ರೈತ ಸಂಘಟನೆ ಒಗ್ಗಟ್ಟು ಪ್ರದರ್ಶಿಸಲಿ
Team Udayavani, Oct 30, 2018, 5:00 PM IST
ಹಿರೇಕೆರೂರ: ರೈತರ ಕಸುಬಿನ ಸಂಕೇತ ಹಸಿರು ಶಾಲು. ರೈತರು ಹಸಿರು ಶಾಲನ್ನು ಧರಿಸಲು ಹಿಂದೇಟು ಹಾಕಬಾರದು. ರೈತ ಸಂಘದಲ್ಲಿ ಯುವಕರು ಹೆಚ್ಚು ಸಕ್ರಿಯರಾಗಬೇಕು ಎಂದು ರಾಜ್ಯ ಹಸಿರು ಸೇನೆಯ ಅಧ್ಯಕ್ಷ ಕೆ.ಟಿ.ಗಂಗಾಧರ ಹೇಳಿದರು.
ಪಟ್ಟಣದ ಗುರುಭವನದಲ್ಲಿ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹಿರೇಕೆರೂರ ಮತ್ತು ರಟ್ಟೀಹಳ್ಳಿ ತಾಲೂಕಿನ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಪದಾ ಧಿಕಾರಿಗಳ ಪ್ರಮಾಣ ವಚನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವೈಜ್ಞಾನಿಕವಾಗಿ, ತರ್ಕಬದ್ಧವಾಗಿ ಹೋರಾಟ ಮಾಡಲು ಯುವಜನಾಂಗ ರೈತ ಸಂಘಕ್ಕೆ ಪಾದಾರ್ಪಣೆ ಮಾಡಬೇಕು. ರೈತರು ಒಗ್ಗಟ್ಟು ಮತ್ತು ರೈತ ಸಂಘ ಎಂದರೆ ರಾಜಕೀಯ ಪಕ್ಷದವರಿಗೆ ಭಯವಾಗುತ್ತದೆ. ಹೀಗಾಗಿ ಇಂದು ರೈತರ ಉದ್ಧಾರ ಮಾಡುತ್ತೇವೆ ಎಂದು ಎಲ್ಲ ರಾಜಕೀಯ ಪಕ್ಷಗಳು ಬೊಬ್ಬೆ ಹೊಡೆದು, ಪ್ರಣಾಳಿಕೆಯಲ್ಲಿ ರೈತರ ಬಗ್ಗೆ ಹೆಚ್ಚು ಮಾತನಾಡುತ್ತಾರೆ ಎಂದರು.
ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ರೂ.1730 ಬೆಂಬಲ ಘೋಷಿಸಿದೆ. ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಮೆಕ್ಕೆಜೋಳವನ್ನು ಕೆಎಂಎಫ್‌ನವರು ರೂ.1300 ಖರೀದಿ ಮಾಡಿ ಎಂದು ಹೇಳಿದ್ದಾರೆ. ಸರ್ಕಾರಗಳ ಮಾತಿಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದರು. ಡಾ|ಸ್ವಾಮಿನಾಥನ್ ವರದಿ ಯಥಾವತ್ತಾಗಿ ಜಾರಿಗೊಳಿಸುವುದಾಗಿ ಹೇಳಿದ್ದ ಬಿಜೆಪಿ ಇಂದು ಜಾರಿ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ ಎಂದು ದೂರಿದರು.
ದೇಶದಲ್ಲಿ ವ್ಯವಸಾಯ ರೈತರ ಕೈಯಲ್ಲಿದೆ. ಬಿತ್ತನೆ ಬೀಜ, ಜ್ಞಾನ ಮತ್ತು ಭೂಮಿಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ರೈತರ ಮೇಲಿದೆ. ಭೂಮಿಯನ್ನು ಬಿಡುವುದಿಲ್ಲ ಎಂಬ ಘೋಷಣೆ ರೈತರದ್ದಾಗಬೇಕು ಎಂದರು. ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರೈತ ಸಂಘ ಪಾರದರ್ಶಕತೆಯಿಂದ ನೇರವಾಗಿ ಹೋರಾಟ ಮಾಡಿ ಜನರ ಧ್ವನಿಯಾಗಿ ರೈತರ ಏಳ್ಗೆಗೆ ಶ್ರಮಿಸುತ್ತಿದೆ. ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಕೊಡಿಸುವ ಶಕ್ತಿ ರೈತ ಸಂಘಕ್ಕಿದೆ. ರೈತ ಸಂಘ ಹೋರಾಟಗಳ ಫಲವಾಗಿ ಅನೇಕ ರೈತರಿಗೆ ಮತ್ತು ರೈತ ನ್ಯಾಯ ಒದಗಿಸುವ ಕಾರ್ಯ ಮಾಡಿದೆ. ಇಂದು ರೈತ ಸಂಘಕ್ಕೆ ಯುವ ಘಟಕ, ಮಹಿಳಾ ಘಟಕಕ್ಕೆ ಪದಾ ಧಿಕಾರಿಗಳನ್ನು ಆಯ್ಕೆ ಮಾಡಿ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗಿದೆ. ಎಲ್ಲ ಪದಾಧಿಕಾರಿಗಳು ಹೋರಾಟ ಮಾಡಿ ರೈತರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಮಲ್ಲಾಡದ, ಹೆಸ್ಕಾಂ ಎಇಇ ರಾಜೀವ ಮರಿಗೌಡ್ರ ಉಪತಹಶೀಲ್ದಾರ್ ಮಂಜುಳಾ ಹೆಗಡಾಳ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಸ್.ಎಚ್.ಗಿಡ್ಡಪ್ಪನವರ, ದಯಾನಂದ ಡಿ., ಪ್ರಗತಿಪರ ರೈತ ಪ್ರಕಾಶಗೌಡ ಗೌಡರ ಅವರನ್ನು ಸನ್ಮಾನಿಸಲಾಯಿತು.
ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೋಗಿಗಳ ಮಠದ ಉತ್ತರಾ ಧಿಕಾರಿ ಮಹಾಂತ ದೇವರು ಸಾನ್ನಿಧ್ಯ ವಹಿಸಿದ್ದರು. ರೈತ ಮುಖಂಡ ವೀರನಗೌಡ ಬಾಳಂಬೀಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಮಹಮ್ಮದಗೌಸ್ ಪಾಟೀಲ, ಮಂಜುಳಾ ಅಕ್ಕಿ, ಮರಿಗೌಡ ಪಾಟೀಲ, ದಿಳ್ಳೆಪ್ಪ ಮಣ್ಣೂರ, ಕರಿಬಸಪ್ಪ ಅಗಸಿಬಾಗಿಲ, ಎಸ್.ವಿ.ಚಪ್ಪರದಳ್ಳಿ, ಬಸನಗೌಡ ಗಂಗಪ್ಪಳವರ, ಪ್ರಭುಗೌಡ ಪ್ಯಾಟಿ, ಶಂಕ್ರಗೌಡ ಶಿರಗಂಬಿ, ಗಂಗನಗೌಡ ಮುದಿಗೌಡರ, ಶಂಕರಗೌಡ ಮಕ್ಕಳ್ಳಿ, ರತ್ನಾ ನರೇಂದ್ರ, ಪ್ರೇಮಾ ಮಾಳಗಿ, ನಾಗರತ್ನಾ ನೀರಲಗಿ, ಪೂರ್ಣಿಮಾ ಪಾಟೀಲ, ಚಿಕ್ಕಪ್ಪ ಚತ್ರದ, ಸುರೇಶ ಚಲವಾದಿ ಸೇರಿದಂತೆ ಹಿರೇಕೆರೂರ ಮತ್ತು ರಟ್ಟೀಹಳ್ಳಿ ತಾಲೂಕಿನ ರೈತ ಸಂಘದ ಪದಾಧಿಕಾರಿಗಳು ವಿವಿಧ ಗ್ರಾಮಗಳ ರೈತರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
ಹಾವೇರಿ: ಮಾರುಕಟ್ಟೆಗೆ ಲಗ್ಗೆಇಟ್ಟ ಆಕರ್ಷಕ ಮಾದರಿ ಆಕಾಶ ಬುಟ್ಟಿ
Waqf Issue: ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟ; ಕಡಕೋಳದಲ್ಲಿ ಉದ್ವಿಗ್ನ ಸ್ಥಿತಿ
ಬ್ಯಾಡಗಿ: ಬಳ್ಳಾರಿಯ ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.