ಹಿಂದಿಗೆ ಸೇಲ್ ಆದ ಉಮಿಲ್ !
Team Udayavani, Nov 1, 2018, 3:35 PM IST
ಕೋಸ್ಟಲ್‌ವುಡ್‌ಗೆ ಇದೊಂದು ಸಂಭ್ರಮದ ಕ್ಷಣ. ತುಳು ಸಿನೆಮಾವೊಂದು ಹಿಂದಿ ಭಾಷಿಕರ ಮನಸ್ಸನ್ನು ಗೆದ್ದಿರುವುದರಿಂದ ಇನ್ನು ಮುಂದೆ ತುಳು ಸಿನೆಮಾವೂ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದೆ ಎಂಬುದು ಪಕ್ಕಾ.
ಅಂದಹಾಗೆ, ರಂಜಿತ್ ಸುವರ್ಣ ನಿರ್ದೇಶನದ ‘ಉಮಿಲ್’ ಸಿನೆಮಾ ಈಗ ಹಿಂದಿ ಲೋಕದಲ್ಲಿ ರಾರಾಜಿಸಲು ರೆಡಿಯಾಗಿದೆ. ಹೇಗೆಂದರೆ ಹಿಂದಿಗೆ ಉಮಿಲ್ ಸೇಲ್ ಆಗಿದೆ. ಇದು ತುಳುವಿಗೆ ಒದಗಿದ ಮೊದಲ ಛಾನ್ಸ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ.ಆರ್. ಕೆ. ಸ್ಟುಡಿಯೋದಿಂದ ಬಿಡುಗಡೆಯಾದ ಟೀಸರ್ ಈಗಾಗಲೇ ಲಕ್ಷಾಂತರ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರು ಕೈಚಳಕದ ಇದರ ಹಾಡುಗಳು ಉತ್ತಮ ಹಿಟ್ ಬರೆದಿದೆ. ಚಿತ್ರದ ಟೀಸರ್ ಮತ್ತು ಆಡಿಯೋ ಈ ಸಿನೆಮಾ ಈಗಾಗಲೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಜನಮನವನ್ನು ಗೆದ್ದು ಮುನ್ನಡೆಯುತ್ತಿದೆ. ಈ ಸಿನೆಮಾಕ್ಕೆ ಯುಎ ಸರ್ಟಿಫಿಕೆಟ್ ಲಭಿಸಿದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ತುಳುವಿನಲ್ಲಿ ಇದು ನೂರನೇ ಸಿನೆಮಾ ಆಗಿ ಹೊರ ಬರಲಿದೆ.
ಅಂದಹಾಗೆ, ಕರಾವಳಿಯ ತುಳು ಸಿನೆಮಾ ಅಂಗಳದಲ್ಲಿ ರಂಜಿತ್ ಸುವರ್ಣ ಸಾಕಷ್ಟು ಸಮಯದಿಂದ ದುಡಿದವರು. ಅವರ ಆರಂಭದ ಕತೆ ಕೂಡ ಬಹಳ ವಿಶೇಷವಾಗಿದೆ. ಕೆಲವು ವರ್ಷಗಳ ಹಿಂದೆ ಕ್ಯಾಬ್ ಚಾಲಕನಾಗಿ ದುಡಿಯುತ್ತಿದ್ದ ರಂಜಿತ್‌ಗೆ ಚಿತ್ರರಂಗದ ಕಡೆ ವಿಶೇಷ ಆಕರ್ಷಣೆ ಆಗಲೇ ಇತ್ತು. ಹಾಗಾಗಿ ಅದ್ಯಾವುದೋ ಸಿನೆಮಾವೊಂದಕ್ಕೆ ನಟರು ಮತ್ತು ತಾಂತ್ರಿಕವರ್ಗಕ್ಕೆ ಜನ ಬೇಕಾಗಿದ್ದಾರೆ ಎಂಬ ಜಾಹೀರಾತನ್ನು ಕಂಡ ರಂಜಿತ್ ಒಂದಷ್ಟು ದಿನ ಡ್ರೈವರ್ ಕೆಲಸಕ್ಕೆ ರಜೆ ನೀಡಿ ನೇರವಾಗಿ ಬೆಂಗಳೂರು ಸೇರಿದ್ದರು. ಆದರೆ, ಆ ಜಾಹೀರಾತು ಸುಳ್ಳು ಎಂಬುದು ರಂಜಿತ್‌ಗೆ ಬೆಂಗಳೂರು ತಲುಪಿದ ಅನಂತರವೇ ತಿಳಿದದ್ದು…! ಬಂದ ದಾರಿಗೆ ಸುಂಕವಿಲ್ಲ ಎಂದು ಊರಿನತ್ತ ಮುಖಮಾಡಿದ್ದ ರಂಜಿತ್‌ಗೆ ಅವರ ಸಂಬಂಧಿಯೊಬ್ಬರು ಕರೆ ಮಾಡಿ ‘ಅಚ್ಚು ಮೆಚ್ಚು ಎಂಬ ಕನ್ನಡ ಸಿನೆಮಾಕ್ಕೆ ಸಂಭಾಷಣೆ ಬರೆಯಲು ಹೊಸಬರನ್ನು ಹುಡುಕುತ್ತಿದ್ದಾರೆ, ಟ್ರೈ ಮಾಡು’ ಎಂದು ಹೇಳಿದರು. ಅದರಲ್ಲೇ ಪಾಸ್ ಆದರು.
ಹೀಗೆ ಸಿನೆಮಾರಂಗದ ಜತೆ ನಂಟು ಬೆಳೆಸಿದ ರಂಜಿತ್ ಬಹಳಷ್ಟು ತುಳುಚಿತ್ರಗಳಲ್ಲಿ ಸಂಭಾಷಣೆ, ಸಾಹಿತ್ಯ, ಸಹಾಯಕ ನಿರ್ದೇಶನ, ಸಾಹಸ ನಿರ್ದೇಶನ ಹೀಗೆ ಯಾವುದಾದರೂ ಒಂದು ವಿಭಾಗದಲ್ಲಿ ಕೆಲಸ ಮಾಡಿಕೊಂಡು ಹೆಸರು ಮಾಡಿದವರು. ಚಿತ್ರ ನಿರ್ದೇಶನದ ಬಗ್ಗೆ ತನ್ನದೇ ಆದ ಪರಿಕಲ್ಪನೆಯನ್ನು ಹೊಂದಿರುವ ರಂಜಿತ್ ‘ದೊಂಬರಾಟ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಹೊಸತನ ಕೊಡುವ ಕೆಲಸ ಮಾಡಿದ್ದಾರೆ. ಈಗ ಎರಡನೇ ಪ್ರಯತ್ನ ‘ಉಮಿಲ್’ ಕೋಟಿ ತೂಗುವ ಸಿನೆಮಾವಾಗಿದ್ದು, ವಿಭಿನ್ನ ನೆಲೆಯಲ್ಲಿ ಬಿಡುಗಡೆಗೂ ಮುನ್ನವೇ ಸೌಂಡ್ ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.