![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Nov 1, 2018, 4:29 PM IST
ಪುಣೆ: ಶ್ರೀ ರಾಮಚಂದ್ರಾಪುರ ಮಠ ಹಾಗೂ ಪೂಜ್ಯ ಗುರುವರ್ಯರ ಬಗ್ಗೆ ಅಪಾರವಾದ ಗೌರವ ಹೊಂದಿರುವ ನಾವುಗಳು ಮಠದ ಧಾರ್ಮಿಕ ಪರಂಪರೆಯನ್ನು ನಂಬಿಕೊಂಡು ಬಂದಿದ್ದೇವೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಮಠದ ಹಾಗೂ ಗುರುಗಳ ಬಗ್ಗೆ ವ್ಯವಸ್ಥಿತವಾಗಿ ಷಡ್ಯಂತ್ರಗಳು ಅವಿರತವಾಗಿ ನಡೆಯುತ್ತಾ ಇದೆ. ಇತ್ತೀಚೆಗೆ ಷಡ್ಯಂತ್ರಿಗಳು ಕೊಡುವ ತೊಂದರೆಗಳು ತಾರಕಕ್ಕೇರಿದ ಕಾರಣ ಸುಮ್ಮನೆ ಕೂರದೆ ನಾವೆಲ್ಲ ಒಂದಾಗಿ ವಿರೋಧಿಸಬೇಕಾಗಿದೆ. ಗುರುಗಳಿಗೆ ಹಾಗೂ ಮಠಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಪುಣೆಯಲ್ಲಿರುವ ಶ್ರೀ ಮಠದ ಶಿಷ್ಯವರ್ಗವೆಲ್ಲ ಸೇರಿ ನ್ಯಾಯಕ್ಕಾಗಿ ಒಂದಾಗಿ ಧ್ವನಿಯಾಗಬೇಕಾಗಿದೆ ಎಂದು ರಾಮಚಂದ್ರಾಮಠದ ಪುಣೆ ಘಟಕದ ಅಧ್ಯಕ್ಷ ಮದಂಗಲ್ಲು ಆನಂದ ಭಟ್ ನುಡಿದರು.
ನಿವೃತ್ತ ಸೈನಿಕ ಶಾಮ್ ರಾಜ್ ಎಡನೀರು ಅವರ ನೇತೃತ್ವದಲ್ಲಿ ನಡೆದ ರಾಮಚಂದ್ರಾಪುರ ಮಠದ ಪುಣೆ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುಣೆಯಲ್ಲಿರುವ ಶ್ರೀ ಮಠದ ಶಿಷ್ಯವೃಂದದ ಎಲ್ಲರನ್ನೂ ಸಂಪರ್ಕಿಸಿ ಸಮಾಜಹಿತದ ದೃಷ್ಟಿ ಯಿಂದ ಅನ್ಯಾಯದ ವಿರುದ್ಧ ಹೋರಾಡಬೇಕಿದೆ ಎಂದು ಅವರು ನುಡಿದರು.
ನಿವೃತ್ತ ಸೈನಿಕ ಶಾಮ್‌ರಾಜ್ ಎಡನೀರು, ಪುಣೆ ಘಟಕದ ಉಪಾಧ್ಯಕ್ಷರಾದ ಉದಯ ಕುಮಾರ್ ಕೊಡಕ್ಕಲು, ಮದಂಗಲ್ಲು ಅಶೋಕ್ ಭಟ್, ಕಾರ್ಯದರ್ಶಿ ಶ್ಯಾಮ್ ಸುಂದರ್ ವಳಕ್ಕುಂಜ, ಕೋಶಾಧಿಕಾರಿ ಗಣೇಶ್ ಪ್ರಸಾದ್ ಕೊಣಿಲ, ಮಹಿಳಾ ಕಾರ್ಯಾಧ್ಯಕ್ಷೆ ಮಲ್ಲಿಕಾ ಶ್ಯಾಮ್ ಸುಂದರ್ ವಳಕ್ಕುಂಜ, ಹೇಮಾ ಆನಂದ ಭಟ್ ಉಪಸ್ಥಿತರಿದ್ದರು. ಪುಣೆಯ ಹವ್ಯಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.