ಮೊಬೈಲಿನಲ್ಲೂ ನುಡಿ ತಂತ್ರಾಂಶ

Team Udayavani, Nov 1, 2018, 9:33 AM IST

b-47.jpg

ಬೆಂಗಳೂರು: ಸದ್ಯ ಪ್ರಚಲಿತದಲ್ಲಿರುವ ನುಡಿ ತಂತ್ರಾಂಶದ ಲೋಪದೋಷಗಳನ್ನು ಸರಿಪಡಿಸಿ, ಯೂನಿಕೋಡ್‌ನ‌ಂತೆ ಮೊಬೈಲ್‌ ಹಾಗೂ ಕಂಪ್ಯೂಟರ್‌ಗೆ ಸರಿಹೊಂದಿರುವ ನುಡಿ 0.6 ತಂತ್ರಾಂಶ ಸಿದ್ಧವಾಗಿದ್ದು, ನವೆಂಬರ್‌ ಅಂತ್ಯದೊಳಗೆ ಕನ್ನಡಿಗರಿಗೆ ಲಭ್ಯವಾಗಲಿದೆ. ನುಡಿ ತಂತ್ರಾಂಶದಲ್ಲಿ ಕೀಲಿಮಣಿ ಮಾಡಿದ ಅಕ್ಷರ, ಪದ ಮತ್ತು ವಾಕ್ಯಗಳನ್ನು ಎಂಎಸ್‌ ವರ್ಡ್‌ ಅಥವಾ ಬೇರ್ಯಾವುದಾದರೂ ಡಾಕ್‌ ಫೈಲ್‌ ಮೂಲಕ ಓಪನ್‌ ಮಾಡಬೇಕು. ನುಡಿ ತಂತ್ರಾಂಶ ಗಣಕನಲ್ಲಿ ಅಳವಡಿಸಿಕೊಂಡಿದ್ದರೆ ಮಾತ್ರ ನುಡಿ ಕೀಲಿಮಣೆಯ ಬರಹಗಳು ಕಾಣಿಸುತ್ತದೆ. ನುಡಿ ತಂತ್ರಾಂಶ ಇಲ್ಲದ ಕಂಪ್ಯೂಟರ್‌ನಲ್ಲಿ ನುಡಿ ಓದಲು ಮತ್ತು ಬರೆಯಲು ಸಾಧ್ಯವಿಲ್ಲ. ಹೀಗಾಗಿ ನುಡಿ ತಂತ್ರಾಂಶವನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ. 

ನುಡಿಯಲ್ಲಿರುವ ಬರಹಗಳನ್ನು ಇನ್ಮುಂದೆ ಯೂನಿಕೋಡ್‌ ಮಾದರಿಯಲ್ಲಿ ಎಂಎಸ್‌ ವರ್ಡ್‌ ಅಥವಾ ಡಾಕ್‌ ಫೈಲ್‌ ಇಲ್ಲದೇ ನೇರವಾಗಿ ಓದಬಹುದಾಗಿದೆ. ಜತೆಗೆ ನುಡಿ ಅಕ್ಷರಗಳನ್ನು ಯೂನಿಕೋಡ್‌ಗೆ ಮತ್ತು ಯೂನಿಕೋಡ್‌ನಿಂದ ನುಡಿಗೆ ಪರಿವರ್ತನೆ ಮಾಡಬಹುದಾದ ವ್ಯವಸ್ಥೆಯನ್ನು ನುಡಿ 0.6 ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಕರ್ನಾಟಕ ಗಣಕ ಪರಿಷತ್ತಿನ ಅಧಿಕಾರಿಗಳು, ಸ್ವಾಫ್ಟ್ವೇರ್‌ ತಜ್ಞರ 
ಸಹಕಾರದೊಂದಿಗೆ ಕಳೆದ ಒಂದುವರೆ ವರ್ಷದ ಸತತ ಪರಿಶ್ರಮದಿಂದ ನುಡಿ 0.6 ತಂತ್ರಾಂಶ ಸಿದ್ಧಪಡಿಸಲಾಗಿದೆ. ನುಡಿ 0.6 ತಂತ್ರಾಂಶದ ಮೂಲಕ ಬರೆದಿರುವ ಬರಹಗಳನ್ನು ಯುನಿಕೋಡ್‌ ಮಾದರಿಯಲ್ಲಿ ಮೊಬೈಲ್‌ನಲ್ಲೂ ಓದಬಹುದಾಗಿದೆ. ಆದರೆ, ಮೊಬೈಲ್‌ಗೆ ನುಡಿ 0.6 ತಂತ್ರಾಂಶ ಅಳವಡಿಸಲು ಸಾಧ್ಯವಿಲ್ಲ. ನುಡಿ 0.6 ತಂತ್ರಾಂಶದಲ್ಲಿ ಆಡಳಿತ ಪದಕೋಶ ಹಾಗೂ ಇನ್ನಿತರೆ ಹಲವು ಹೊಸ ಅಂಶಗಳನ್ನು ಸೇರಿಸಲಾಗಿದೆ ಎಂದು ಪರಿಷತ್‌ನ ಕಾರ್ಯದರ್ಶಿ ಜಿ.ಎನ್‌. ನರಸಿಂಹಮೂರ್ತಿ ಮಾಹಿತಿ ನೀಡಿದರು.

ಅಭಿವೃದ್ಧಿಗೆ ಅವಕಾಶ : ನುಡಿ 0.6 ತಂತ್ರಾಂಶ ನವೆಂಬರ್‌ ಅಂತ್ಯದೊಳಗೆ ಸಾರ್ವಜನಿಕರ ಉಪಯೋಗಕ್ಕೆ ಬಿಡಲಾಗುತ್ತದೆ. ತಂತ್ರಾಂಶ ಸಂಪೂರ್ಣ ಪ್ರಮಾಣದಲ್ಲಿ ಸಿದಟಛಿವಾಗಿದ್ದು, ಪರೀಕ್ಷಾರ್ಥ ಬಳಕೆ ನಡೆಯುತ್ತಿದೆ. ಕರ್ನಾಟಕ ಗಣಕ ಪರಿಷತ್ತುವಿನ ಅಧಿಕೃತ ಜಾಲತಾಣದಲ್ಲಿ ನುಡಿ 0.6 ತಂತ್ರಾಂಶ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದನ್ನು ಇನ್ನಷ್ಟು ಉನ್ನತೀಕರಿಸಬೇಕು ಎಂದು ಕಂಡುಬಂದರೆ ಸಾರ್ವಜನಿಕರು ಸಲಹೆ ನೀಡಬಹುದು. ತಂತ್ರಾಂಶದ ಕುರಿತು ಅಧ್ಯಯನ ಮಾಡಿರುವವರು ಅಥವಾ ಬಲ್ಲವರು ತಾವಾಗಿಯೇ ಉನ್ನತೀಕರಿಸಬಹುದು. ಇದಕ್ಕಾಗಿ ಪರಿಷತ್‌ನ ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯ ನಂತರ ಪರಿಷತ್‌ನ ಪರವಾನಗಿ ಪಡೆದು ಉನ್ನತೀಕರಿಸಿ, ನೀಡಬಹುದು. ಸೂಕ್ತವೆನಿಸಿದರೆ ಅದನ್ನು ಅಧಿಕೃತವಾಗಿ ಅಪ್‌ಡೇಟ್‌ ಮಾಡಲಾಗುತ್ತದೆ ಎಂದು ಗಣಕ ಪರಿಷತ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ದೂರುಗಳಿಗೂ ಪರಿಹಾರ: ನುಡಿ ತಂತ್ರಾಂಶ ಬಳಕೆ ಸೇರಿದಂತೆ ಯಾವುದೇ ಲೋಪದೋಷವಿದ್ದರೂ ಪರಿಷತ್‌ಗೆ ದೂರು ನೀಡಬಹುದು. ಪರಿಷತ್‌ನ ಅಧಿಕಾರಿಗಳು ಅದನ್ನು ಕೂಲಂಕಷವಾಗಿ ಪರಿಶೀಲಿಸಿ, ಸಮಸ್ಯೆಗೆ ಪರಿಹಾರ ನೀಡುತ್ತಾರೆ. ಸದ್ಯ ಇರುವ ನುಡಿ 0.5 ತಂತ್ರಾಂಶವನ್ನು ತಿಂಗಳಿಗೆ 6 ಸಾವಿರ ಜನರು ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಪರಿಷತ್‌ನಿಂದ ಸಿಕ್ಕಿದೆ. 0.6 ತಂತ್ರಾಂಶ ಬಂದ ನಂತರ ಹೊಸ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಗಣಕ ಪರಿಷತ್ತು ಮೂಲಕ ಪ್ರಚುರವಾದ ನುಡಿ ತಂತ್ರಾಂಶ ನುಡಿ 0.4, 0.5 ಈಗ 0.6 ಆಗಿ ವಿವಿಧ ಅವಸ್ಥೆಗಳನ್ನು ದಾಟಿ ಹೊಸ ರೂಪ ಪಡೆದಿದೆ. ತಂತ್ರಾಂಶ ಸಂಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದ್ದು, ಅನೇಕ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಉನ್ನತೀಕರಣಗೊಂಡ ತಂತ್ರಾಂಶದಲ್ಲಿ ಹೊಸ ಅವಕಾಶಗಳನ್ನೂ ತುಂಬಲಾಗಿದ್ದು, ನವೆಂಬರ್‌ ಅಂತ್ಯದೊಳಗೆ ಕನ್ನಡಿಗರ ಬಳಕೆಗೆ ಸಿಗಲಿದೆ.

ಟಾಪ್ ನ್ಯೂಸ್

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.