ಬದುಕಿನ ಯಶಸ್ಸಿಗೆ ಮಾರ್ಗದರ್ಶಿ ಜೀವನ ಕಲೆ
Team Udayavani, Oct 31, 2018, 2:10 PM IST
ಮನುರ್ಭವ ಎಂಬುವುದು ಒಂದು ಮಂತ್ರದ ತುಣುಕು. ಮಾನವನಾಗು ಎಂಬುವುದು ಇದರ ಆಶಯ, ಆದೇಶವೂ ಆಗಿದೆ. ಜಂತು ಆಗಿ ಜನಿಸಿದವ ಪಶು- ದಾನವ ಮಟ್ಟವನ್ನು ಮೀರಿ ಮಾನವನಾಗಬೇಕಾದರೆ ಆಚಾರ ವಿಚಾರ ವ್ಯವಹಾರಗಳಲ್ಲಿ ಸಂಸ್ಕೃತನಾಗಬೇಕಾಗುತ್ತದೆ. ಈ ಸಂಸ್ಕಾರ ವಿಧಿಯ ಪರಿ ಪಕ್ವತೆ ಬೆಳೆಯುವುದು ಹೇಗೆ ಎಂಬುದನ್ನು ಮಾ.ಭ.ಪೆರ್ಲ ಅವರು ‘ಜೀವನ ಕಲೆ’ ಕೃತಿಯಲ್ಲಿ ವಿಸ್ತಾರವಾಗಿ ವಿವರಿಸಿದ್ದಾರೆ.
ಘಟನೆ 1
ಜೀವನ ಮತ್ತು ಮರಣಗಳ ಕುರಿತು ನಮ್ಮಲ್ಲಿರುವ ಅಜ್ಞನ ಪ್ರಾಣಿಯನ್ನು ಮನುಷ್ಯನಿಗಿಂತ ವಿಭಿನ್ನವಾಗಿ ನಿಲ್ಲಿಸುತ್ತದೆ. ಇದರ ನಿಜವಾದ ಅರ್ಥ ಹುಡುಕುತ್ತಾ ಸಾಗುವಾಗ ತಾನು ಯಾರು?, ಇಲ್ಲಿಗೆ ನಾನು ಹೇಗೆ ಬಂದೆ?, ತಾನು ಹೋಗುವುದು ಎಲ್ಲಿಗೆ? ಎಂಬ ಜಿಜ್ಞಾಸೆ ಹುಟ್ಟುವಂತೆ ಮಾಡುತ್ತದೆ. ಬುದ್ಧಿ ಬೆಳೆಯುತ್ತಾ ಹೋದಂತೆ ಜೀವನದ ಅನೇಕ ಸಂಗತಿಗಳ ಬಗ್ಗೆ ಚಿಂತನೆ ಆರಂಭವಾಗುತ್ತದೆ. ಜೀವನದ ಅರ್ಥವೇನು?, ಉದ್ದೇಶವೇನು? ಎಂಬುದರ ಬಗ್ಗೆ ಯಾರೂ ಯೋಚಿಸುವುದೇ ಇಲ್ಲ.
ಘಟನೆ 2
ಆಸೆ ಎಂಬುವುದು ಮಾನವನ ಪ್ರಗತಿಗೆ ಕಾರಣ ಎನ್ನುವ ಲೇಖಕರು, ಅತಿಯಾದ ಆಸೆ ದುಃಖಕ್ಕೆ ಮೂಲವಾದರೆ, ಹಿತಮಿತವಾದ ಆಸೆ ಬದುಕಿ ಉಳಿಯಲು ಅಗತ್ಯವಾಗಿದೆ. ಆಸೆಯೊಂದಿಗೆ ಶ್ರಮವೂ ಮುಖ್ಯ. ತನ್ನ ಕುಟುಂಬ, ಬಂಧು ಬಳಗವನ್ನು ಮೆಚ್ಚಿಸಲು ಆಸೆ ಮಾತ್ರ ಮುಖ್ಯ ಎನ್ನುವುದನ್ನು ಪರಿಗಣಿಸಿ, ಸಾಮಾಜಿಕವಾಗಿ ಮಾತ್ರವಲ್ಲದೇ ಸಮಾಜಕ್ಕೂ ಒಳ್ಳೆಯ ಮಾಡಿ, ತಮ್ಮ ಆಸೆಗಳಿಗೆ ತಾವೇ ಜವಾಬ್ದಾರರು ಎನ್ನುವುದನ್ನು ಅರಿತುಕೊಳ್ಳಬೇಕು ಎಂದಿದ್ದಾರೆ.
ಘಟನೆ 3
ಬದುಕು ಎಂಬುದನ್ನು ನಾವು ತಿಳಿದುಕೊಂಡಿರುವುದು ವೃತ್ತದ ಅರ್ಧಭಾಗ. ಇನ್ನು ಅರ್ಧ ಭಾಗ ಈ ಬದುಕಿನ ಆಚೆಗೆ ದೇಹಕ್ಕೆ ಅತೀತವಾದ ಅಸ್ತಿತ್ವದಲ್ಲಿ ಅಡಗಿದೆ. ಇದರ ಬಗ್ಗೆ ನಿಶ್ಚಿತವಾಗಿ, ನಿಷ್ಪಕ್ಷಪಾತವಾಗಿ ಹೇಳುವುದು ಯಾರಿಗೂ ಸಾಧ್ಯವಾಗಲಿಲ್ಲ. ಬದುಕಿಗೆ ಜೀವನ ಎಂಬ ಹೆಸರಿದೆ. ಜೀವನದ ಇನ್ನೊಂದು ಅರ್ಥ ನೀರು. ಹೇಗೆ ನೀರಿನ ಅಸ್ತಿತ್ವವು ಇಳಿಯುವುದಿಲ್ಲವೂ, ಹಾಗೆಯೇ ಜೀವನವೂ ಕೂಡ. ಬದುಕಿನ ಆಚೆಗಿನ ಸತ್ಯದ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಒಟ್ಟಿನಲ್ಲಿ ಜೀವನದ ನೈಜ್ಯತೆಯನ್ನು ತೆರೆದಿಡುವ ಈ ಕೃತಿ ಒಂದು ವಿಭಿನ್ನ ಆಲೋಚನೆಯತ್ತ ನಮ್ಮ ಮನಸ್ಸು ಹೊರಳಿಸಲು ಸಹಾಯಕವಾದಂತಿದೆ.
ಶ್ರುತಿ ನೀರಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.