ವೇತನ ಪಾವತಿ ವಿಳಂಬಕ್ಕೆ ಆಕ್ರೋಶ
Team Udayavani, Oct 30, 2018, 4:47 PM IST
ರೋಣ: ಕಳೆದೊಂದು ವರ್ಷದಿಂದ ವೇತನ ಪಾವತಿಸುವಲ್ಲಿ ಸ್ಥಳೀಯ ಪುರಸಭೆ ವಿಳಂಬ ಮಾಡುತ್ತಿದ್ದು, ಕೂಡಲೇ ವೇತನ ಪಾವತಿಸುವಂತೆ ಆಗ್ರಹಿಸಿ ಸ್ಥಳೀಯ ಪುರಸಭೆ ದಿನಗೂಲಿ ಪೌರಕಾರ್ಮಿಕರು ಸೋಮವಾರ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ಕಳೆದ 10 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ದಿನಗೂಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದು, ಎನ್‌ಜಿಒ ಮೂಲಕ ವೇತನ ಪಾವತಿಸುತ್ತಾ ಬರಲಾಗಿದೆ. ಈ ಮೊದಲು ಸರಿಯಾಗಿ ವೇತನ ಪಾವತಿಯಾಗುತ್ತಿತ್ತು. ಆದರೆ ಕಳೆದೊಂದು ವರ್ಷದಿಂದ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಈ ಕುರಿತು ಕಳೆದ ನಾಲ್ಕು ತಿಂಗಳ ಹಿಂದೆ ವೇತನಕ್ಕಾಗಿ ಧರಣಿ ನಡೆಸಿದ ಸಂದರ್ಭದಲ್ಲಿ ಎರಡು ತಿಂಗಳ ವೇತನ ಪಾವತಿಸಲಾಗಿತ್ತು. ಆದರೆ ಮತ್ತೆ ವೇತನ ಪಾವತಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಈ ಕುರಿತು ಕೇಳಿದಲ್ಲಿ 11 ಜನ ಪೌರಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎನ್ನುತ್ತಿದ್ದಾರೆ. ಆದ್ದರಿಂದ ಕೂಡಲೇ ನಮಗೆ ಪಾವತಿಯಾಗಬೇಕಾದ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಬೇಕು. ಅಲ್ಲದೇ ನಮ್ಮನ್ನು ಮತ್ತೆ ಸೇವೆಗೆ ಸೇರ್ಪಡೆಗೊಳಿಸಬೇಕು. ಕಳೆದ 10 ವರ್ಷದಿಂದ ನಗರ ಸ್ವಚ್ಛತೆಗಾಗಿಯೇ ನಮ್ಮ ಜೀವ ಮುಡುಪಾಗಿಟ್ಟು ದುಡಿದಿದ್ದೇವೆ. ಈಗ ಏಕಾಏಕಿ ಸೇವೆಯಿಂದ ವಜಾಗೊಳಿಸಿದಲ್ಲಿ ನಾವೇನು ಮಾಡಬೇಕು ಎಂದು ದಿನಗೂಲಿ ಪೌರ ಕಾರ್ಮಿಕರಾದ ಗಂಗವ್ವ ಹಲಗಿ, ಮಂಜವ್ವ ಪೂಜಾರ, ಜಯವ್ವ ಹಾದಿಮನಿ, ಹನಮಂತಪ್ಪ ತೆಗ್ಗಿಮನಿ ಅಳಲು ತೋಡಿಕೊಂಡರು.
ವಾರದ ಗಡುವು: ಕೆಲ ಗಂಟೆಗಳ ಕಾಲ ಪುರಸಭೆ ಕಚೇರಿ ಎದುರು ಧರಣಿ ನಡೆಸಿದ ದಿನಗೂಲಿ ಪೌರ ಕಾರ್ಮಿಕರು, ಸ್ಥಳಕ್ಕೆ ಪುರಸಭೆ ಮುಖ್ಯಾ ಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರು ಬಂದು ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದರು. ಕೆಲಸದ ನಿಮಿತ್ತ ಬೇರೆಡೆ ತೆರಳಿದ ಮುಖ್ಯಾಧಿಕಾರಿ ಕಟ್ಟಿಮನಿ ಅವರನ್ನು ಮೊಬೈಲ್ ಮೂಲಕ ಪುರಸಭೆ ವ್ಯವಸ್ಥಾಪಕ ಎಫ್.ಎ. ಶೇರಖಾನೆ ಸಂಪರ್ಕಿಸಿ, ಧರಣಿ ನಿರತರೊಂದಿಗೆ ಮಾತನಾಡಿದರು. ಬಳಿಕ ಸ್ಥಳಕ್ಕೆ ಪುರಸಭೆ ಮಾಜಿ ಸದಸ್ಯ ಮಂಜುನಾಥ ಹಾಳಕೇರಿ ಆಗಮಿಸಿ, ಧರಣಿ ನಿರತರಿಗೆ ಕೂಡಲೇ ವೇತನ ಪಾವತಿಸುವಂತೆ ಪುರಸಭೆ ಅಧಿಕಾರಿಗಳಲ್ಲಿ ಒತ್ತಾಯಿಸಿದರು. ಸದ್ಯ ಮುಖ್ಯಾಧಿಕಾರಿಗಳು ಬೇರೆಡೆ ತೆರಳಿದ್ದು, ಅವರು ಬಂದ ತಕ್ಷಣವೇ ಈ ಕುರಿತು ಚರ್ಚಿಸುವಂತೆ ವ್ಯವಸ್ಥಾಪಕ ಶೇರಖಾನೆ ಧರಣಿ ನಿರತರಿಗೆ ತಿಳಿಸಿದರು.
ಆಗ ಧರಣಿ ನಿರತರನ್ನು ಮಾಜಿ ಸದಸ್ಯ ಮಂಜನಾಥ ಹಾಳಕೇರಿ ಮನವೊಲಿಸಿ, ಒಂದು ವಾರ ಗಡುವು ನೀಡಿದರು. ಅಷ್ಟರೊಳಗೆ ಸಮಸ್ಯೆ ಇತ್ಯರ್ಥಗೊಳಿಸದಿದ್ದಲ್ಲಿ ಪುರಸಭೆ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಬಳಿಕ ದಿನಗೂಲಿ ಪೌರ ಕರಾಮಿಕರು ಧರಣಿಯಿಂದ ಹಿಂದೆ ಸರಿದರು. ಬಸಪ್ಪ ಚಲವಾದಿ, ಮಲ್ಲಪ್ಪ ಮುದೇನಗುಡಿ, ಹನಮಂತ ತೆಗ್ಗಿನಮನಿ, ಮಂಜುನಾಥ ಹೊಸಮನಿ, ಮೇಘರಾಜ ತೆಗ್ಗಿನಮನಿ, ಜಯವ್ವ ಹಾದಿಮನಿ, ಮಂಜವ್ವ ಪೂಜಾರ, ಗಂಗವ್ವ ಹಲಗಿ, ಪ್ರೇಮವ್ವ ದೊಡ್ಡಮನಿ, ಬಸವ್ವ ಪೂಜಾರ, ಬಸವವ್ ಹಿರೇಮನಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.