು ಒಗ್ಗಟ್ಟಾಗಿ, ಒಮ್ಮತದಿಂದ ಈ ಬೃಹತ್‌ ಯೋಜನೆಗಳಿಗೆ ಕೈಜೋಡಿಸಿದಾಗ ಕನಸು ನನಸಾಗಲು ಸಾಧ್ಯವಿದೆ. ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ ಸದಾ ಅಗತ್ಯವಾಗಿದೆ. ಸಮಾಜ ಸೇವೆಯೇ ಸಂಘದ ಮುಖ್ಯ ಧ್ಯೇಯವಾಗಿದೆ ಎಂದು  ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಅಧ್ಯಕ್ಷ ನಾರಾಯಣ ಎಚ್‌. ಬಗ್ವಾಡಿ ಅವರು ನುಡಿದರು.
ಅ.21ರಂದು ಫೋರ್ಟ್‌ ಪರಿಸರದ ಕಾಂಜಿಕೇತ್ಸಿ ಸಭಾಗೃಹದಲ್ಲಿ ನಡೆದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ 77ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶೈಕ್ಷಣಿಕ ನೆರವು ವಿತರಣೆಯನ್ನು ಪ್ರತೀ ವರ್ಷ ಸಂಘವು ಮಾಡುತ್ತಿದೆ. ಇದರ ಸದುಪಯೋಗವನ್ನು ಸಮಾಜದ ಅರ್ಹ ಮಕ್ಕಳು ಪಡೆದುಕೊಂಡು ಭವಿಷ್ಯದಲ್ಲಿ ಸಂಘದ ಮುಖಾಂತರ ಇನ್ನಿತರ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದರು.

ಸಂಘದ ಮಾಜಿ ಅಧ್ಯಕ್ಷ ಗೋಪಾಲ್‌ ಪುತ್ರನ್‌ ಅವರು ಮಾತನಾಡಿ, ಮೊಗವೀರ ಸಂಸ್ಥೆಯು ಹಲವಾರು ಅರ್ಥಪೂರ್ಣ ಸಮಾಜಪರ ಯೋಜನೆಗಳನ್ನು ಹಾಕಿಕೊಂಡಿದೆ. ಶಿಕ್ಷಣಕ್ಕಾಗಿ ಮಹತ್ವದ ಸೇವೆಗಳು ಸಂಘದಿಂದ ನಡೆಯುತ್ತಿದೆ. ನಾವೆಲ್ಲರು ಒಂದೇ ಸಂಘಟನೆಯ ಆಶ್ರಯದಲ್ಲಿ ಮುನ್ನಡೆಯೋಣ. ನಮ್ಮ ಹಿರಿಯರು ಕಟ್ಟಿದ ಮೊಗವೀರ ಸಂಘ ಇಂದು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಯಾವುದೇ ಒಂದು ಸಂಘ-ಸಂಸ್ಥೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಹಣಕ್ಕಿಂತ ಜನ ಬಲ ಮುಖ್ಯವಾಗಿದೆ. ಆದ್ದರಿಂದ ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದರು.

ಸಂಘದ ಮಾಜಿ ಅಧ್ಯಕ್ಷ ಮಹಾಬಲ ಕುಂದರ್‌ ಅವರು ಮಾತನಾಡಿ, ಸಂಸ್ಥೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಮಾಜ ಬಾಂಧವರ ಪ್ರೋತ್ಸಾಹ ನಿರಂತರವಾಗಿರಲಿ. ಸಮಾಜದ ಮಕ್ಕಳು ಪ್ರತಿಯೊಂದು ಕ್ಷೇತ್ರಗಳಲ್ಲೂ ಮಿಂಚಬೇಕು. ಸಂಸ್ಥೆಯ ಪಾಲಿಗೆ ಯುವಪೀಳಿಗೆ ಆಶಾಕಿರಣವಾಗಿದ್ದು, ನಮ್ಮ ಸಂಘಟನೆ ಇತರರಿಗೆ ಸ್ಫೂರ್ತಿಯ ಸೆಲೆಯಾಗಲಿ. ಮುಖ್ಯವಾಗಿ ಮಹಿಳೆಯರು ಹೆಚ್ಚಾಗಿ ಸಂಘಟನೆಯಲ್ಲಿ ಸಕ್ರಿಯರಾಗುವ ಅಗತ್ಯತೆಯಿದೆ. ಸಂಘವು ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರದೀಪ್‌ ಚಂದನ್‌ ಅವರು, ಪಾಲಕರು  ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಅವರ ಅಭಿರುಚಿಯನ್ನು ಅರಿತುಕೊಂಡು ಅವರನ್ನು ಬೆಳೆಸಬೇಕು. ತಮ್ಮ ಮಕ್ಕಳು ಏನೂ ಮಾಡುತ್ತಿದ್ದಾರೆ ಎಂಬುದು ಪಾಲಕರಿಗೆ ಅರಿವಿರಬೇಕು. ಮಕ್ಕಳನ್ನು ಸಾಮಾಜಿಕ ಜಾಲ ತಾಣಗಳಿಂದ ದೂರವಿಟ್ಟಷ್ಟು ಒಳ್ಳೆಯದು. ಇಂದು ಸಂಸ್ಥೆಯಿಂದ ಪಡೆದ ಆರ್ಥಿಕ ನೆರವನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ ಸಂಘದ ಋಣ ತೀರಿಸಬೇಕು ಎಂದು ನುಡಿದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಸಭಿಕರ ಪರವಾಗಿ ನಾರಾಯಣ ಚಂದನ್‌, ಭಾಸ್ಕರ್‌ ಕಾಂಚನ್‌, ರಘುರಾಮ್‌ ಚಂದನ್‌, ಗೋಪಾಲ್‌ ಚಂದನ್‌, ಸುಚಿತ್ರಾ ಪುತ್ರನ್‌, ಸುರೇಶ್‌ ತೋಳಾರ್‌, ಭಾಸ್ಕರ್‌ ಶ್ರೀಯಾನ್‌, ಬಾಲಕೃಷ್ಣ ತೋಳಾರ್‌ ಅವರು ಮಾತನಾಡಿ ಸಲಹೆ-ಸೂಚನೆಗಳನ್ನು ನೀಡಿದರು. ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ರಾಜು ಶ್ರೀಯಾನ್‌ ನಾವುಂದ ಗತ ಸಭೆಯ ಟಿಪ್ಪಣಿ ಮತ್ತು ಮಹಾಸಭೆಯ ವರದಿ ವಾಚಿಸಿ ಸರ್ವಾನುಮತದಿಂದ ಅಂಗೀಕರಿಸಿಕೊಂಡರು.

ವರದಿ ವರ್ಷದಲ್ಲಿ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗೌರವ ಕೋಶಾಧಿಕಾರಿ ಸಂಜೀವ ಕುಂದರ್‌ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ ಅಂಗೀಕರಿಸಿಕೊಂಡರು. ಯಶವಂತ್‌ ಕರ್ಕೇರ ಚಾರ್ಟರ್ಡ್‌ ಅಕೌಂಟೆಂಟ್‌ ಅವರನ್ನು ಲೆಕ್ಕ ಪರಿಶೋಧಕರಾಗಿ ನೇಮಿಸಲಾಯಿತು. ಸದಸ್ಯರು ಮಾತನಾಡಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಅಭಿನಂದಿಸಿ ಸಲಹೆ-ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ನೂತನ ಅಧ್ಯಕ್ಷರನ್ನಾಗಿ ರಮೇಶ್‌ ಎಂ. ಬಂಗೇರ ಅವರನ್ನು ಅವಿರೋಧವಾಗಿ ನೇಮಿಸಲಾಯಿತು. 2018-2020 ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಗೆ 25 ಸದಸ್ಯರನ್ನು ಸರ್ವಾನುಮತದಿಂದ ನೇಮಿಸಲಾಯಿತು. ಕಳೆದ ಸಾಲಿನ ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

ವೇದಿಕೆಯಲ್ಲಿ ಎನ್‌. ಎಚ್‌. ಬಗ್ವಾಡಿ, ಕಾರ್ಯದರ್ಶಿ ನಾವುಂದ ರಾಜು ಶ್ರೀಯಾನ್‌, ಕೋಶಾಧಿಕಾರಿ ಸಂಜೀವ ಕುಂದರ್‌, ಜತೆ ಕೋಶಾಧಿಕಾರಿ ಸತೀಶ್‌ ಶ್ರೀಯಾನ್‌, ಮಾಜಿ ಅಧ್ಯಕ್ಷರುಗಳಾದ ಸುರೇಶ್‌ ಕಾಂಚನ್‌, ಮಹಾಬಲ ಕುಂದರ್‌, ಗೋಪಾಲ್‌ ಪುತ್ರನ್‌, ಉಪಾಧ್ಯಕ್ಷರುಗಳಾದ ರಮೇಶ್‌ ಬಂಗೇರ, ರಾಜೇಂದ್ರ ಚಂದನ್‌, ಉದ್ಯಮಿ ರತ್ನಾಕರ ಚಂದನ್‌, ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ರಘುರಾಮ ಚಂದನ್‌, ನಾರಾಯಣ ಚಂದನ್‌, ಗೋಪಾಲ್‌ ಚಂದನ್‌, ಭಾಸ್ಕರ್‌ ಕಾಂಚನ್‌, ಸುಚಿತ್ರಾ ಪುತ್ರನ್‌, ಮಂಜುನಾಥ ನಾಯ್ಕ, ಅರವಿಂದ ಪುತ್ರನ್‌ ಮತ್ತಿತರರು ಉಪಸ್ಥಿತರಿದ್ದರು.

 ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತಮ ಶಿಕ್ಷಣವನ್ನು ಪಡೆದು ಉತ್ತಮ ಹುದ್ಧೆಗಳನ್ನು ಅಲಂಕರಿಸಿದ ಹಲವಾರು ಮಂದಿ ನಮ್ಮ ಸಂಸ್ಥೆಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಹಣ ಎಷ್ಟೇ ಸಂಪಾದಿಸಿದರೂ ಒಂದು ದಿನ ಅದು ಖರ್ಚಾಗಿ ಹೋಗುವುದು ಸಹಜ. ಆದರೆ ಶಿಕ್ಷಣವನ್ನು ಯಾರಿಂದಲೂ ಕದಿಯಲು ಅಥವಾ ಖರ್ಚು ಮಾಡಲು ಸಾಧ್ಯವಿಲ್ಲ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ  ಗುಣಮಟ್ಟದ ಶಿಕ್ಷಣವನ್ನು ನೀಡಿದಾಗ ಭವಿಷ್ಯದಲ್ಲಿ ನಮ್ಮ ಸಂಘಟನೆ ಬಲಿಷ್ಠವಾಗುವುದರಲ್ಲಿ ಸಂಶಯವಿಲ್ಲ. ನಾನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತೇನೆ. ಸಂಘದ ಸಮಾಜಪರ ಕಾರ್ಯಗಳಲ್ಲಿ ಮಕ್ಕಳನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಿ ಅವರಲ್ಲಿ ನಾಯಕತ್ವದ ಗುಣವನ್ನು ಬೆಳೆಸಬೇಕು.
      – ರಮೇಶ್‌ ಎಂ. ಬಂಗೇರ, 
ಅಧ್ಯಕ್ಷರು : ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ

ನಾವೆಲ್ಲರೂ ನಮ್ಮ ಕುಟುಂಬದ ಏಳ್ಗೆಯೊಂದಿಗೆ ಜನಪರ ಸೇವೆಗೂ ಮುಂದಾಗಬೇಕು. ಯುವ ಪೀಳಿಗೆಯಲ್ಲಿ ಸಂಘವು ಮಾಡುತ್ತಿರುವ ಕೆಲಸದ ಬಗ್ಗೆ ಮನವರಿಕೆ ಮಾಡಬೇಕು. ಜನಪರ ಕಾರ್ಯಗಳಿಂದ ನಮ್ಮ ಬದುಕು ಸಾರ್ಥಕತೆಯನ್ನು ಪಡೆಯಲು ಸಾಧ್ಯ. ಮೊಗವೀರ ಸಮಾಜದ ಜನಸಾಮಾನ್ಯರಿಗೆ ಸಹಕಾರ ನೀಡುವ ಮೂಲಕ ಸಂಘವು ಸದಾ ಕ್ರಿಯಾಶೀಲವಾಗಿದ್ದು. ಹಿರಿಯರು ಕಟ್ಟಿದ ಈ ಸಂಸ್ಥೆಯನ್ನು  ಕಿರಿಯರು ಜವಾಬ್ದಾರಿಯಿಂದ ಮುನ್ನಡೆಸಿಕೊಂಡು ಹೋಗಬೇಕು. ಕುಂದಾಪುರದಲ್ಲಿ ಈಗಾಗಲೇ ಅತ್ಯುತ್ತಮ ಸಭಾಗೃಹ ವೊಂದು ನಿರ್ಮಾಣಗೊಳ್ಳು ತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅದೇ ರೀತಿಯಲ್ಲಿ ಮುಂಬಯಿಯಲ್ಲೂ ಭವನವೊಂದು ನಿರ್ಮಾಣಗೊಳ್ಳಬೇಕು. ಸಮಾಜ ಬಾಂಧವರು ಉತ್ತಮ ರೀತಿ ಯಲ್ಲಿ ಸಹಕಾರ ನೀಡುವ ಅಗತ್ಯತೆಯಿದೆ        
– ಸುರೇಶ್‌ ಕಾಂಚನ್‌, 
ಮಾಜಿ ಅಧ್ಯಕ್ಷರು : ಮೊಗವೀರ ಮಹಾ ಜನ ಸೇವಾ ಸಂಘ ಬಗ್ವಾಡಿ ಹೋಬಳಿ

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.