ನವೆಂಬರ್‌ ಸುಂದರಿ


Team Udayavani, Oct 31, 2018, 6:00 AM IST

5.jpg

ನವೆಂಬರ್‌ ಬಂತೆಂದರೆ ಎಲ್ಲೆಲ್ಲಿಯೂ ಕನ್ನಡ ಕಲರವ. ಶಾಲೆ- ಕಾಲೇಜು- ಕಚೇರಿಗಳಲ್ಲಿ ಕನ್ನಡ ಗೀತೆಗಳ ಅನುರಣನ, ಕನ್ನಡ ಧ್ವಜಾರೋಹಣದ ಸಂಭ್ರಮ. ಇತರೆ ಹಬ್ಬಗಳಂತೆ ಕನ್ನಡ ಹಬ್ಬಕ್ಕೂ ಹೊಸಬಟ್ಟೆ ತೊಟ್ಟು ಸಂಭ್ರಮಿಸುವವರಿದ್ದಾರೆ. ಅಂಥವರಿಗಾಗಿ ಕೆಲವು ಫ್ಯಾಷನ್‌ ಐಡಿಯಾಗಳು ಇಲ್ಲಿವೆ…

ಕನ್ನಡ ರಾಜ್ಯೋತ್ಸವ ಬಂದಾಗ ಎಲ್ಲೆಡೆ ಕನ್ನಡ ಹಾಡುಗಳು, ಕನ್ನಡದ ಧ್ವಜ ರಾರಾಜಿಸುತ್ತದೆ. ಯಾವ ಹಬ್ಬಕ್ಕೂ ಕಮ್ಮಿ ಇಲ್ಲ ನಮ್ಮ ನಾಡಹಬ್ಬ. ಅಂದು, ಕಾಲೇಜು- ಕಚೇರಿಗಳಲ್ಲಿರುವ ಅನ್ಯಭಾಷಿಕರಿಗೆ ನಮ್ಮ ಕನ್ನಡದ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಅವಕಾಶವೂ ನಮಗಿರುತ್ತದೆ. ಇಷ್ಟು ದೊಡ್ಡ ಹಬ್ಬ ಎಂದ ಮೇಲೆ, ಹಬ್ಬದ ಉಡುಪೂ ಅಷ್ಟೇ ಚೆನ್ನಾಗಿರಬೇಕಲ್ಲವೇ? 

  ಅವತ್ತು ನೀವು, ಕೆಂಪು ಬಣ್ಣದ ರವಿಕೆಗೆ ಹಳದಿ ಸೀರೆ ಅಥವಾ ಹಳದಿ ಬಣ್ಣದ ರವಿಕೆಗೆ ಕೆಂಪು ಸೀರೆ ಧರಿಸಬಹುದು. ಕೆಂಪು ಬಣ್ಣದ ಕಮೀಜ್‌ಗೆ ಹಳದಿ ಬಣ್ಣದ ಸಲ್ವಾರ್‌ (ಪ್ಯಾಂಟ್‌) ಮತ್ತು ದುಪಟ್ಟಾ (ಶಾಲು)… ಹೀಗೆ ಥರ-ಥರದಲ್ಲಿ ಮಿಕ್ಸ್‌ ಮ್ಯಾಚ್‌ ಮಾಡಬಹುದು. 

ಜುಮ್ಕಿ ಕಮಾಲ್‌ ಮಾಡಿ…
ಹಳದಿ ಮತ್ತು ಕೆಂಪು ಬಣ್ಣದ ಕಿವಿ ಓಲೆಗಳೂ ರಾಜ್ಯೋತ್ಸವಕ್ಕೆ ಸೈ ಅನ್ನಿಸುತ್ತವೆ. ಕೆಂಪು ಕಲ್ಲಿನ ಕಿವಿ ಓಲೆಗೆ ಹಳದಿ ಬಣ್ಣದ ಜುಮ್ಕಿ, ಹಳದಿ ಕಲ್ಲಿನ ಕಿವಿ ಓಲೆಗೆ ಕೆಂಪು ಕಲ್ಲಿನ ಗೆಜ್ಜೆ ಥರದ ಬುಗುಡಿ, ಕುಂಕುಮ ಅರಿಶಿನದ ಬಟ್ಟಲಿನಂಥ ಕಿವಿ ಓಲೆ, ಎಸಳು ಬುಗುಡಿ, ಹಳದಿ- ಕೆಂಪು ಬಣ್ಣಗಳ ಬುಗುಡಿ ಹೂವು ಇತ್ಯಾದಿಗಳನ್ನು ತೊಟ್ಟು ನೋಡಬಹುದು. ಇವು ಸಾಂಪ್ರದಾಯಿಕ ಉಡುಗೆಗೆ ಮಾತ್ರವಲ್ಲದೆ ಪಾಶ್ಚಾತ್ಯ ಉಡುಗೆಗೂ ಒಪ್ಪುತ್ತವೆ. ಸೀರೆ, ಕುರ್ತಿ, ಚೂಡಿದಾರ, ಉದ್ದ ಲಂಗ, ಸೂಟ್‌, ಜೀ®Õ… ಪ್ಯಾಂಟ್‌, ಸ್ಕರ್ಟ್‌, ಸಮ್ಮರ್‌ ಡ್ರೆಸ್‌- ಹೀಗೆ ಎಲ್ಲದರ ಜೊತೆಗೂ ಕಿವಿಯೋಲೆಗಳು ಚೆನ್ನಾಗಿ ಕಾಣಿಸುತ್ತವೆ.

ಗಾಜಿನ ಬಳೆಯ ಝಲಕ್‌
ಲಂಗ- ದಾವಣಿ, ಸಲ್ವಾರ್‌- ಕಮೀಜ…, ಸೀರೆ- ರವಿಕೆ ಇತ್ಯಾದಿಗಳ ಜೊತೆ ಬಳೆಗಳನ್ನು ತೊಡುವುದಾದರೆ ಗಾಜಿನ ಬಳೆಗಳನ್ನು ತೊಡಬಹುದು. ಹಳದಿ ಮತ್ತು ಕೆಂಪು ಬಣ್ಣದ ಗಾಜಿನ ಬಳೆಗಳನ್ನು, ಎರಡೂ ಕೈಗಳಿಗೆ ತೊಟ್ಟರೆ ಉಟ್ಟ ಉಡುಗೆಯ ಮೆರುಗು ಇನ್ನೂ ಹೆಚ್ಚಾಗುವುದು ಖಚಿತ.

ಜಾಕೆಟ್‌ ಜೊತೆಗೆ ಆಕ್ಸೆಸರೀಸ್‌
ಕೆಂಪು ಸೀರೆ ಮೇಲೆ ಕೋಟ್‌ನಷ್ಟು ದೊಡ್ಡದಾದ ಹಳದಿ ಜಾಕೆಟ್‌ ತೊಡಬಹುದು ಅಥವಾ ಹಳದಿ ಸೀರೆ ಮೇಲೆ ಕೆಂಪು ಜಾಕೆಟ್‌ ತೊಡಬಹುದು. ಇಲ್ಲವೇ ಸಂಪೂರ್ಣವಾಗಿ ಹಳದಿ ಬಣ್ಣದ ಉಡುಗೆ ತೊಟ್ಟು, ಕೆಂಪು ಬಣ್ಣದ ಆಕ್ಸೆಸರೀಸ್‌ ತೊಡಬಹುದು. ಸಂಪೂರ್ಣವಾಗಿ ಕೆಂಪು ಬಣ್ಣದ ದಿರಿಸು ತೊಟ್ಟು, ಹಳದಿ ಬಣ್ಣದ ಆಕ್ಸೆಸರೀಸ್‌ ಧರಿಸಬಹುದು. ಉದಾ: ಕೆಂಪು ಬಣ್ಣದ ರವಿಕೆ ಹಾಗೂ ಸೀರೆಗೆ ಹಳದಿ ಬಣ್ಣದ ಬೊಟ್ಟು, ಕಿವಿ ಓಲೆ, ಸರ, ಮೂಗುತಿ, ಉಂಗುರ, ಬಳೆ, ಕಾಲು ಗೆಜ್ಜೆ, ಪಾದರಕ್ಷೆ, ಪರ್ಸ್‌ ಅಥವಾ ಬ್ಯಾಗ್‌, ಇತ್ಯಾದಿ. 

ಮಿಕ್ಸ್‌ ಮ್ಯಾಚ್‌ ಮಾಡಿ…
ಫ್ಯೂಶನ್‌ ಡ್ರೆಸ್ಸಿಂಗ್‌ ಹೆಸರಿನಲ್ಲಿ ಯುವತಿಯರು ಸಾಂಪ್ರದಾಯಿಕ ಉಡುಗೆ ಮತ್ತು ಪಾಶ್ಚಾತ್ಯ ಉಡುಗೆಗಳನ್ನು ಮಿಕ್ಸ್ ಆ್ಯಂಡ್‌ ಮ್ಯಾಚ್‌ ಮಾಡಿ ತೊಡುತ್ತಾರೆ. ಉದಾಹರಣೆಗೆ, ಉದ್ದ ಲಂಗ ರವಿಕೆ ಜೊತೆ ಜೀನ್ಸ್‌ ಪ್ಯಾಂಟ್‌ ಹಾಗೂ ಶಾಲು, ಅದರ ಮೇಲೆ ಚಿನ್ನದ ಬಣ್ಣದ ಸೊಂಟ ಪಟ್ಟಿಯನ್ನು ಬೆಲ್ಟ್ನಂತೆ ತೊಡುವುದು. ಜೀನ್ಸ್‌ ಪ್ಯಾಂಟ್‌ ಬದಲಿಗೆ ಲೆಗಿಂಗ್ಸ್, ಜೆಗಿಂಗ್ಸ್ (ಜೀನ್ಸ್ ಲೆಗಿಂಗ್ಸ್), ಹ್ಯಾರೆಂ ಪ್ಯಾಂಟ್‌, ಧೋತಿ ಪ್ಯಾಂಟ್‌ ಮುಂತಾದ ಪ್ಯಾಂಟ್‌ಗಳನ್ನೂ ಉಟ್ಟು ಪ್ರಯೋಗ ಮಾಡಬಹುದು. ಆಗ ಇಂಥ ಉಡುಗೆ ಜೊತೆ ಕಿವಿ ಓಲೆ, ಬಳೆ, ಸರ, ಸೊಂಟ ಪಟ್ಟಿ, ಉಂಗುರ, ಮೂಗು ಬೊಟ್ಟು- ಹೀಗೆ ಎಲ್ಲ ಥರದ ಸಾಂಪ್ರದಾಯಿಕ ಆಭರಣಗಳು ತುಂಬಾ ಚೆನ್ನಾಗಿ ಕಾಣಿಸುತ್ತವೆ. ಸಿನಿಮಾ ನಟಿಯರು ಪ್ರಯೋಗಿಸಿರುವ ಈ ಶೈಲಿಯನ್ನು ತುಂಬಾ ಮಂದಿ ಫಾಲೋ ಮಾಡುತ್ತಿದ್ದಾರೆ. ಇಂಥ ಉಡುಗೆಯ ಜೊತೆಗೆ ಜಡೆ, ತುರುಬು, ಜುಟ್ಟು ಕಟ್ಟಿಕೊಳ್ಳಬಹುದು. ಇಲ್ಲವೇ, ಕೂದಲನ್ನು ಹಾಗೆ ಬಿಟ್ಟೂ ನೋಡಬಹುದು.

–  ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.