ಶಬರಿಮಲೆ ಆಚಾರಅನುಷ್ಠಾನ ಯಥಾಸ್ಥಿತಿಕಾಯ್ದುಕೊಳ್ಳಲುಮುಂದೆ ಬರಲಿ


Team Udayavani, Nov 1, 2018, 12:52 PM IST

1-november-9.gif

ಪೆರ್ಲ : ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಪ್ರಸಿದ್ಧ ಕ್ಷೇತ್ರ ಶಬರಿಮಲೆಯ ಮೂಲ ಸಂಪ್ರದಾಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಆಚಾರ ಅನುಷ್ಠಾನಗಳನ್ನು ಕಾಪಾಡಲು ಕಾನೂನು ಪರಿಷ್ಕರಣೆ ಮಾಡುವುದರೊಂದಿಗೆ ಕೇಂದ್ರ ಸರಕಾರ ಮುಂದೆ ಬರಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯ ನಿರ್ವಾಹಕ ಅಧ್ಯಕ್ಷ ಕೆ. ಸುಧಾಕರನ್‌ ಆಗ್ರಹಿಸಿದ್ದಾರೆ. ವಿಶ್ವಾಸವನ್ನು ಸಂರಕ್ಷಿಸಿ ವರ್ಗೀಯತೆಯನ್ನು ಹೋಗಲಾಡಿಸುವ ಘೋಷಣ ವಾಕ್ಯದೊಂದಿಗೆ ಕೆಪಿಸಿಸಿ ಆಯೋಜಿಸುವ ವಿಶ್ವಾಸ ಸಂರಕ್ಷಣಾ ಜಾಥದ ಸಂಘಟನಾ ಸಮಿತಿ ರಚನಾ ಸಭೆಯನ್ನು ಉದ್ಘಾಟಿಸಿ ಅವರು ಹೇಳಿದರು.

ಶಬರಿಮಲೆಯಲ್ಲಿ ಆಚಾರ, ಅನುಷ್ಠಾನ ಕಾಪಾಡಬೇಕಿದೆ
ಎಂಟು ಕೋಟಿ ಜನತೆಯ ವಿಶ್ವಾಸಕ್ಕೆ ಧಕ್ಕೆ ತರುವ ರೀತಿಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಆ ತೀರ್ಪಿನ ಮರು ಪರಿಶೀಲನೆ ನಡೆಸುವಲ್ಲಿ ಯಾವುದೇ ಆಡಳಿತ ವ್ಯವಸ್ಥೆಯ ಅನುಕಂಪ ಬೇಕಾಗಿಲ್ಲ. ವಿಶ್ವಾಸದ ವಿಷಯದಲ್ಲಿ ಜನಹಿತ ಕಾಪಾಡಲು ಸಂವಿಧಾನ ವ್ಯವಸ್ಥೆ ಕಲ್ಪಿಸಿದ್ದು ಸುಪ್ರೀಂ ಕೋರ್ಟ್‌ ತೀರ್ಪನ್ನು ಆ ವ್ಯವಸ್ಥೆಯೊಂದಿಗೆ ಮರು ಪರಿಶೀಲಿಸಿ ಈ ಹಿಂದಿನಿಂದ ಕಾಯ್ದುಕೊಂಡು ಬಂದಿರುವ ರೀತಿಯಲ್ಲಿಯೇ ಶಬರಿಮಲೆಯಲ್ಲಿ ಆಚಾರ ಅನುಷ್ಠಾನಗಳನ್ನು ಕಾಪಾಡಬೇಕಾಗಿದೆ ಎಂದು ನುಡಿದರು.

ಪೆರ್ಲ ಸೇವಾ ಸಹಕಾರಿ ಬ್ಯಾಂಕ್‌  ಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆಯನ್ನು ಹಕೀಂ ಕುನ್ನಿಲ್‌ ವಹಿಸಿದರು. ಕೆ.ಪಿ. ಕುಂಞಕೃಷ್ಣನ್‌, ಕೆ. ನೀಲಕಂಠನ್‌, ಪಿ.ಕೆ. ಫೈಸಲ್‌, ಸುಂದರ ಆರಿಕ್ಕಾಡಿ, ಸಿವಿ ಜೇಮ್ಸ್‌, ವಿನೋದ್‌ ಕುಮಾರ್‌ ಪಿಳೈಯಿಲ್ವೀಡ್‌, ಬಾಲಕೃಷ್ಣನ್‌ ಪೆರಿಯ, ಕರುಣ್‌ ತಾಪ್ಪಾ, ಕೆಪಿ ಪ್ರಕಾಶನ್‌, ಗೀತಾ ಕೃಷ್ಣನ್‌, ಕೆ. ಸ್ವಾಮಿ ಕುಟ್ಟಿ, ಉಮ್ಮರ್‌ ಬೋರ್ಕಳ, ಕೆ.ವಾರಿಜಾಕ್ಷನ್‌, ಕೆ. ಖಾಲೀದ್‌, ಸಾಜೀದ್‌ ಮೌವ್ವಾಲ್‌, ಶಾರದಾ ವೈ, ಹರ್ಷಾದ್‌, ಆನಂದ ಮವ್ವಾರ್‌,ನಾಸರ್‌ ಮೊಗ್ರಾಲ್‌, ಮಂಜುನಾಥ ಆಳ್ವ ಮೊದಲಾವರು ಮಾತನಾಡಿದರು. ಸೋಮ ಶೇಖರ್‌ ಶೇಣಿ ಸ್ವಾಗತಿಸಿ ಬಿಎಸ್‌ ಗಾಂಭೀರ ವಂದಿಸಿದರು.

ಇದೇ ಸಂದರ್ಭದಲ್ಲಿ ಸಂಘಟನ ಸಮಿತಿಯನ್ನು ರಚಿಸಲಾಯಿತು. ಸಮಿತಿ ಅಧ್ಯಕ್ಷರಾಗಿ ಸೋಮಶೇಖರ್‌ ಶೇಣಿ, ಸಂಚಾಲಕರಾಗಿ ಸುಂದರ ಆರಿಕ್ಕಾಡಿ, ಹರ್ಷಾದ್‌, ಆನಂದ ಮೌವಾರ್‌, ಕೋಶಾಧಿಕಾರಿಯಾಗಿ ಮಂಜುನಾಥ ಆಳ್ವ ರವರನ್ನು ಆಯ್ಕೆ ಮಾಡಲಾಯಿತು. ನ. 8ರಂದು ಅಪರಾಹ್ನ 3 ಗಂಟೆಗೆ ಪೆರ್ಲದಲ್ಲಿ ಆರಂಭವಾಗುವ ಕೆ. ಸುಧಾಕರನ್‌ ನೇತೃತ್ವದ ಉತ್ತರ ವಲಯ ವಾಹನ ಪ್ರಚಾರ ಜಾಥವನ್ನು ಕೆಪಿಸಿಸಿ ಮಾಜೀ ಅಧ್ಯಕ್ಷ ಎಂ.ಎಂ. ಹಸ್ಸನ್‌ ಉದ್ಘಾಟಿಸಲಿದ್ದು ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ.

ಟಾಪ್ ನ್ಯೂಸ್

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

13-

Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.