ಹೆಸರು ಬೆಳಗಾವಿಯಾದರೂ ಮರೆಯಾಗದ ಬೆಳಗಾಂ ಪ್ರೇಮ


Team Udayavani, Oct 31, 2018, 4:57 PM IST

31-october-19.gif

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಈಗ ಕನ್ನಡ ರಾಜ್ಯೋತ್ಸವ ಸಂಭ್ರಮ. ಕನ್ನಡ ಸಂಘಟನೆಗಳ ಚಟುವಟಿಕೆಗಳು ಜೋರಾಗಿದ್ದರೂ ಅದಕ್ಕೆ ತಕ್ಕಂತೆ ಕನ್ನಡದ ಅನುಷ್ಠಾನ, ನಾಮಫಲಕಗಳಲ್ಲಿ ಕನ್ನಡ ಭಾಷೆ ಹಾಗೂ ಬೆಳಗಾವಿ ಹೆಸರು ಕಡ್ಡಾಯ ಎಂಬ ಸರಕಾರದ ಆದೇಶ ಪಾಲನೆಯಾಗುತ್ತಿಲ್ಲ.

ಬೆಳಗಾಂ ಎಂಬುದು ಬೆಳಗಾವಿಯಾಗಿ ಬದಲಾಗಬೇಕು ಎಂಬ ಕನ್ನಡ ಹೋರಾಟಗಾರರ ನಿರಂತರ ಹೋರಾಟಕ್ಕೆ ಸರಕಾರಗಳು ಸ್ಪಂದಿಸಿ ಬೆಳಗಾವಿ ಪುನರ್‌ ನಾಮಕರಣ ಮಾಡಿ ಈಗ ಐದು ವರ್ಷ ಸಂದಿವೆ. ಆದರೆ ಬೆಳಗಾವಿಯ ಜನ, ಹಾಗೂ ಸರಕಾರಿ ಅಧಿಕಾರಿಗಳು ಈಗಲೂ ಇದನ್ನು ಸಂಪೂರ್ಣವಾಗಿ ಸ್ವೀಕಾರ ಮಾಡಿಲ್ಲ. ಈಗಲೂ ವ್ಯವಹಾರಿಕ ಭಾಷೆಯಲ್ಲಿ ಬೆಳಗಾಂ ಎಂಬುದೇ ಹೆಚ್ಚು ಪ್ರಚಲಿತದಲ್ಲಿದೆ. ಅನೇಕ ಕಡೆ ನಾಮಫಲಕಗಳಲ್ಲಿ ಬೆಳಗಾಂ ರಾರಾಜಿಸುತ್ತಿದೆ.

ಇದಕ್ಕೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯುವ ಸಿಪಿಎಡ್‌ ಮೈದಾನದ ಬಳಿ ಇಂಗ್ಲಿಷ್‌ನಲ್ಲಿ ಬೆಳಗಾಂ ಎಂದು ರಾರಾಜಿಸುತ್ತಿರುವ ನಾಮಫಲಕಗಳೇ ನಿದರ್ಶನ. ಅಧಿಕಾರಿಗಳು ಇದರ ತೆರವಿಗೆ ಮುಂದಾಗಿಲ್ಲ.

ಬೆಳಗಾವಿ ಹೆಸರು ನಾಮಕರಣ ಮಾಡಿದಾಗ ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಸರಕಾರದಿಂದ ಜಾಗೃತಿ ಕಾರ್ಯಕ್ರಮಗಳು ನಡೆಯಲಿಲ್ಲ. ಕನ್ನಡ ಭಾಷೆಯಲ್ಲಿ ಬಹುತೇಕ ಬೆಳಗಾವಿ ಹೆಸರು ಬದಲಾದರೂ ಬಹುತೇಕ ಇಂಗ್ಲಿಷ್‌ ಫಲಕಗಳಲ್ಲಿ ಇವತ್ತಿಗೂ ಬೆಳಗಾಂ ಎಂದೇ ಕಾಣಿಸುತ್ತಿದೆ. ಅಧಿಕಾರಿಗಳ ಉದಾಸೀನದಿಂದ ಬೆಳಗಾಂ ಇನ್ನೂ ಪರಿಪೂರ್ಣವಾಗಿ ಬೆಳಗಾವಿಯಾಗಿಲ್ಲ ಎಂಬ ಅಸಮಾಧಾನ ಕನ್ನಡ ಹೋರಾಟಗಾರರಲ್ಲಿದೆ. ಬೆಳಗಾವಿಯ ಮರಾಠಿ ಪತ್ರಿಕೆಗಳಲ್ಲಿ ಕರ್ನಾಟಕ ಸರಕಾರದ ಜಾಹೀರಾತುಗಳಲ್ಲಿ ಈಗಲೂ ಬೆಳಗಾಂ ಅಂತಲೇ ಮುದ್ರಿತವಾಗುತ್ತಿದೆ. ಸರಕಾರದ ಜಾಹೀರಾತಿನಲ್ಲಿ ತಪ್ಪು ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಹಣ ಪಾವತಿ ಮಾಡಬಾರದು ಎಂದು ಸರಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡಿದರೂ ಯಾವುದೇ ಕ್ರಮ ಇಲ್ಲ. ಇದು ಬೆಳಗಾವಿ ನಾಮಕರಣದ ಬಗ್ಗೆ ಸರಕಾರಕ್ಕೆ ಇರುವ ಗಂಭೀರತೆ ತೋರಿಸುತ್ತದೆ ಎನ್ನುತ್ತಾರೆ ಚಂದರಗಿ.

ಕರ್ನಾಟಕ ಸರಕಾರದ ಇಲಾಖೆಗಳಲ್ಲಿ ಶೇ.90 ರಷ್ಟು ಬೆಳಗಾವಿ ನಾಮಕರಣ ಆದೇಶ ಜಾರಿಯಾಗಿದೆ. ಆದರೆ ಖಾಸಗಿ ಸಂಸ್ಥೆಗಳು, ಉದ್ಯಮಗಳಲ್ಲಿ ಇದು ಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಒತ್ತಡ ಬೇಕು. ಇಲ್ಲಿ ಕನ್ನಡಿಗರನ್ನೇ ಬೆದರಿಸುವ ಕೆಲಸ ನಡೆದಿದೆ ಎಂಬುದು ಕನ್ನಡ ಹೋರಾಟಗಾರರ ಆರೋಪ.

ರಾಜ್ಯ ಸರಕಾರದ ಕಚೇರಿಗಳ ಮೇಲೆ ಕಡ್ಡಾಯವಾಗಿ ಬೆಳಗಾವಿ ಎಂದು ಬರೆಸಿದ್ದರೂ ಇದೇ ಆದೇಶ ಕೆಂದ್ರ ಸರಕಾರದ ಕಚೇರಿಗಳಲ್ಲಿ ಕಾಣುತ್ತಿಲ್ಲ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕನ್ನಡ ಮುಖಂಡರು.

ದಶಕಗಳ ಬೇಡಿಕೆ 
ಬೆಳಗಾಂ ಬದಲಿಗೆ ಬೆಳಗಾವಿ ಎಂದು ನಾಮಕರಣ ಮಾಡಬೇಕು ಎಂಬ ಹೋರಾಟಕ್ಕೆ ಹಲವಾರು ದಶಕಗಳ ಇತಿಹಾಸವೇ ಇದೆ. ಬೆಳಗಾವಿಯಲ್ಲಿ 2003 ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಇದಕ್ಕೊಂದು ಸ್ಪಷ್ಟ ರೂಪ ಬಂತು. ಆಗ ಕನ್ನಡ ಹೋರಾಟಗಾರರು ಬೆಳಗಾಂ ಬದಲು ಬೆಳಗಾವಿ ಎಂದು ನಾಮಕರಣ ಮಾಡುವಂತೆ ಪ್ರತಿಭಟನೆ ನಡೆಸಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲಿಂದ ಈ ಹೋರಾಟ ನಿರಂತರವಾಗಿ ನಡೆಯಿತು. ಕನ್ನಡ ಹೋರಾಟಗಾರರ ಸತತ ಒತ್ತಡಕ್ಕೆ ಸ್ಪಂದಿಸಿದ ಸರಕಾರ ಬೆಳಗಾವಿ ಸೇರಿದಂತೆ 13 ನಗರಗಳಿಗೆ ಮರು ನಾಮಕರಣ ಮಾಡಿ ಆದೇಶ ಹೊರಡಿಸಿತು. ಆದರೆ ಇದನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕು ಎನ್ನುವ ಷರತ್ತು ಹಾಕಲಿಲ್ಲ. ಇದರಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರು, ಉದ್ದಿಮೆದಾರರು ಬೆಳಗಾವಿ ಹೆಸರನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ ಎಂಬುದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅಸಮಾಧಾನ.

ಜಾರಿಗೆ ನಿರಾಸಕ್ತಿ
ನಮ್ಮ ಹೋರಾಟದ ಫಲವಾಗಿ ಬೆಳಗಾಂಗೆ ಬೆಳಗಾವಿ ಎಂದು ನಾಮಕರಣವಾಯಿತು. ಈ ಆದೇಶವಾಗಿ ಐದು ವರ್ಷಗಳಾದವು. ಆದರೆ ಇದುವರೆಗೆ ಇದು ಸಮರ್ಪಕವಾಗಿ ಜಾರಿಗೆ ಬಂದೇ ಇಲ್ಲ. ಅಧಿಕಾರಿಗಳು ಸಹ ಸರಕಾರದ ಆದೇಶ ಪಾಲಿಸಬೇಕು ಎನ್ನುವಂತೆ ಕಾಟಾಚಾರಕ್ಕೆ ಕಾರ್ಯಾಚರಣೆ ಮಾಡಿದ್ದಾರೆ. ಇವರ ನಿರಾಸಕ್ತಿಯಿಂದಾಗಿ ಈಗಲೂ ಅನೇಕ ಸರಕಾರಿ ಕಚೇರಿಗಳಲ್ಲಿ ಬೆಳಗಾಂ ಎಂದೇ ಬಳಸಲಾಗುತ್ತಿದೆ.
 ಶ್ರೀನಿವಾಸ ತಾಳೂಕರ, ಕನ್ನಡ ಹೋರಾಟಗಾರ 

ಮನವೊಲಿಕೆ ಜಾರಿ
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಹುತೇಕ ಕಡೆ ಬೆಳಗಾವಿ ಎಂಬ ಪುನರ್‌ ನಾಮಕರಣ ಅನುಷ್ಠಾನವಾಗಿದೆ. ಸರಕಾರಿ ಕಚೇರಿಗಳಲ್ಲಿ ಸಹ ಇದನ್ನು ಜಾರಿಗೆ ತರಲಾಗಿದೆ. ಕೆಲವೇ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆ ಸಾರ್ವಜನಿಕ ಸ್ಥಳದಲ್ಲಿ ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಬೆಳಗಾವಿ ಹೆಸರು ಬರೆಯಲಾಗಿದೆ. ಮರಾಠಿ ಭಾಷಿಕ ಪ್ರದೇಶಗಳಲ್ಲಿ ಮಾತ್ರ ಇನ್ನೂ ಬಾಕಿ ಇದ್ದು ಇಲ್ಲಿಯೂ ಸಹ ಜನರ ಮನವೊಲಿಸಿ ನಾಮಫಲಕಗಳಲ್ಲಿ ಬೆಳಗಾವಿ ಹೆಸರು ಬರೆಸಲಾಗುತ್ತಿದೆ.
ಶಶಿಧರ ಕುರೇರ, ಪಾಲಿಕೆ ಆಯುಕ್ತ

ಕೇಶವ ಆದಿ

ಟಾಪ್ ನ್ಯೂಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಯುವಕನ ಮೇಲೆ ಗುಂಡಿನ‌ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ

Belagavi: ಯುವಕನ ಮೇಲೆ ಗುಂಡಿನ‌ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

1(4

Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.