ದಿಲ್ಲಿ: ಪೇಜಾವರ ಮಠದ ಸಂಶೋಧನ ಭವನ ಉದ್ಘಾಟನೆ
Team Udayavani, Oct 31, 2018, 10:35 AM IST
ಉಡುಪಿ: ಪೇಜಾವರ ಶ್ರೀಗಳ ನೇತೃತ್ವದ ರಾಮವಿಟuಲ ಶಿಕ್ಷಣ ಸಮಿತಿಯ ಹೊಸದಿಲ್ಲಿಯಲ್ಲಿರುವ ವೇದವೇದಾಂತ ಅಧ್ಯಯನ ಮತ್ತು ಸಂಶೋಧನ ಪ್ರತಿಷ್ಠಾನ ಭವನದ ಉದ್ಘಾಟನೆಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಂಗಳವಾರ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸಂಸ್ಕೃತದ ಮಹತ್ವ ಹಾಗೂ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಬಣ್ಣಿಸಿ ಶ್ರೀಪಾದರ ಸಮಾಜಮುಖೀ ಸೇವೆಯನ್ನು ಶ್ಲಾ ಸಿದರು.
ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಮಾತನಾಡಿ, ಸಂಸ್ಕೃತದ ಭಾಷೆಯ ವ್ಯಾಪ್ತಿ ದೊಡ್ಡದು. ದೇಶ
ವಿದೇಶಗಳಲ್ಲಿ ಅದರ ವ್ಯಾಪ್ತಿ ವಿಸ್ತರಿಸಿದೆ ಎಂದರು. ಸಾಫ್ಟ್ವೇರ್ ನಿರ್ಮಾಣದಲ್ಲಿ ಸಂಸ್ಕೃತದ ಪಾತ್ರದ ಕುರಿತು ತಿಳಿಸಿದರು.
ಪೇಜಾವರ ಶ್ರೀಗಳು ಆಶೀರ್ವಚನ ನೀಡಿ, ಸಂಸ್ಕೃತ ಅಧ್ಯಯನದಿಂದ ಸಂಸ್ಕೃತಿಯ ಅಭ್ಯುದಯವಾಗುತ್ತದೆ ಎಂದರಲ್ಲದೆ ಜಗದ್ಗುರು ಮಧ್ವಾಚಾರ್ಯರ ಕರ್ಮ ಮತ್ತು ಭಕ್ತಿ ಸಿದ್ಧಾಂತದ ಪ್ರಸ್ತುತತೆಯನ್ನು ವಿವರಿಸಿದರು. ಈ ಸಂಸ್ಥೆಯ ಮೂಲಕ ಸಂಸ್ಕೃತ-ಯೋಗ -ತತ್ವಶಾಸ್ತ್ರಗಳ ವಿಶಿಷ್ಟ ಪರಿಚಯವನ್ನು ಹಿಂದಿ ಭಾಷೆಯ ಮೂಲಕ ಮಾಡುವ ಸಂಕಲ್ಪವನ್ನು ಪ್ರಕಟಿಸಿದರು.
ಸಹಾಯಕ ಸಚಿವ ವಿಜಯ್ ಗೋಯಲ್, ಡಿ.ಪಿ. ಅನಂತ, ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು. ಡಾ| ಬಿ.ಡಿ. ಪಾಟೀಲ್ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.